‘ರಾವಣ್ ಲೀಲ’ ಈಗ ‘ಭವಾಯಿ’ ; ಹೆಸರು ಬದಲಾದ ತಕ್ಷಣ ಸಮಸ್ಯೆ ಪರಿಹಾರವಾಯಿತೇ ಎಂದು ಪ್ರಶ್ನಿಸಿದ ನಟ ಪ್ರತೀಕ್ ಗಾಂಧಿ

TV9 Digital Desk

| Edited By: shivaprasad.hs

Updated on:Sep 15, 2021 | 10:13 AM

Bhavai: ಪ್ರತೀಕ್ ಗಾಂಧಿ ಹಾಗೂ ಐಂದ್ರಿತಾ ರೇ ಅಭಿನಯದ ‘ರಾವಣ್ ಲೀಲಾ’ ಚಿತ್ರದ ಹೆಸರನ್ನು ಬದಲಾಯಿಸಲಾಗಿದೆ. ಈಗ ಚಿತ್ರಕ್ಕೆ ‘ಭವಾಯಿ’ ಎಂದು ಹೆಸರಿಡಲಾಗಿದೆ.

‘ರಾವಣ್ ಲೀಲ’ ಈಗ ‘ಭವಾಯಿ’ ; ಹೆಸರು ಬದಲಾದ ತಕ್ಷಣ ಸಮಸ್ಯೆ ಪರಿಹಾರವಾಯಿತೇ ಎಂದು ಪ್ರಶ್ನಿಸಿದ ನಟ ಪ್ರತೀಕ್ ಗಾಂಧಿ
‘ಭವಾಯಿ’ ಚಿತ್ರದಲ್ಲಿ ಪ್ರತೀಕ್ ಗಾಂಧಿ ಮತ್ತು ಐಂದ್ರಿತಾ ರೇ

‘ಸ್ಕ್ಯಾಮ್ 1992’ ಸೀರೀಸ್ ಮೂಲಕ ಚಿತ್ರ ರಸಿಕರ ಮನೆಮಾತಾದ ಪ್ರತೀಕ್ ಗಾಂಧಿ, ‘ರಾವಣ್ ಲೀಲಾ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಕ್ಕೆ ಸಿದ್ಧರಾಗಿದ್ದರು. ಆದರೆ ಆ ಹೆಸರಿಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಚಿತ್ರದ ಹೆಸರನ್ನು ಬದಲಾಯಿಸಲಾಗಿದೆ. ಚಿತ್ರದ ಹೆಸರು ‘ರಾವಣ್ ಲೀಲಾ’ ಇದ್ದದ್ದು ಈಗ ‘ಭವಾಯಿ’ ಎಂದು ಬದಲಾಗಿದೆ. ವೀಕ್ಷಕರ ಅಭಿಪ್ರಾಯವನ್ನು ಗೌರವಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಮ್ಯೂಸಿಕಲ್- ಡ್ರಾಮಾ ಮಾದರಿಯ ಈ ಚಿತ್ರದಲ್ಲಿ ಐಂದ್ರಿತಾ ರೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

‘ಭವಾಯಿ’ ಚಿತ್ರಕ್ಕೆ ಹಾರ್ದಿಕ್ ಗುಜ್ಜರ್ ನಿರ್ದೇಶನ‌ ಮಾಡಿದ್ದು, ಚಿತ್ರವು ಅಕ್ಟೋಬರ್ 1ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಹೆಸರು ಬದಲಾವಣೆಯಾದ ಕುರಿತು ನಟ ಪ್ರತೀಕ್ ಗಾಂಧಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು “ನನಗೆ ಪ್ರತಿಯೊಂದು ಕತೆಯೂ ನಿಮ್ಮೆಲ್ಲರ ಹೃದಯಕ್ಕೆ ಹತ್ತಿರವಾಗುವ ಒಂದು ಅವಕಾಶವಷ್ಟೇ ಹೊರತು, ನಿಮ್ಮ ಭಾವನೆಗಳಿಗೆ ನೋವುಂಟು‌ ಮಾಡುವ ಉದ್ದೇಶವಿಲ್ಲ” ಎಂದಿದ್ದಾರೆ‌. ಈ‌ ಚಿತ್ರದಲ್ಲಿ ಪ್ರತೀಕ್, ರಾವಣನ ಪಾತ್ರ ಮಾಡುವ ಓರ್ವ ನಟನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನಾಟಕದಲ್ಲಿ ಸೀತೆಯ ಪಾತ್ರದಲ್ಲಿ ಬಣ್ಣ ಹಚ್ಚುವ ಯುವತಿ(ಐಂದ್ರಿತಾ) ಮೇಲೆ, ರಾವಣನ ಪಾತ್ರ ಮಾಡುವ ಪ್ರತೀಕ್​ಗೆ ನಿಜ ಜೀವನದಲ್ಲಿ ಪ್ರೀತಿ ಹುಟ್ಟಿದರೆ ಏನಾಗುತ್ತದೆ? ಎಂಬುದನ್ನು ಕತೆ ಕಟ್ಟಿಕೊಡಲಿದೆ. ಪೊಳ್ಳು ಧಾರ್ಮಿಕ ಆಚಾರಗಳನ್ನು ಚಿತ್ರವು ಚರ್ಚಿಸಲಿದೆ ಎಂದು ಚಿತ್ರತಂಡ ತಿಳಿಸಿದೆ.

View this post on Instagram

A post shared by Pratik Gandhi (@pratikgandhiofficial)

ಹೆಸರಿನ ಬದಲಾವಣೆಗೆ ಪ್ರತೀಕ್ ಗಾಂಧಿ ಹೇಳಿದ್ದೇನು? ಪಿಟಿಐನೊಂದಿಗೆ ಮಾತನಾಡಿರುವ ಪ್ರತೀಕ್ ಗಾಂಧಿ, ಹೆಸರಿನ ಕುರಿತ ವಿವಾದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. “ಈಗ ನಾವು ಹೆಸರನ್ನು ಬದಲಾಯಿಸಿದ್ದೇವೆ. ಇದು ಏನನ್ನಾದರೂ ಬದಲಾವಣೆ ಮಾಡುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ. “ಚಿತ್ರದಲ್ಲಿ ರಾಮ, ರಾವಣರಿಗೆ ಸಂಬಂಧ ಪಟ್ಟ ಕತೆ ಇಲ್ಲ. ಆದ್ದರಿಂದಲೇ, ಧಾರ್ಮಿಕ ಭಾವನೆಗಳಿಗೆ ಹೆಸರಿನಿಂದ ಧಕ್ಕೆಯಾಗುತ್ತದೆ ಎಂಬ ಆರೋಪ ಬಂದಾಗ, ತಕ್ಷಣ ಹೆಸರನ್ನು ಬದಲಾಯಿಸಿದ್ದೇವೆ. ಆದರೆ, ಈ ಪ್ರಶ್ನೆಯನ್ನು ವಿಶಾಲ ದೃಷ್ಟಿಕೋನದಿಂದ ನೋಡಿದಾಗ, ನಾವು ಹೆಸರನ್ನು ಬದಲಾಯಿಸಿದ್ದೇವೆ ನಿಜ. ಆದರೆ ಅದರಿಂದ ಏನಾದರೂ ಪರಿಹಾರವಾಯಿತೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು, ವೀಕ್ಷಕರು ನಿಜ ಜೀವನಕ್ಕೂ, ತೆರೆಯ ಮೇಲಿನ‌ ಕತೆಗೂ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. “ತೆರೆಯ ಮೇಲೆ ಹನುಮಂತ ಪಾತ್ರ ಮಾಡುವವರು ನಿಜ ಜೀವನದಲ್ಲಿ ಮದುವೆಯಾಗದೇ ಬ್ರಹ್ಮಚಾರಿಯಾಗೇ ಇರಬೇಕೆ? ನಟನ‌ ಕೆಲಸ ಕತೆಯನ್ನು ನೋಡುಗರಿಗೆ ಮುಟ್ಟಿಸುವುದು. ಆದರೆ ಅವರಿಗೂ ವೈಯಕ್ತಿಕ ಜೀವನವಿರುತ್ತದೆ. ಯಾವಾಗ ನೋಡುಗರು ಅದನ್ನು ಮರೆಯುತ್ತಾರೋ ಆಗ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನೇ ಚಿತ್ರವೂ ತೆರೆದಿಡಲಿದೆ” ಎಂದಿದ್ದಾರೆ ಪ್ರತೀಕ್ ಗಾಂಧಿ.

ಇದನ್ನೂ ಓದಿ:

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

KBC 13: ‘ಅಮಿತಾಭ್ ಬಚ್ಚನ್‘ ಹೆಸರು ಬಂದಿದ್ದು ಹೇಗೆ?; ಕುತೂಹಲಕರ ಮಾಹಿತಿ ಇಲ್ಲಿದೆ

(Raavan Leela title now changed to Bhavai starring Pratik Gandhi and Aindritha Ray)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada