AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KBC 13: ‘ಅಮಿತಾಭ್ ಬಚ್ಚನ್‘ ಹೆಸರು ಬಂದಿದ್ದು ಹೇಗೆ?; ಕುತೂಹಲಕರ ಮಾಹಿತಿ ಇಲ್ಲಿದೆ

Amitabh Bachchan: ಬಾಲಿವುಡ್​ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ‘ಬಚ್ಚನ್’ ಹೆಸರನ್ನು ಸರ್​ನೇಮ್ ಆಗಿ ಹೊಂದಿದ ಕುಟುಂಬದ ಮೊದಲ ವ್ಯಕ್ತಿ. ಅಷ್ಟಕ್ಕೂ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಅಚ್ಚರಿಯ ಮಾಹಿತಿ.

KBC 13: ‘ಅಮಿತಾಭ್ ಬಚ್ಚನ್‘ ಹೆಸರು ಬಂದಿದ್ದು ಹೇಗೆ?; ಕುತೂಹಲಕರ ಮಾಹಿತಿ ಇಲ್ಲಿದೆ
ಕೆಬಿಸಿಯಲ್ಲಿ ಅಮಿತಾಭ್ ಬಚ್ಚನ್
TV9 Web
| Updated By: shivaprasad.hs|

Updated on: Sep 14, 2021 | 5:40 PM

Share

ಖ್ಯಾತ ನಟರ ಹೆಸರಿನ ಹಿಂದಿನ ಅಚ್ಚರಿಯ ಕತೆಗಳು ಅಭಿಮಾನಿಗಳಿಗೆ ಆಸಕ್ತಿಕರ ವಿಷಯ. ಅದರಲ್ಲೂ ಹಲವು ನಟರು ಚಿತ್ರರಂಗಕ್ಕೆ ಬಂದಮೇಲೆ ಹೆಸರನ್ನು ಬದಲಾಯಿಸಿಕೊಂಡಿರುತ್ತಾರೆ. ಮತ್ತೆ ಕೆಲವರಿಗೆ ಬಾಲ್ಯದಿಂದಲೇ ವಿಶೇಷ ಕಾರಣದಿಂದ ವಿಭಿನ್ನವಾದ ಹೆಸರು ಪ್ರಾಪ್ತವಾಗಿರುತ್ತದೆ. ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ತಮಗೆ ಹೆಸರು ಲಭ್ಯವಾದದ್ದು ಹೇಗೆ ಎಂಬ ಆಸಕ್ತಿಕರ ಮಾಹಿತಿಯನ್ನು ‘ಕೌನ್ ಬನೇಗಾ ಕರೋಡ್​ಪತಿ 13’ರ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಅಮಿತಾಭ್ ಅವರಿಗೆ ಯಾರು ಹೆಸರಿಟ್ಟಿರಬಹುದು ಎಂಬ ಪ್ರಶ್ನೆ ಮೂಡಿದಾಗ ಸಹಜವಾಗಿ ಮೊದಲು ಬರುವ ಹೆಸರು ಅವರ ತಂದೆ ಹರಿವಂಶ್ರಾಯ್ ಬಚ್ಚನ್ ಅವರದ್ದು. ವಾಸ್ತವವಾಗಿ ಅವರು ಅಮಿತಾಭ್​ಗೆ ಹೆಸರಿಟ್ಟಿದ್ದಲ್ಲ. ಖ್ಯಾತ ಕವಿಯಾಗಿರುವ ಸುಮಿತ್ರಾನಂದನ್ ಪಂತ್ ಅವರು ಬಿಗ್​ಬಿಗೆ ಅಮಿತಾಭ್ ಎಂದು ಹೆಸರಿಟ್ಟವರಂತೆ. ಸುಮಿತ್ರಾನಂದನ್ ಪಂತ್ ಅಮಿತಾಭ್ ತಂದೆಗೆ ಬಹಳ ಆಪ್ತರಾಗಿದ್ದವರು. ಅವರು ಹೆಸರಿಟ್ಟ ಸಂದರ್ಭವನ್ನು ಅಮಿತಾಭ್ ಕೆಬಿಸಿ 13 ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ‘‘ಅವರು(ಸುಮಿತ್ರಾನಂದನ್) ನಾಮಕರಣದ ದಿನ ನಮ್ಮ ಮನೆಗೆ ಬಂದರು. ನನ್ನನ್ನು ನೋಡಿದರು. ಅಮಿತಾಭ್ ಎಂಬ ಹೆಸರನ್ನು ನೀಡಿದರು’’ ಎಂದು ಅಮಿತಾಭ್ ವಿವರಿಸಿದ್ದಾರೆ.

20ನೇ ಶತಮಾನದ ಖ್ಯಾತ ಕವಿಗಳಲ್ಲಿ ಸುಮಿತ್ರಾನಂದನ್ ಪಂತ್ ಕೂಡ ಒಬ್ಬರು. ಅವರು ಪ್ರಕೃತಿ, ಜನ ಹಾಗೂ ಸೌಂದರ್ಯದ ಕುರಿತು ರಚಿಸಿರುವ ಕೃತಿಗಳು ಖ್ಯಾತಿ ಪಡೆದಿವೆ. ಅವರಿಗೆ ಹಲವಾರು ಪ್ರಶಸ್ತಿಗಳು ಕೂಡ ಲಭ್ಯವಾಗಿದ್ದು, 1977ರಲ್ಲಿ ಉತ್ತರಪ್ರದೇಶದ ಪ್ರಯಾಗದಲ್ಲಿ ನಿಧನ ಹೊಂದಿದರು.

ಅಮಿತಾಭ್ ಹೆಸರಿನ ಕಹಾನಿ ಇದಾದರೆ, ಬಚ್ಚನ್ ಎಂಬ ಹೆಸರು ಬಂದದ್ದು ಹೇಗೆ ಎಂಬುದಕ್ಕೂ ಒಂದು ಕುತೂಹಲಕರ ಘಟನೆಯಿದೆ. ಬಚ್ಚನ್ ಎಂಬ ಹೆಸರನ್ನು ಅಧಿಕೃತವಾಗಿ ಕುಟುಂಬದಲ್ಲಿ ಹೊಂದಿದ ಮೊದಲ ವ್ಯಕ್ತಿ ಅಮಿತಾಭ್. 2019ರಲ್ಲಿ ಬ್ಲಾಗ್ ಒಂದನ್ನು ಬರೆಯುತ್ತಾ ಅಮಿತಾಭ್ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಅವರ ತಂದೆ ಜಾತಿ ವ್ಯವಸ್ಥೆಯ ವಿರೋಧಿಯಾಗಿದ್ದರಂತೆ. ಬರಹಗಾರರಾಗಿದ್ದ ಅವರು ಜಾತಿ ಸೂಚಕ ಹೆಸರಿನಿಂದ ಮುಕ್ತರಾಗಲು ‘ಬಚ್ಚನ್’ ಎಂಬ ಕಾವ್ಯನಾಮವನ್ನು ಬಳಸಲು ಪ್ರಾರಂಭಿಸಿದರಂತೆ. ನಂತರ ಅಮಿತಾಭ್ ಜನಿಸಿ, ಶಾಲೆಗೆ ಸೇರುವ ಸಂದರ್ಭದಲ್ಲಿ ಅವರ ಸರ್​ನೇಮ್ ಏನು ಎಂದು ಕೇಳಿದರಂತೆ. ಆಗ ಅಮಿತಾಭ್ ಅವರ ತಂದೆ- ತಾಯಿ, ‘ಬಚ್ಚನ್’ ಎಂಬುದು ಇನ್ನು ಮುಂದೆ ಕುಟುಂಬದ ಹೆಸರಾಗಿರಲಿ ಎಂದು ನಿರ್ಧರಿಸಿ, ಅಮಿತಾಭ್ ಬಚ್ಚನ್ ಎಂದು ದಾಖಲಾತಿಯಲ್ಲಿ ನಮೂದಿಸಿದರಂತೆ. ಆ ಮೂಲಕ ಬಚ್ಚನ್ ಎಂಬ ಸರ್​ನೇಮ್ ಅನ್ನು ಪಡೆದ ಕುಟುಂಬದ ಮೊದಲ ವ್ಯಕ್ತಿ ತಾನು ಎಂದು ಅಮಿತಾಭ್ ಬರೆದುಕೊಂಡಿದ್ದರು.

ಇದನ್ನೂ ಓದಿ:

ವಿಜಯಪುರ: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

(Amitabh Bachchan opens up about his name and surname in KBC 13)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ