ಬಿಗ್ ಬಾಸ್ ಕ್ಯಾಮೆರಾದಲ್ಲಿ ಸೆರೆ ಆಯ್ತು ಮೋಸದ ಆಟ; ಭವ್ಯಾ ಮೇಲೆ ಅನುಮಾನ
ಭವ್ಯಾ ಗೌಡ ಅವರು ಈ ವಾರ ಕ್ಯಾಪ್ಟನ್ ಆಗಿದ್ದರು. ಮುಂದಿನ ವಾರಕ್ಕೆ ಯಾರು ಕ್ಯಾಪ್ಟನ್ ಆಗಬೇಕು ಎಂಬುದನ್ನು ತೀರ್ಮಾನಿಸಲು ಟಾಸ್ಕ್ ನೀಡಲಾಗಿದೆ. ಆದರೆ ಈ ಟಾಸ್ಕ್ ನಡೆಯುವಾಗ ಮೋಸ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಟಾಸ್ಕ್ ಮುಗಿದ ಬಳಿಕ ಬಿಗ್ ಬಾಸ್ ಸ್ಪರ್ಧಿಗಳು ಚರ್ಚೆ ಮಾಡಿದ್ದಾರೆ. ರಜತ್ ಅವರು ಭವ್ಯಾ ಮಾಡಿದ್ದೇನು ಎಂಬುದನ್ನು ವಿವರಿಸಿದ್ದಾರೆ.
ಕ್ಯಾಪ್ಟೆನ್ಸಿ ಟಾಸ್ಕ್ ಎಲ್ಲರಿಗೂ ಮುಖ್ಯ. ಹಾಗಂತ ಮೋಸ ಮಾಡಿ ಗೆಲ್ಲುವುದು ಸರಿಯಲ್ಲ. ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಮೋಸ ನಡೆದಿದೆ ಎಂಬ ಅನುಮಾನ ಮೂಡಿದೆ. ಭವ್ಯಾ ಗೌಡ ಬಗ್ಗೆ ರಜತ್, ಐಶ್ವರ್ಯಾ, ಮೋಕ್ಷಿತಾ, ಉಗ್ರಂ ಮಂಜು ಚರ್ಚೆ ಮಾಡಿದ್ದಾರೆ. ಭವ್ಯಾ ಮೋಸ ಮಾಡಿದ್ದನ್ನು ಕಣ್ಣಾರೆ ನೋಡಿದ್ದಾಗಿ ರಜತ್ ಅವರು ಹೇಳಿದ್ದಾರೆ. ಡಿ.27ರ ಸಂಚಿಕೆಯಲ್ಲಿ ಇದರ ಬಗ್ಗೆ ಪೂರ್ತಿ ವಿವರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಪ್ರಿಯಾಂಕ್, ನಲಪಾಡ್ಗೆ ಸೆಷನ್ಸ್ ಕೋರ್ಟ್ಗೆ ಮರು ಅರ್ಜಿ ಸಲ್ಲಿಸಲು ಸೂಚನೆ
ಯೋಗೇಶ್ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: 25 ಜನರ ವಿರುದ್ಧ FIR

