Shocking Video: ಪೊಲೀಸ್ ಎದುರೇ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ; ವಿಡಿಯೋ ವೈರಲ್

Viral Video | ಹೆಚ್ಚು ಬಾಡಿಗೆ ಕೇಳಿದನೆಂದು ಕೋಪಗೊಂಡ ಮಹಿಳೆ ಆಟೋ ಚಾಲಕನ ಶರ್ಟ್​ ಹಿಡಿದು ಎಳೆದಾಡಿದ್ದಾಳೆ. ಆತ ತಪ್ಪಿಸಿಕೊಳ್ಳಲು ನೋಡಿದಾಗ ಪೊಲೀಸ್ ಎದುರಲ್ಲೇ ಚಪ್ಪಲಿಯಿಂದ ಆ ಆಟೋ ಚಾಲಕನಿಗೆ ಹೊಡೆದಿದ್ದಾಳೆ.

Shocking Video: ಪೊಲೀಸ್ ಎದುರೇ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ; ವಿಡಿಯೋ ವೈರಲ್
ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 23, 2021 | 6:24 PM

ಲಕ್ನೋ: ಕೆಲವು ದಿನಗಳ ಹಿಂದಷ್ಟೇ ಲಕ್ನೋದಲ್ಲಿ ನಡುರಸ್ತೆಯಲ್ಲೇ ಕ್ಯಾಬ್ ಚಾಲಕನಿಗೆ ಯುವತಿಯೊಬ್ಬಳು ಥಳಿಸಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಟ್ರಾಫಿಕ್ ಸಿಗ್ನಲ್​ನಲ್ಲಿ ಕ್ಯಾಬ್ ಚಾಲಕನನ್ನು ಕೆಳಗೆ ಇಳಿಸಿ, ಆತನಿಗೆ ಒದ್ದು, ಕೊರಳಪಟ್ಟಿ ಹಿಡಿದು ಕಪಾಲಕ್ಕೆ ಬಾರಿಸಿರುವ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಲಕ್ನೋದ ಆಟೋ ಚಾಲಕನಿಗೆ ರಸ್ತೆ ಮಧ್ಯದಲ್ಲೇ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ಆ. 21ರಂದು ಈ ಘಟನೆ ನಡೆದಿದ್ದು, ಆಟೋದಲ್ಲಿ ಪ್ರಯಾಣಿಸಿದ ಬಳಿಕ ಹಣದ ವಿಚಾರಕ್ಕೆ ಮಹಿಳೆ ಮತ್ತು ಆಟೋ ಚಾಲಕನ ನಡುವೆ ಜಗಳವಾಗಿದೆ. ಮೀಟರ್​ಗಿಂತ ಹೆಚ್ಚು ಹಣ ಕೇಳುತ್ತಿದ್ದಾನೆ ಎಂದು ಆ ಮಹಿಳೆ ಜೋರಾಗಿ ಕಿರುಚಾಡಿ, ಜಗಳವಾಡಿದ್ದಾಳೆ. ಬಳಿಕ, ತನ್ನ ಚಪ್ಪಲಿ ಬಿಚ್ಚಿ ಅದರಲ್ಲೇ ಆತನಿಗೆ ಹೊಡೆದಿದ್ದಾಳೆ. ಇದನ್ನು ಸುತ್ತಮುತ್ತಲಿದ್ದವರು ವಿಡಿಯೋ ಮಾಡಿಕೊಂಡಿದ್ದಾರೆ. ಲಕ್ನೋದ ತೆದಿ ಪುಲಿಯ ಮೇನ್ ಚೌಕ್​ದಲ್ಲಿ ಈ ಘಟನೆ ನಡೆದಿದೆ.

ಮಹಿಳೆಯ ಗಲಾಟೆ ಹೆಚ್ಚಾಗುತ್ತಿದ್ದಂತೆ ಆ ಆಟೋ ಚಾಲಕ ಅಲ್ಲೇ ಇದ್ದ ಪೊಲೀಸರ ಮೊರೆ ಹೋಗಿದ್ದಾನೆ. ಈ ಗಲಾಟೆಯನ್ನು ಸರಿಪಡಿಸುವಂತೆ ಆ ಪೊಲೀಸ್ ಬಳಿ ಆತ ಮನವಿ ಮಾಡಿದ್ದಾನೆ. ಆ ಮಹಿಳೆಯದೇ ತಪ್ಪು ಎಂದು ವಾದಿಸಿದ್ದಾನೆ. ಇದರಿಂದ ಕೋಪಗೊಂಡ ಆ ಮಹಿಳೆ ಆತನ ಶರ್ಟ್​ ಹಿಡಿದು ಎಳೆದಾಡಿದ್ದಾಳೆ. ಆತ ತಪ್ಪಿಸಿಕೊಳ್ಳಲು ನೋಡಿದಾಗ ಪೊಲೀಸ್ ಎದುರಲ್ಲೇ ಚಪ್ಪಲಿ ಬಿಚ್ಚಿ ಆ ಆಟೋ ಚಾಲಕನಿಗೆ ಹೊಡೆದಿದ್ದಾಳೆ. ಈ ಜಗಳ ತಾರಕ್ಕೇರಿದ ನಂತರ ಪೊಲೀಸ್ ಬಂದು ಇಬ್ಬರಿಗೂ ಜೋರು ಮಾಡಿದ್ದಾರೆ.

ಗಂಡ-ಹೆಂಡತಿ ಇಬ್ಬರೂ ಆಟೋದಲ್ಲಿ ಪ್ರಯಾಣ ಮಾಡಿದ್ದರು. ಆದರೆ, ಇಳಿದ ಬಳಿಕ ಚಾಲಕ ಹೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಗಲಾಟೆ ಮಾಡಿದ್ದರು. ಇದರಿಂದ ಜಗಳ ಉಂಟಾಗಿತ್ತು. ಈ ಗಲಾಟೆ ನೋಡಲು ಸುತ್ತಲೂ ಸಾಕಷ್ಟು ಜನರು ಸೇರಿದ್ದರು. ಆಗ ಪೊಲೀಸ್ ಎದುರಲ್ಲೇ ಆ ಮಹಿಳೆ ಚಪ್ಪಲಿಯಿಂದ ಆಟೋ ಚಾಲಕನಿಗೆ ಹೊಡೆದಿದ್ದಾಳೆ.

ಇದನ್ನೂ ಓದಿ: Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

ಕ್ಯಾಬ್ ಚಾಲಕನ ಕೆನ್ನೆಗೆ ಹೊಡೆದ ಲಕ್ನೋ ಯುವತಿ ವಿರುದ್ಧ ಕೇಸ್ ದಾಖಲು; ಟ್ವಿಟ್ಟರ್​ನಲ್ಲಿ ಹೊಸ ಅಭಿಯಾನ ಶುರು

(Lucknow Woman Slaps Auto Driver Beats Him With Slippers in front of Police Video Goes Viral)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ