AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಸೆಲ್​ನಲ್ಲಿ ಶವ ಬಂದ ಪ್ರಕರಣ, ಕೊಲೆಗೆ ಕಾರಣ ಬಹಿರಂಗ, ಆರೋಪಿಯ ಬಂಧನ

ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪಶ್ಚಿಮ ಗೋದಾವರಿ ಜಿಲ್ಲೆಯ ಯಂಡಗೊಂದಿ ಮಂಡಲದಲ್ಲಿ ಮೃತದೇಹ ಪಾರ್ಸೆಲ್ ಪ್ರಕರಣದಲ್ಲಿ ದಿನಕ್ಕೊಂದು ಶಾಕಿಂಗ್ ವಿಚಾರಗಳು ಬೆಳಕಿಗೆ ಬರುತ್ತಿವೆ. ಶ್ರೀಧರ್ ವರ್ಮಾ ಅಲಿಯಾಸ್ ಸಿದ್ಧಾರ್ ವರ್ಮಾ ಆಸ್ತಿಗಾಗಿ ಈ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಎಲೆಕ್ಟ್ರಿಕಲ್ ಉಪಕರಣಗಳು ಇರಬೇಕಿದ್ದ ಪಾರ್ಸೆಲ್​ನಲ್ಲಿ ಶವ ಪತ್ತೆಯಾಗಿತ್ತು.

ಪಾರ್ಸೆಲ್​ನಲ್ಲಿ ಶವ ಬಂದ ಪ್ರಕರಣ, ಕೊಲೆಗೆ ಕಾರಣ ಬಹಿರಂಗ, ಆರೋಪಿಯ ಬಂಧನ
ಆರೋಪಿ ಶ್ರೀಧರ್ ವರ್ಮಾImage Credit source: Etv Bharat
Follow us
ನಯನಾ ರಾಜೀವ್
|

Updated on:Dec 27, 2024 | 12:48 PM

ಪಾರ್ಸೆಲ್​ನಲ್ಲಿ ಶವವಿಟ್ಟು ಕಳುಹಿಸಿದ್ದ ಆರೋಪಿ ಶ್ರೀಧರ್​ ವರ್ಮಾ ಎಂಬಾತನನ್ನು ಪಶ್ಚಿಮ ಗೋದಾವರಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ವರ್ಮಾ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಭೀಮಾವರಂಗೆ ಕರೆತರಲಾಗಿದೆ. ಈತ ತುಳಸಿಯವರ ಮೈದುನ.

ಡಿಸೆಂಬರ್ 19 ರಂದು ಉಂಡಿ ಮಂಡಲದ ಯಂಡಗಂಡಿ ಗ್ರಾಮದ ನಾಗ ತುಳಸಿ ಎಂಬುವರು ಕ್ಷತ್ರಿಯ ಸೇವಾ ಸಮಿತಿಯಿಂದ ಪಾರ್ಸೆಲ್ ಸ್ವೀಕರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಎಲೆಕ್ಟ್ರಿಕಲ್ ಉಪಕರಣಗಳು ಇರಬೇಕಿದ್ದ ಪಾರ್ಸೆಲ್​ನಲ್ಲಿ ಶವ ಪತ್ತೆಯಾಗಿತ್ತು.

ಮೃತರನ್ನು ಕಲ್ಲ ಮಂಡಲದ ಗಾಂಧಿನಗರ ಗ್ರಾಮದ ನಿವಾಸಿ ಬ್ಯಾರೆ ಪರ್ದಲಯ್ಯ ಎಂದು ಗುರುತಿಸಲಾಗಿದೆ. ಶ್ರೀಧರ್ ವರ್ಮಾ ಮೋಸದ ಜಾಲ ಹೆಣೆದಿದ್ದ, ಆತ ಮೂರು ಮಹಿಳೆಯರನ್ನು ಮದುವೆಯಾಗಿದ್ದ, ಆರೋಪಿ ಮೂರು ಜಿಲ್ಲೆಗಳಲ್ಲಿ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಆತ ಉದ್ದೇಶಪೂರ್ವಕವಾಗಿಯೇ ತುಳಸಿಯವರಿಗೆ ಪಾರ್ಸೆಲ್ ಕಳುಹಿಸಿದ್ದ ಎನ್ನಲಾಗಿದೆ. ಆಸ್ತಿಗಾಗಿ ಈ ಕೃತ್ಯವೆಸಗಿದ್ದಾನೆ. ಕೆಲಸವಿದೆ ಎಂದು ಕಾರ್ಮಿಕನನ್ನು ನಂಬಿಸಿ ಕರೆದೊಯ್ದು ನಡುರಸ್ತೆಯಲ್ಲಿ ಕಾರಿನಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ತುಳಸಿ ಪಾಲು ಜತೆಗೆ ತಮ್ಮ ಪಾಲಿಗೆ ಬರಬೇಕಾದ ಆಸ್ತಿಯನ್ನು ಪಡೆಯಲು ಶ್ರೀಧರ್ ಮಾಸ್ಟರ್​ ಪ್ಲ್ಯಾನ್ ಮಾಡಿದ್ದ. ಇದರಲ್ಲಿ ತುಳಸಿ ಸಹೋದರಿ ರೇವತಿಯದ್ದೂ ಕೈವಾಡವಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: ಆರ್ಡರ್ ಮಾಡಿದ್ದು ಎಲೆಕ್ಟ್ರಾನಿಕ್​ ಉಪಕರಣಗಳು ಬಂದಿದ್ದು ಶವ, ಪಾರ್ಸೆಲ್ ನೋಡಿ ಬೆಚ್ಚಿಬಿದ್ದ ಮಹಿಳೆ

ಪಾರ್ಸೆಲ್​ನಲ್ಲಿದ್ದ ಶವ ನೋಡಿ ಓಡಿ ಬಂದು ತಮ್ಮ ಮನೆಯಲ್ಲಿ ತುಳಸಿ ಆಶ್ರಯ ಪಡೆಯಬಹುದು ಆಗ ಬೆದರಿಸಿ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದ್ದ. ಮೃತದೇಹ ನೋಡಿ ಎಲ್ಲರೂ ಜೋರಾಗಿ ಕೂಗಿಕೊಂಡು ಬಂದರು. ಪೊಲೀಸರಿಗೆ ಕರೆ ಮಾಡಿದೆ. ಅಷ್ಟರಲ್ಲಿ ಪೊಲೀಸರ ಪ್ರವೇಶದಿಂದ ಎಲ್ಲವೂ ಸ್ತಬ್ಧವಾಗಿತ್ತು.

ಶ್ರೀಧರವರ್ಮನನ್ನು ಪ್ರೀತಿಸಿ ಮದುವೆಯಾಗಿದ್ದ ರೇವತಿಗೆ ಎಲ್ಲವೂ ಗೊತ್ತಿತ್ತು ಎಂದು ವರದಿಯಾಗಿದೆ. ರೇವತಿಗಿಂತ ಮೊದಲೇ ರಾಣಿಯನ್ನು ಮದುವೆಯಾಗಿರುವುದು ದೃಢಪಟ್ಟಿದೆ. ಇವರಿಗೆ ವಿಜಯಲಕ್ಷ್ಮಿ ಎಂಬ ಯುವತಿಯೂ ಸಹಕರಿಸಿದ್ದು ತನಿಖೆಯಲ್ಲಿ ಬಯಲಾಗಿದೆ.

ಕ್ರಿಮಿನಲ್ ದಾಖಲೆ ಹೊಂದಿರುವ ಶ್ರೀಧರ್ ವರ್ಮಾ ಅವರ ಇನ್ನೂ ಹಲವು ಅಪರಾಧಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನುತ್ತವೆ ಪೊಲೀಸ್ ಮೂಲಗಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:47 pm, Fri, 27 December 24

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ