Manmohan Singh: ಮನಮೋಹನ್ ಸಿಂಗ್ಗೆ ತಮ್ಮ ಮಾರುತಿ 800 ಕಾರೆಂದರೆ ಬಲು ಪ್ರೀತಿ: ಯುಪಿ ಸಚಿವ ಅಸೀಮ್ ಅರುಣ್
ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾದ ನಂತರವೂ ಸರಳತೆಯನ್ನು ಇಷ್ಟಪಡುವ ವ್ಯಕ್ತಿಯಾಗಿದ್ದರು. ಹೆಚ್ಚಿನ ಮಟ್ಟಿಗೆ, ಅವರು ಮಧ್ಯಮ ವರ್ಗದ ವ್ಯಕ್ತಿ ಎಂದು ಪರಿಗಣಿಸಿ ಮುಂದುವರಿಯುತ್ತಿದ್ದರು.ಇನ್ನು ಯುಪಿ ಸರ್ಕಾರದಲ್ಲಿ ಸಚಿವರಾಗಿರುವ ಮಾಜಿ ಐಪಿಎಸ್ ಅಸೀಮ್ ಅರುಣ್ ಮೂರು ವರ್ಷಗಳ ಕಾಲ ಡಾ.ಮನಮೋಹನ್ ಸಿಂಗ್ ಅವರ ಅಂಗರಕ್ಷಕರಾಗಿದ್ದರು. 2004 ರಿಂದ ಸುಮಾರು ಮೂರು ವರ್ಷಗಳ ಕಾಲ ನಾನು ಡಾ. ಮನಮೋಹನ್ ಸಿಂಗ್ ಅವರ ಬಾಡಿ ಗಾರ್ಡ್ ಆಗಿದ್ದೆ ಎಂದು ಅಸಿಮ್ ಬರೆದಿದ್ದಾರೆ.
ಉತ್ತರ ಪ್ರದೇಶದ ಯೋಗಿ ಸರ್ಕಾರದ ಸಚಿವ ಅಸೀಮ್ ಅರುಣ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಸೀಮ್ ಅರುಣ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭದ್ರತಾ ಮುಖ್ಯಸ್ಥರಾಗಿದ್ದರು. ಅವರು 2004 ಮತ್ತು 2008 ರ ನಡುವೆ 22 ಜನರ ಕಮಾಂಡೋ ತಂಡದ ಭಾಗವಾಗಿದ್ದರು.
ಯೋಗಿ ಸರ್ಕಾರದ ಸಚಿವ ಅಸೀಮ್ ಅರುಣ್ ಅವರು 2004 ರಿಂದ ಸುಮಾರು ಮೂರು ವರ್ಷಗಳ ಕಾಲ ನಾನು ಅವರ ಬಾಡಿ ಗಾರ್ಡ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಎಸ್‌ಪಿಜಿಯಲ್ಲಿ ಪ್ರಧಾನ ಮಂತ್ರಿಯ ಭದ್ರತೆಯ ಆಂತರಿಕ ವಲಯವಿದೆ – ಕ್ಲೋಸ್ ಪ್ರೊಟೆಕ್ಷನ್ ಟೀಮ್ ಅನ್ನು ಮುನ್ನಡೆಸಲು ನನಗೆ ಅವಕಾಶ ಸಿಕ್ಕಿತ್ತು. ಅವರಿಗೆ ನೆರಳಾಗಿ ನಿಲ್ಲುವ ಜವಾಬ್ದಾರಿ ನನ್ನದಾಗಿತ್ತು.
ಡಾ. ಮನಮೋಹನ್ ಸಿಂಗ್ ಅವರ ಬಳಿ ಇದ್ದ ಏಕೈಕ ಕಾರು ಮಾರುತಿ 800 ಆಗಿತ್ತು. ಇದು ಪಿಎಂ ಹೌಸ್ ಎದುರು ಮಿನುಗುತ್ತಿರುವ ಕಪ್ಪು ಬಿಎಂಡಬ್ಲ್ಯೂ ಕಾರಿನ ಹಿಂಭಾಗ ನಿಂತಿತ್ತು. ಮನಮೋಹನ್ ಸಿಂಗ್ ಭದ್ರತಾ ದೃಷ್ಟಿಯಿಂದ ದೊಡ್ಡ ಕಾರಿನಲ್ಲಿ ಪ್ರಯಾಣಿಸುವಾಗಲೆಲ್ಲಾ ನನಗೆ ಈ ಕಾರಿನಲ್ಲಿ ಪ್ರಯಾಣಿಸಲು ಇಷ್ಟವಿಲ್ಲ, ಆದರೆ ಭದ್ರತಾ ದೃಷ್ಟಿಯಿಂದ ಅನಿವಾರ್ಯ, ಮಾರುತಿ ನನ್ನ ಕಾರೆಂದು ಹೇಳುತ್ತಿದ್ದರು ಎಂದು ಅಸೀಮ್ ನೆನಪಿಸಿಕೊಂಡಿದ್ದಾರೆ.
ಮತ್ತಷ್ಟು ಒದಿ: Manmohan Singh: ಮನಮೋಹನ್ ಸಿಂಗ್ ಕುಟುಂಬದಲ್ಲಿ ಯಾರ್ಯಾರಿದ್ದಾರೆ, ವೃತ್ತಿ ಏನು? ಇಲ್ಲಿದೆ ಮಾಹಿತಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ರಾತ್ರಿ 8.30ರ ಸುಮಾರಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. 2004 ರಿಂದ 2014 ರವರೆಗೆ ಎರಡು ಅವಧಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಮುನ್ನಡೆಸಿದ್ದ ಮನಮೋಹನ್ ಸಿಂಗ್ ಅವರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
2019ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಆಗ ಕೇಂದ್ರ ಗೃಹ ಸಚಿವಾಲಯವು, ಎಲ್ಲಾ ಏಜೆನ್ಸಿಗಳಿಂದ ಮಾಹಿತಿ ಪಡೆದು ನಿಯಮಿತ ಮೌಲ್ಯಮಾಪನ ನಡೆಸಿದ ನಂತರ ಮನಮೋಹನ್ ಸಿಂಗ್ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿತ್ತು.
ಇದಕ್ಕೂ ಮುನ್ನ ಮಾಜಿ ಪ್ರಧಾನಿಗಳಾದ ಎಚ್‌ಡಿ ದೇವೇಗೌಡ ಮತ್ತು ವಿಪಿ ಸಿಂಗ್ ಅವರ ಭದ್ರತೆಯನ್ನು ತೆಗೆದುಹಾಕಲಾಗಿತ್ತು. ಡಾ. ಮನಮೋಹನ್ ಸಿಂಗ್ ಅವರ ಪುತ್ರಿಯರು ಎಸ್‌ಪಿಜಿ ಭದ್ರತೆಯಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದರು. ಅವರ ಎಸ್‌ಪಿಜಿ ರಕ್ಷಣೆಯನ್ನು ಹಿಂತೆಗೆದುಕೊಂಡಾಗ ಡಾ ಸಿಂಗ್ ಪ್ರತಿಕ್ರಿಯಿಸಿರಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ