Salaar: ಪ್ರಶಾಂತ್ ನೀಲ್‌ರನ್ನು ಗೋಳು ಹೊಯ್ದುಕೊಂಡ ಶ್ರುತಿ ಹಾಸನ್; ಕಾರಣವೇನು?

TV9 Digital Desk

| Edited By: shivaprasad.hs

Updated on: Sep 15, 2021 | 1:50 PM

‘ಸಲಾರ್’ ಚಿತ್ರೀಕರಣದಲ್ಲಿ ಶೃತಿ ಹಾಸನ್ ಖುಷಿಯಿಂದ ತೊಡಗಿಕೊಂಡಿದ್ದಾರೆ. ಈ ವೇಳೆ ನಿರ್ದೇಶಕ ಪ್ರಶಾಂತ್​ ನೀಲ್​ರನ್ನು ಗೋಳುಹೊಯ್ದುಕೊಳ್ಳುವುದು ತನ್ನಿಷ್ಟದ ಕೆಲಸಗಳಲ್ಲೊಂದು ಎಂದು ಅವರು ಬರೆದುಕೊಂಡು ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಸುದ್ದಿ ಮಾಡುತ್ತಿದೆ.

Salaar: ಪ್ರಶಾಂತ್ ನೀಲ್‌ರನ್ನು ಗೋಳು ಹೊಯ್ದುಕೊಂಡ ಶ್ರುತಿ ಹಾಸನ್; ಕಾರಣವೇನು?
ಪ್ರಶಾಂತ್ ನೀಲ್, ಶ್ರುತಿ ಹಾಸನ್ (ಸಂಗ್ರಹ ಚಿತ್ರ)

ಟಾಲಿವುಡ್​ನ ಖ್ಯಾತ ನಟಿ ಶ್ರುತಿ ಹಾಸನ್ ಪ್ರಸ್ತುತ ‘ಸಲಾರ್’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಸೆಟ್​ನಲ್ಲಿರುವ ಚಿತ್ರಗಳನ್ನು, ವಿಡಿಯೊ ತುಣುಕುಗಳನನ್ನು ಅವರು ಆಗಾಗ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ನಿನ್ನೆ (ಸೆಪ್ಟೆಂಬರ್ 14) ಒಂದು ಸ್ಟೋರಿಯೊನ್ನು ಅವರು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಇಷ್ಟದ ಕೆಲಸ ಯಾವುದು ಎಂಬುದನ್ನು ಬರೆದುಕೊಂಡಿದ್ದಾರೆ. ‘ಇಷ್ಟದ ನಿರ್ದೇಶಕರಲ್ಲಿ ಒಬ್ಬರಾಗಿರುವವರಿಗೆ, ಗೋಳು ಹೊಯ್ದುಕೊಳ್ಳುವುದು ನನ್ನಿಷ್ಟದ ಕೆಲಸಗಳಲ್ಲೊಂದು’ ಎಂದು ಬರೆದುಕೊಂಡು ಶ್ರುತಿ ಹಾಸನ್ ಪೋಸ್ಟ್ ಮಾಡಿದ್ದಾರೆ. ಸೆಟ್​ನಲ್ಲಿ ತಮಾಷೆಯಾಗಿ ಕಾಲ ಕಳೆದ ಸಂದರ್ಭದ ಈ ಚಿತ್ರ ಅಭಿಮಾನಿಗಳ ಮನಗೆದ್ದಿದೆ.

ಶ್ರುತಿ ಹಾಸನ್ ಹಂಚಿಕೊಂಡ ವಿಡಿಯೊ ತುಣುಕಿನ ಚಿತ್ರಗಳು:

Prashanth Neel and Shruthi Hassan

ಶೃತಿ ಹಾಸನ್ ಹಂಚಿಕೊಂಡ ಇನ್ಸ್ಟಾಗ್ರಾಂ ಸ್ಟೋರಿ (ಕೃಪೆ: ಶೃತಿ ಹಾಸನ್)

ಸಲಾರ್ ಚಿತ್ರದ ಪಾತ್ರ ಬಳಗವೂ ಹಿರಿದಾಗುತ್ತಾ ಸಾಗಿದೆ. ಇತ್ತೀಚೆಗಷ್ಟೇ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ಚಿತ್ರತಂಡ ಸೇರಿಕೊಂಡಿದ್ದರು. ಅವರ ಮೊದಲ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ರಾಜಮನಾರ್ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ಜಗಪತಿಬಾಬು ಖದರ್ ಲುಕ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿತ್ತು.

ಪ್ರಶಾಂತ್ ನೀಲ್ ತಮ್ಮ ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದ ಕೆಲಸಗಳನ್ನು ಮುಗಿಸಿ, ‘ಸಲಾರ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಸಲಾರ್​’ ಮೇಲೆ ಪ್ರಭಾಸ್​ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2022ರ ಏಪ್ರಿಲ್​ 14ರಂದು ಈ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ಅದೇ ದಿನಾಂಕದಲ್ಲೇ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ತೆರೆಕಾಣಲಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಆದ್ದರಿಂದ ‘ಸಲಾರ್​’ ರಿಲೀಸ್​ ಡೇಟ್​ ಬದಲಾಗುವುದು ಅನಿವಾರ್ಯ ಆಗಿದ್ದು, ಅಭಿಮಾನಿಗಳು ಮತ್ತಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ:

ದುಬಾರಿ ವೆಚ್ಚದ ಮದುವೆಯೆಂದರೆ ಭಯವಾಗುತ್ತದೆ, ಕಾರಣ ನನಗೆ 4 ಮಕ್ಕಳಿದ್ದಾರೆ: ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು ಸೈಫ್ ಮಾತು

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

(Shruthi Hassan says annoying favorite director Prashanth Neel is her favorite thing)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada