ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಮದನ್​ ಕುಮಾರ್​
|

Updated on:Dec 26, 2024 | 3:40 PM

ಹತ್ತಾರು ಡ್ರಾಮಾ ಮಾಡುತ್ತಾರೆ ಎಂಬ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ಅವರನ್ನು ಕಂಡರೆ ರಜತ್ ಸಿಡಿದು ಬೀಳುತ್ತಾರೆ. ನಾಮಿನೇಷನ್ ಮತ್ತು ಕಳಪೆ ಯಾರು ಎಂಬುದನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಚೈತ್ರಾ ಹೆಸರನ್ನು ರಜತ್ ತೆಗೆದುಕೊಳ್ಳುತ್ತಾರೆ. ಈ ಬಾರಿ ಬಾಟಲಿಯಿಂದ ಹೊಡೆಯುವ ಮೂಲಕ ನಾಮಿನೇಷನ್ ಮಾಡಿದ್ದಾರೆ.

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್​ ಮನೆಯಲ್ಲಿ ಇರಲು ಅರ್ಹರಲ್ಲ ಎಂದು ರಜತ್ ಹೇಳಿದ್ದಾರೆ. ಅದಕ್ಕೆ ಅವರು ಸೂಕ್ತ ಕಾರಣ ಕೂಡ ನೀಡಿದ್ದಾರೆ. ಈ ಸಂದರ್ಭದ ಪ್ರೋಮೋ ಇಲ್ಲಿದೆ. ವೈಲ್ಡ್ ಕಾರ್ಡ್​ ಮೂಲಕ ದೊಡ್ಮನೆಗೆ ಬಂದ ದಿನದಿಂದಲೂ ಚೈತ್ರಾ ವಿರುದ್ಧ ರಜತ್ ಗುಡುಗುತ್ತಿದ್ದಾರೆ. ಫಿನಾಲೆ ಸಮೀಪಿಸುವಾಗಲೂ ಅವರು ಚೈತ್ರಾನ ಟಾರ್ಗೆಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 26, 2024 03:39 PM