1.5 ಕೋಟಿ ರೂ ವೇತನ ಪಡೆಯುತ್ತಾರೆ ಎನ್ನಲಾಗಿದ್ದ ಅಮಿತಾಭ್ ಅಂಗರಕ್ಷಕ ಜಿತೇಂದ್ರ ಶಿಂಧೆ ವರ್ಗಾವಣೆ

ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್​ಗೆ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿತೇಂದ್ರ ಶಿಂಧೆ, ವಾರ್ಷಿಕ 1.5 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದರು ಎಂದು ವರದಿಯಾಗಿತ್ತು. ಈ ವರದಿಯ ಬೆನ್ನಲ್ಲೇ ಅವರನ್ನು ಬೇರೆ ಠಾಣೆಗೆ ನಿಯೋಜಿಸಿ ಇಲಾಖೆ ಆದೇಶ ಹೊರಡಿಸಿದೆ.

1.5 ಕೋಟಿ ರೂ ವೇತನ ಪಡೆಯುತ್ತಾರೆ ಎನ್ನಲಾಗಿದ್ದ ಅಮಿತಾಭ್ ಅಂಗರಕ್ಷಕ ಜಿತೇಂದ್ರ ಶಿಂಧೆ ವರ್ಗಾವಣೆ
ಅಂಗರಕ್ಷಕರೊಂದಿಗೆ ಅಮಿತಾಭ್ ಬಚ್ಚನ್

ಇಂಡಿಯಾ ಟುಡೇ ವರದಿ ಮಾಡಿದ್ದ ಪ್ರಕಾರ, ಅಮಿತಾಬ್ ಬಚ್ಚನ್ ಅವರ ಪೊಲೀಸ್ ಅಂಗರಕ್ಷಕ ಜಿತೇಂದ್ರ ಶಿಂಧೆ ಅವರು ವರ್ಷಕ್ಕೆ 1.5 ಕೋಟಿ ರೂ.ಗಳನ್ನು ಗಳಿಸುತ್ತಿದ್ದಾರೆ ಎನ್ನಲಾಗಿತ್ತು.ಈಗ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಮುಂಬೈ ಪೊಲೀಸ್ ಇಲಾಖೆಯ ಕಾನ್​ಸ್ಟೇಬಲ್ ಜಿತೇಂದ್ರ ಶಿಂಧೆ, ಅಮಿತಾಬ್ ಬಚ್ಚನ್ ಅವರ ಅಂಗರಕ್ಷಕರಾಗಿ ನೇಮಕಗೊಂಡಿದ್ದಾರೆ ಮತ್ತು ಹಲವಾರು ವರ್ಷಗಳಿಂದ ಅವರ ನೆರಳಿನಂತೆ ಜೊತೆಗಿದ್ದು, ವಾರ್ಷಿಕ 1.5 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎಂಬ ವಿಷಯ ವೈರಲ್ ಆಗಿತ್ತು.

ವರದಿಗಳು ಆನ್‌ಲೈನ್‌ನಲ್ಲಿ ಹೊರಹೊಮ್ಮಿದ ಕೂಡಲೇ, ಮುಂಬೈ ಪೊಲೀಸರು ಈ ಹಣವನ್ನು ಶಿಂಧೆ ಅವರು ಅಮಿತಾಭ್​ರಿಂದ ಗಳಿಸಿದ್ದಾರೆಯ ಅಥವಾ ಬೇರೆಯವರಿಂದ ಗಳಿಸಿದ್ದಾರೆಯೇ ಎಂದು ತನಿಖೆ ನಡೆಸಲು ಆದೇಶಿಸಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಜಿತೇಂದ್ರ ಶಿಂಧೆ ಅವರು ತಮ್ಮ ಭದ್ರತಾ ಸಂಸ್ಥೆಯ ಮೂಲಕ ಇತರ ಸೆಲೆಬ್ರಿಟಿಗಳಿಗೆ ಮತ್ತು ಹೆಸರಾಂತ ವ್ಯಕ್ತಿಗಳಿಗೆ ವೈಯಕ್ತಿಕ ಅಂಗರಕ್ಷಕರನ್ನು ಒದಗಿಸುತ್ತಿದ್ದೇನೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ವರದಿಯ ಪ್ರಕಾರ, ಶಿಂಧೆ ಅವರ ಪತ್ನಿ ಹೆಸರಿನಲ್ಲಿ ಏಜೆನ್ಸಿಯಿದ್ದು, ಅಮಿತಾಭ್ ತಮಗೆ 1.5ಕೋಟಿ ರೂ ಹಣ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಜಿತೇಂದ್ರ ಅವರನ್ನು 15 ದಿನಗಳ ಹಿಂದೆಯೇ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿತೇಂದ್ರ ಶಿಂಧೆ ಅವರು 2015 ರಿಂದ ಬಿಗ್ ಬಿ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅದಾಗ್ಯೂ, ಮುಂಬೈ ಪೊಲೀಸರ ಪ್ರಕಾರ, ಒಬ್ಬ ಪೋಲೀಸರನ್ನು ಐದು ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ನಿಯೋಜಿಸಲಾಗುವುದಿಲ್ಲ. ಅಮಿತಾಬ್ ಬಚ್ಚನ್ X ಶ್ರೇಣಿಯ ಭದ್ರತೆಯನ್ನು ಹೊಂದಿದ್ದು, ಅವರಿಗೆ ಸದಾ ಇಬ್ಬರು ಕಾನ್ಸ್ಟೇಬಲ್​ಗಳನ್ನು ನೇಮಿಸಲಾಗುತ್ತದೆ. ಅದರಲ್ಲಿ ಜಿತೇಂದ್ರ ಶಿಂಧೆ ಕೂಡ ಒಬ್ಬರಾಗಿದ್ದಾರೆ.

ಜಿತೇಂದ್ರ ಯಾವಾಗಲೂ ಬಿಗ್ ಬಿ ಜೊತೆಯಿರುತ್ತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಿಂದ ಹಿಡಿದು ಚಲನಚಿತ್ರದ ಸೆಟ್‌ಗಳವರೆಗೆ, ಜಿತೇಂದ್ರ ಶಿಂಧೆ ಅಮಿತಾಬ್ ಬಚ್ಚನ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗ ವರದಿಯ ಪ್ರಕಾರ, ಜಿತೇಂದ್ರ ಶಿಂಧೆ ಅವರನ್ನು ದಕ್ಷಿಣ ಮುಂಬೈನ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ:

‘ಕೂಲಿನಾಲಿ ಮಾಡಿ ತಾಯಿಯೇ ನನ್ನನ್ನು ಸಾಕಿದ್ದು’; ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಕಣ್ಣೀರಿಟ್ಟ ಸೂರ್ಯಕಾಂತ್​

‘ಅಪ್ಪನ ಹೆಸರು ಗೊತ್ತಾಗಿದ್ದೇ 10ನೇ ಕ್ಲಾಸಲ್ಲಿ; ಸಾಯೋಕಿಂತ ಮುಂಚೆ ಅವ್ರನ್ನ ನೋಡ್ಬೇಕು’: ಮಿಥುನ ರಾಶಿ ವೈಷ್ಣವಿ ಕಣ್ಣೀರು

(Amitabh Bachchan bodyguard Jitendra Shindhe transferred and department conduct internal enquiry on him)

Read Full Article

Click on your DTH Provider to Add TV9 Kannada