ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ

ಮಂಜುನಾಥ ಸಿ.
|

Updated on:Dec 27, 2024 | 12:24 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರ ಈ ವಾರದಲ್ಲಿ ಬಿಗ್​ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಮಾಡಲಾಗಿದೆ. ಸ್ಪರ್ಧಿಗಳು ರೆಸಾರ್ಟ್​ನ ಅತಿಥಿಗಳಂತೆ ಒಮ್ಮೆ ಸಿಬ್ಬಂದಿಯಂತೆ ಒಮ್ಮೆ ಪಾತ್ರ ಬದಲಾಯಿಸಿ ಇದ್ದರು. ವಾರದ ಅಂತ್ಯದ ವೇಳೆ ಕಳಪೆ-ಉತ್ತಮ ಮತ ಚಲಾಯಿಸುವಾಗ ಹನುಮಂತನನ್ನು ಕಳಪೆ ಎನ್ನಲಾಗಿದೆ. ಮನೆಯ ಬಹುತೇಕ ಸದಸ್ಯರು ಹನುಮಂತನಿಗೆ ಕಳಪೆ ಪಟ್ಟ ನೀಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಈ ವಾರ ರೆಸಾರ್ಟ್ ಟಾಸ್ಕ್ ಆಡಿಸಲಾಗಿದೆ. ಮನೆ ಮಂದಿಯೆಲ್ಲ ಬಹಳ ಕಷ್ಟಪಟ್ಟು ಟಾಸ್ಕ್ ಆಡಿದ್ದಾರೆ. ಎರಡು ತಂಡಗಳವರು ಟಾಸ್ಕ್​ ಅನ್ನು ಸಾಧ್ಯವಾದಷ್ಟು ಚೆನ್ನಾಗಿಯೇ ಆಡಿದ್ದಾರೆ. ಆದರೆ ವಾರದ ಅಂತ್ಯದಲ್ಲಿ ಕಳಪೆ-ಉತ್ತಮ ನೀಡುವ ಸಮಯ ಬಂದಾಗ ಮನೆ ಮಂದಿಯೆಲ್ಲ ಒಕ್ಕೂರಿಲಿನಿಂದ ಹನುಮಂತನಿಗೆ ಕಳಪೆ ಕೊಟ್ಟಿದ್ದಾರೆ. ರೆಸಾರ್ಟ್ ಟಾಸ್ಕ್​ನಲ್ಲಿ ಹನುಮಂತು ಶುಚಿತ್ವ ಮೇಂಟೇನ್ ಮಾಡಲಿಲ್ಲ ಎಂದು ಅವನದ್ದೇ ತಂಡದವರು ಹನುಮಂತನಿಗೆ ಕಳಪೆ ಕೊಟ್ಟಿದ್ದಾರೆ. ಕಳಪೆಯನ್ನು ಖುಷಿಯಿಂದಲೇ ಸ್ವೀಕಾರ ಮಾಡಿದ ಹನುಮಂತು, ಇದರಿಂದ ನಾನು ಕುಗ್ಗುವುದಿಲ್ಲ ಎಂದು ಹೇಳಿ ಖುಷಿಯಿಂದಲೇ ಜೈಲು ಸೇರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 27, 2024 12:22 PM