ದುಬಾರಿ ವೆಚ್ಚದ ಮದುವೆಯೆಂದರೆ ಭಯವಾಗುತ್ತದೆ, ಕಾರಣ ನನಗೆ 4 ಮಕ್ಕಳಿದ್ದಾರೆ: ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು ಸೈಫ್ ಮಾತು

TV9 Digital Desk

| Edited By: shivaprasad.hs

Updated on:Sep 15, 2021 | 11:16 AM

Saif Ali Khan and Kareena Kapoor: ಕಪಿಲ್ ಶರ್ಮಾ ಶೋದ ನೂತನ ಪ್ರೋಮೋ ಸಖತ್ ಸದ್ದು ಮಾಡುತ್ತಿದೆ. ಅದರಲ್ಲಿ ಸೈಫ್ ಅಲಿ ಖಾನ್ ದುಬಾರಿ ವೆಚ್ಚದ ಮದುವೆಯ ಕುರಿತು ತಮ್ಮ ಆತಂಕವನ್ನು ತಮಾಷೆಯಾಗಿ ಹೊರಹಾಕಿದ್ದಾರೆ. ವಿಡಿಯೊ ನೋಡಿ.

ದುಬಾರಿ ವೆಚ್ಚದ ಮದುವೆಯೆಂದರೆ ಭಯವಾಗುತ್ತದೆ, ಕಾರಣ ನನಗೆ 4 ಮಕ್ಕಳಿದ್ದಾರೆ: ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು ಸೈಫ್ ಮಾತು
ತನ್ನ ಮಕ್ಕಳೊಂದಿಗೆ ಸೈಫ್ ಅಲಿ ಖಾನ್


ಕಪಿಲ್ ಶರ್ಮಾ ಶೋ ಹಲವು ತಮಾಷೆಯ ಸಂಗತಿಗಳಿಗೆ ಸಾಕ್ಷಿಯಾಗುತ್ತದೆ. ಅದರಲ್ಲೂ ತಾರೆಯರ ವೈಯಕ್ತಿಕ ಜೀವನದ ವಿವರಗಳು, ಅವರ ಯೋಚನೆಗಳು ಈ ಶೋನಲ್ಲಿ ಸಖತ್ ಚರ್ಚೆಯಾಗಿ ಸುದ್ದಿಯಾಗುವುದುಂಟು. ಪ್ರಸ್ತುತ ‘ಭೂತ್ ಪೊಲೀಸ್’ ಚಿತ್ರದ ಪ್ರಚಾರದ ಸಮಯದಲ್ಲಿ ಚಿತ್ರತಂಡ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದೆ. ಯಾಮಿ ಗೌತಮ್, ಸೈಫ್ ಅಲಿ ಖಾನ್, ಅರ್ಜುನ್ ಕಪೂರ್ ಹಾಗೂ ಜಾಕ್ವೆಲಿನ್ ಫೆರ್ನಾಂಡಿಸ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಹಾರರ್- ಕಾಮಿಡಿ ಮಾದರಿಯಲ್ಲಿದೆ. ಕಾರ್ಯಕ್ರಮದ ವೇಳೆ, ಯಾಮಿ ಗೌತಮ್ ಹಾಗೂ ಸೈಫ್ ಮದುವೆ ಸಂದರ್ಭದ ವಿಚಾರಗಳು ಚರ್ಚೆಯಾಗಿದ್ದು, ಅದರ ಪ್ರೋಮೋ ಕುತೂಹಲ ಮೂಡಿಸಿದೆ.

ಕನ್ನಡದಲ್ಲೂ ನಟಿಸಿ ಮಿಂಚಿದ್ದ ಯಾಮಿ ಗೌತಮ್ ಪ್ರಸ್ತುತ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮದುವೆ ಆದಿತ್ಯ ಧರ್ ಅವರೊಂದಿಗೆ ಇತ್ತೀಚೆಗೆ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಸುಮಾರು 20 ಜನರಷ್ಟೇ ಭಾಗವಹಿಸಿದ್ದರ ಕುರಿತು ಶೋನಲ್ಲಿ ಚರ್ಚೆಯಾಯಿತು‌. ಈ ವೇಳೆ ಯಾಮಿ ಗೌತಮ್, ಅದು ತನ್ನ ಅಜ್ಜಿಯ ಮಾತಿನಂತೆ, ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ನಡೆಸಲಾಯಿತು. ಆದ್ದರಿಂದ ಸಣ್ಣ ಮಟ್ಟದಲ್ಲಿ‌ ನಡೆಯಿತು ಎಂದ ಹೇಳಿಕೊಂಡರು.

ಈ ವೇಳೆ ಮಧ್ಯಪ್ರವೇಶಿಸಿದ ಸೈಫ್ ತಮ್ಮ‌ಮದುವೆಯ ಬಗ್ಗೆ ಹೇಳಿಕೊಂಡರು. ಸೈಫ್ ಮತ್ತು ಕರೀನಾ 2012ರಲ್ಲಿ ವಿವಾಹವಾದರು. ಸೈಫ್ ಗೆ ಅದು ಎರಡನೇ ಮದುವೆಯಾಗಿತ್ತು. ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲು ಸೈಫ್ ಮತ್ತು ಕರೀನಾ ಯೋಚಿಸಿದ್ದರು. ಆದರೆ ಕೇವಲ‌ ಕಪೂರ್ ಕುಟುಂಬದವರೇ 200 ಜನಕ್ಕಿಂತಲೂ ಹೆಚ್ಚಿದ್ದರು ಎಂದಿದ್ದಾರೆ ಸೈಫ್.

ನಂತರ ಸೈಫ್ ದುಬಾರಿ ಮದುವೆಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ನನಗೆ ಅವುಗಳ‌ ಕುರಿತು ಭಯವಿದೆ. ಕಾರಣ, ನನಗೆ ನಾಲ್ಕು ಜನ ಮಕ್ಕಳಿದ್ದಾರೆ” ಎಂದಿದ್ದಾರೆ ಸೈಫ್. ಇದಕ್ಕೆ ಸೆಟ್​ನಲ್ಲಿರುವ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಚಾನೆಲ್ ಈ ಈ ಪ್ರೋಮೋ ಹಂಚಿಕೊಂಡಿದ್ದು, ವೀಕ್ಷಕರು ಈ ಎಪಿಸೋಡ್ ಗೆ ಕಾಯುತ್ತಿದ್ದಾರೆ.

ಚಾನಲ್ ಹಂಚಿಕೊಂಡಿರುವ ಪ್ರೋಮೋ:

ಸೈಫ್ ಅಲಿ ಖಾನ್ ಹಾಗೂ ಅವರ ಮೊದಲ ಪತ್ನಿ‌ ಅಮೃತಾ ಸಿಂಗ್ ಅವರಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಎಂಬ ಈರ್ವರು ಮಕ್ಕಳಿದ್ದಾರೆ. ಸೈಫ್ ಹಾಗೂ ಕರೀನಾ ಜೋಡಿಗೆ ತೈಮೂರ್ ಅಲಿ ಖಾನ್ ಹಾಗೂ ಜೆಹಾಂಗೀರ್ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ಸೈಫ್ ಎಲ್ಲಾ ಮಕ್ಕಳ ಬೆಳವಣಿಗೆಗೆ ಗಮನ ಕೊಡುತ್ತಿರುವುದರ ಕುರಿತು, ಸೈಫ್ ತಾಯಿ ಶರ್ಮಿಳಾ ಟಾಗೋರ್ ಇತ್ತೀಚೆಗೆ ಮೆಚ್ಚುಗೆ ಸೂಚಿಸಿದ್ದರು. “ಒಬ್ಬ ತಂದೆಯಾಗಿ ಅವನೀಗ ಮಾಗುತ್ತಿದ್ದಾನೆ. ಜೊತೆಗೆ ಓದುವುದು ಮೊದಲಾದ ಒಳ್ಳೆಯ ಅಭ್ಯಾಸಗಳನ್ನೂ ರೂಡಿಸಿಕೊಂಡಿದ್ದಾನೆ.‌ ಚೆನ್ನಾಗಿ ಅಡುಗೆಯನ್ನೂ ಮಾಡಬಲ್ಲ” ಎಂದು ಹೊಗಳಿದ್ದರು.

ಇದನ್ನೂ ಓದಿ:

‘ರಾವಣ್ ಲೀಲ’ ಈಗ ‘ಭವಾಯಿ’ ; ಹೆಸರು ಬದಲಾದ ತಕ್ಷಣ ಸಮಸ್ಯೆ ಪರಿಹಾರವಾಯಿತೇ ಎಂದು ಪ್ರಶ್ನಿಸಿದ ನಟ ಪ್ರತೀಕ್ ಗಾಂಧಿ

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

(In Kapil Sharma Show Saif Ali khan says he is very scared of expensive weddings because he has four children)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada