ಹುಬ್ಬಳ್ಳಿಯಲ್ಲಿದ್ದಾರೆ ಡಾ. ಮನಮೋಹನ್ ಸಿಂಗ್ ಹತ್ತಿರದ ಸಂಬಂಧಿಗಳು
ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ನಮ್ಮನ್ನು ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಡಾ ಸಿಂಗ್, ನಿನ್ನೆ(ಡಿಸೆಂಬರ್ 26) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕ ಸುಧಾರಣೆಕಾರರು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇನ್ನು ಮನಮೋಹನ್ ಸಿಂಗ್ ಅವರ ಸಂಬಂಧಿಕರು ಹುಬ್ಬಳ್ಳಿಯಲ್ಲಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿ, ಡಿಸೆಂಬರ್ 27): ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಸಂಬಂಧಿಕರು ಹುಬ್ಬಳ್ಳಿಯಲ್ಲಿ ಇದ್ದಾರೆ. ಈ ವಿಚಾರ ಇಲ್ಲಿಯವರೆಗೂ ಯಾರಿಗೂ ಗೊತ್ತಿರಲಿಲ್ಲ. ಆದ್ರೆ, ನಿನ್ನೆ (ಡಿಸೆಂಬರ್ 26) ಡಾ. ಸಿಂಗ್ ಅವರು ನಿಧನದ ಬಳಿಕ ಅವರ ಸಂಬಂಧಿಕರು ಹುಬ್ಬಳ್ಳಿಯಲ್ಲಿದ್ದಾರೆ ಎನ್ನುವುದು ಗೊತ್ತಾಗಿದೆ. ಮನಮೋಹನ್ ಸಿಂಗ್ ಹೆಂಡತಿಯ ತಂಗಿ ಹರಪ್ರೀತ್ ಕೌರ್ ಮಕ್ಕಳು ಹುಬ್ಬಳ್ಳಿಯಲ್ಲಿದ್ದು. ಇದೀಗ ಅವರು ಮನಮೋಹನ್ ಸಿಂಗ್ ನಿಧನಕ್ಕೆ ಸಂತಾಪದ ಮಾತುಗಳನ್ನಾಡಿದ್ದಾರೆ. ಮನಮೋಹನ್ ಸಿಂಗ್ ಹೆಂಡತಿಯ ತಂಗಿ ಹರಪ್ರೀತ್ ಕೌರ್ ಪುತ್ರ ಪುತ್ರ ಮನಮಿತ್ ಕೊಯ್ಲಿ ಪ್ರತಿಕ್ರಿಯಿಸಿ, ಮನಮೋಹನ್ ಸಿಂಗ್ ಅಗಲಿಕೆ ಅತ್ಯಂತ ನೋವು ತಂದಿದೆ. ನಮಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ನಷ್ಟವಾಗಿದೆ.
ಅವರು ಆರ್ಥಿಕ ತಜ್ಞ. ಬಹಳ ಬುದ್ಧಿವಂತ ಮನುಷ್ಯ ಎಂದು ನೆನಪು ಮಾಡಿಕೊಂಡರು.
Latest Videos