ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮಕ್ಕೆ ಕಾಲಿಟ್ಟ ದಿನದಿಂದಲೂ ಶಮಿತಾ ಶೆಟ್ಟಿ ಮತ್ತು ರಾಕೇಶ್​ ಬಾಪಟ್​ ಹೆಚ್ಚು ಆಪ್ತವಾಗಿದ್ದಾರೆ. ಇಬ್ಬರೂ ಒಂದೇ ವಯೋಮಾನದವರಾದ ಕಾರಣ ಹೆಚ್ಚು ಸಲುಗೆ ಬೆಳೆದಿದೆ.

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​
ಸುನಂದಾ ಶೆಟ್ಟಿ, ಶಮಿತಾ ಶೆಟ್ಟಿ, ರಾಕೇಶ್ ಬಾಪಟ್
TV9kannada Web Team

| Edited By: Madan Kumar

Sep 14, 2021 | 4:06 PM

ನಟಿ ಶಮಿತಾ ಶೆಟ್ಟಿ ಅವರಿಗೆ ಸಿನಿಮಾರಂಗದಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗಲಿಲ್ಲ. ಆದರೆ ಅವರಿಗೆ ಬಿಗ್​ ಬಾಸ್​ ಓಟಿಟಿ ವೇದಿಕೆಯಲ್ಲಿ ಬಹಳ ಜನಪ್ರಿಯತೆ ಸಿಗುತ್ತಿದೆ. ಅವರ ಭಾವ, ಅಂದರೆ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಸಂದರ್ಭದಲ್ಲಿ ಅವರ ಇಡೀ ಫ್ಯಾಮಿಲಿ ಬೇರೆ ಬೇರೆ ಕೆಲಸಗಳತ್ತ ಗಮನ ಹರಿಸಿದೆ. ಆ ಮೂಲಕ ನೆಗೆಟಿವ್​ ವಿಚಾರವನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಶಮಿತಾ ಶೆಟ್ಟಿ ಅವರಂತೂ ಬಿಗ್​ ಬಾಸ್​ ಓಟಿಟಿಯಲ್ಲಿ ರಾಕೇಶ್​ ಬಾಪಟ್​ ಜೊತೆಗಿನ ಆಪ್ತತೆಯ ಕಾರಣಕ್ಕೆ ಹೆಚ್ಚು ಸುದ್ದಿ ಮಾಡುತ್ತಿದ್ದಾರೆ. ಅವರಿಬ್ಬರ ಸಂಬಂಧಕ್ಕೆ ಶಮಿತಾ ತಾಯಿ ಕಡೆಯಿಂದ ಗ್ರೀನ್​ ಸಿಗ್ನಲ್​ ಕೂಡ ಸಿಕ್ಕಿದೆ.

ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮಕ್ಕೆ ಕಾಲಿಟ್ಟ ದಿನದಿಂದಲೂ ಶಮಿತಾ ಶೆಟ್ಟಿ ಮತ್ತು ರಾಕೇಶ್​ ಬಾಪಟ್​ ಹೆಚ್ಚು ಆಪ್ತವಾಗಿದ್ದಾರೆ. ಇಬ್ಬರೂ ಒಂದೇ ವಯೋಮಾನದವರಾದ ಕಾರಣ ಹೆಚ್ಚು ಸಲುಗೆ ಬೆಳೆದಿದೆ. ಅಲ್ಲದೇ, ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಅವರಿಬ್ಬರು ಮದುವೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಶಮಿತಾಗೆ ಹಲವು ಬಾರಿ ರಾಕೇಶ್​ ಕಿಸ್​ ಮಾಡಿದ ಬಳಿಕವಂತೂ ಈ ವಿಚಾರ ಇನ್ನಷ್ಟು ಪುಷ್ಠಿ ಪಡೆದುಕೊಂಡಿದೆ.

ಇತ್ತೀಚೆಗೆ ಬಿಗ್​ ಬಾಸ್​ ಮನೆಗೆ ಶಮಿತಾ ಶೆಟ್ಟಿಯವರ ತಾಯಿ ಸುನಂದಾ ಶೆಟ್ಟಿ ಭೇಟಿ ನೀಡಿದ್ದರು. ಮಗಳ ಪರ್ಫಾಮೆನ್ಸ್​ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು. ಅಲ್ಲದೇ ಈ ವೇಳೆ ರಾಕೇಶ್​ ಬಾಪಟ್​​ ಬಗ್ಗೆಯೂ ಪ್ರಶ್ನೆ ಎದುರಾಯಿತು. ‘ಎಂತಹ ಒಳ್ಳೆಯ ಮನುಷ್ಯ. ಆತ ಒಬ್ಬ ಜಂಟಲ್​ಮ್ಯಾನ್​’ ಎಂದು ಹೇಳುವ ಮೂಲಕ ರಾಕೇಶ್​ ಬಾಪಟ್​ಗೆ ಸುನಂದಾ ಶೆಟ್ಟಿ ಫುಲ್​ ಮಾರ್ಕ್ಸ್​ ನೀಡಿದರು. ಹಾಗಾಗಿ ಶಮಿತಾ-ರಾಕೇಶ್​ ಸಂಬಂಧಕ್ಕೆ ಮನೆಯವರ ಒಪ್ಪಿಗೆ ಇದೆ ಎಂಬುದು ಬಹುತೇಕ ಖಚಿತ ಆದಂತಾಗಿದೆ.

ಅಕ್ಕನ ಬಗ್ಗೆ ಕೂಡ ಶಮಿತಾ ವಿಚಾರಿಸಿದರು. ಮನೆಯಲ್ಲಿ ವಾತಾವರಣ ಹೇಗಿದೆ ಎಂಬ ಬಗ್ಗೆ ಸುನಂದಾ ವರದಿ ನೀಡಿದರು. ‘ಶಿಲ್ಪಾ ಚೆನ್ನಾಗಿದ್ದಾಳೆ. ಆಕೆ ನಿನ್ನನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದಾಳೆ. ನಿನ್ನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ಶಿಲ್ಪಾ ಬ್ಯುಸಿ ಆಗಿದ್ದರೂ ಕೂಡ ನನ್ನ ಬಳಿ ಕೇಳಿ ನಿನ್ನ ಬಗ್ಗೆ ಅಪ್​ಡೇಟ್​ ತಿಳಿದುಕೊಳ್ಳುತ್ತಾಳೆ. ನಾವು ಮೂವರು ಈ ಕುಟುಂಬದ ಗಟ್ಟಿ ಮಹಿಳೆಯರು’ ಎಂದು ಸುನಂದಾ ಧೈರ್ಯ ತುಂಬಿದ್ದಾರೆ. ಇದರಿಂದಾಗಿ ಶಮಿತಾಗೆ ಬಲ ಸಿಕ್ಕಂತಾಗಿದೆ.

ಇದನ್ನೂ ಓದಿ:

ಮೊದಲ ಬಾಯ್​ಫ್ರೆಂಡ್​ ಮೃತಪಟ್ಟಿದ್ದು ಹೇಗೆ? ಅಳುತ್ತಲೇ ಶಮಿತಾ ಶೆಟ್ಟಿ ಬಿಚ್ಚಿಟ್ರು ಶಾಕಿಂಗ್​ ವಿಚಾರ

‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada