AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ

ಕಲರ್ಸ್​ ಕನ್ನಡ ವಾಹಿನಿ ‘ರಾಜಾ ರಾಣಿ’ ಹೆಸರಿನ ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಈ ಶೋಗೆ ಸೃಜನ್​ ಲೋಕೆಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದಾರೆ. ಇನ್ನು, ಕಲರ್ಸ್​ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ.

‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ
‘ಸೃಜನ್ ಲೋಕೇಶ್​​ ಹೆದರುತ್ತಾರೆ, ಅದಕ್ಕೆ ಹೆಂಡತಿ ಎದುರು ಜಾಸ್ತಿ ಮಾತನಾಡಲ್ಲ’; ಅಚ್ಚರಿ ವಿಚಾರ ಬಿಚ್ಚಿಟ್ಟ ಅನುಪಮಾ ಗೌಡ
TV9 Web
| Edited By: |

Updated on:Sep 13, 2021 | 9:03 PM

Share

ಸೃಜನ್​ ಲೋಕೇಶ್​ ಮಾತಿನ ಮಲ್ಲ. ಅವರನ್ನು ಮಾತಿನಲ್ಲಿ ಸೋಲಿಸೋದು ಅಷ್ಟು ಸುಲಭವಲ್ಲ. ‘ಮಜಾ ಟಾಕೀಸ್​’ ವೇದಿಕೆ ಮೇಲೆ ಅವರು ಹೊಡೆಯುತ್ತಿದ್ದ ಒಂದೊಂದು ಡೈಲಾಗ್​ ಅನೇಕರ ಬಾಯಿ ಮುಚ್ಚಿಸುತ್ತಿತ್ತು. ಇನ್ನು, ವೇದಿಕೆ ಏರಿದರೆ ಸಾಕು ಮಾತು ಪಟಪಟನೆ ಉದುರತ್ತವೆ. ಆದರೆ, ​ಹೆಂಡತಿ ಎದುರು ಸೃಜನ್ ಮಾತನಾಡುವುದಿಲ್ಲ. ಇದಕ್ಕೆ ಭಯ ಕಾರಣ ಎಂದು ಅನುಪಮಾ ಗೌಡ ಹೇಳಿದ್ದಾರೆ!

ಕಲರ್ಸ್​ ಕನ್ನಡ ವಾಹಿನಿ ‘ರಾಜಾ ರಾಣಿ’ ಹೆಸರಿನ ಹೊಸ ರಿಯಾಲಿಟಿ ಶೋ ಆರಂಭಿಸಿದೆ. ಈ ಶೋಗೆ ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ತಾರಾ ಜಡ್ಜ್​ ಆಗಿದ್ದಾರೆ. ಇನ್ನು, ಕಲರ್ಸ್​ ಕನ್ನಡ ವಾಹಿನಿಯ ಸಾಕಷ್ಟು ಸೆಲೆಬ್ರಿಟಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಹೆಸರೇ ಸೂಚಿಸುವಂತೆ ಈ ಶೋಗೆ ಒಬ್ಬರೇ ಬರುವಂತಿಲ್ಲ. ಜೋಡಿ ಸಮೇತವೇ ಬರಬೇಕು. ವೇದಿಕೆ ಮೇಲೆ ಸ್ಟಾರ್ ದಂಪತಿಗಳ ಸಾಕಷ್ಟು ಗುಟ್ಟು ಬಯಲಾಗಿದೆ. ಹೆಂಡತಿ ಎದುರು ಸೃಜನ್​ ಹೆಚ್ಚು ಮಾತನಾಡುವುದಿಲ್ಲ ಎನ್ನುವ ವಿಚಾರ ಕೂಡ ಹೊರ ಬಿದ್ದಿದೆ.

ಇದೇ ವಿಚಾರ ಇಟ್ಟುಕೊಂಡು ತಾರಾ ಹಾಗೂ ಅನುಪಮಾ ಮಾತನಾಡಿದ್ದಾರೆ. ‘ಸೃಜನ್​ ಲೋಕೇಶ್ ‘ರಾಜಾ ರಾಣಿ’ ಶೋನ ಜಡ್ಜ್. ಅವರು​ ​ ಹೆಂಡತಿ ಎದುರು ಏನೂ ಮಾತನಾಡುವುದಿಲ್ಲ’ ಎಂದರು ಅನುಪಮಾ. ಈ ಮಾತಿನ ಬಗ್ಗೆ ತಾರಾ ಅಚ್ಚರಿ ಹಾಗೂ ಅನುಮಾನ ಎರಡನ್ನೂ ಹೊರ ಹಾಕಿದರು. ‘ವೇದಿಕೆ ಏರಿದ್ರೆ ಸೃಜನ್​ ಆ ರೀತಿ ಮಾತನಾಡುತ್ತಾನೆ. ಆದರೆ, ನನ್ನ ಗಂಡ ಮನೆಯಲ್ಲಿ ಮಾತೇ ಆಡಲ್ಲ ಎಂದು ಅವನ ಹೆಂಡತಿ ಹೇಳ್ತಾಳೆ. ಸೃಜನ್​ ಮನೆಯಲ್ಲಿ ಮಾತನ್ನೇ ಆಡಲ್ಲ ಎಂಬ ನನಗೆ ಏಕೋ ಅನುಮಾನ’ ಎಂದರು. ಇದಕ್ಕೆ ಅನುಪಮಾ ಧ್ವನಿಗೂಡಿಸಿದರು. ‘ನನಗೂ ಅದೇ ಅನುಮಾನ. ಬಹುಶಃ ಹೆಂಡತಿ ಕಂಡರೆ ಭಯ ಇರಬೇಕು ಅದಕ್ಕೆ ಮಾತನಾಡುವುದಿಲ್ಲ’ ಎಂದು ಅನುಪಮಾ ಹೇಳಿದರು.

ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನು ನೋಡಿದ ಫ್ಯಾನ್ಸ್​ ನಕ್ಕಿದ್ದಾರೆ. ಅಂದಹಾಗೆ, ಈ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ‘ಲೋಕೇಶ್ ಮಗನಾದರೂ ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್​ಗಾಗಿ 14 ವರ್ಷ ಸೈಕಲ್​ ಹೊಡೆದಿದ್ದೇನೆ’; ವೇದಿಕೆ ಮೇಲೆ ಅತ್ತ ಸೃಜನ್​

VijayaLakshmi: ಸೃಜನ್​ ಲೋಕೇಶ್​ಗೆ ಒಳ್ಳೇದು ಬಯಸಿದ್ದೇ ಅದೇ ತಪ್ಪಾ: ವಿಜಯಲಕ್ಷ್ಮಿ

Published On - 8:43 pm, Mon, 13 September 21

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?