‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​

ಶಮಿತಾ ಶೆಟ್ಟಿಗೆ 42ರ ಪ್ರಾಯ. ರಾಕೇಶ್​ ಬಾಪಟ್​ ವಯಸ್ಸು 43. ಒಂದೇ ವಯೋಮಾನದವರಾದ ಈ ಜೋಡಿ ನಡುವೆ ಬಹಳ ಬೇಗ ಹೊಂದಾಣಿಕೆ ಬೆಳೆದಿದೆ.

‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​
ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್

ಬಿಗ್​ ಬಾಸ್​ ಓಟಿಟಿ ಶೋನಲ್ಲಿ ದಿನಕ್ಕೊಂದು ಡ್ರಾಮಾ ನಡೆಯುತ್ತಿದೆ. ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಅವರು ಈ ಆಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಟಾಸ್ಕ್​ಗಳ ವಿಚಾರದಲ್ಲಿ ಅವರು ಹಿಂದೇಟು ಹಾಕುತ್ತಿಲ್ಲ. ಜಗಳ, ಕಿರಿಕ್​ಗಳ ಜೊತೆಗೆ ಅವರು ಪ್ರೀತಿ-ಪ್ರೇಮದ ಕಾರಣದಿಂದಲೂ ಹೈಲೈಟ್​ ಆಗುತ್ತಿದ್ದಾರೆ. ನಟ ರಾಕೇಶ್​ ಬಾಪಟ್​ ಜೊತೆ ಅವರ ಆತ್ಮೀಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಬ್ಬರ ನಡುವಿನ ಸಂಬಂಧವನ್ನು ಕಂಡು ವೀಕ್ಷಕರು ಅಚ್ಚರಿ ಪಡುತ್ತಿದ್ದಾರೆ. ಅಷ್ಟರಮಟ್ಟಿಗೆ ಶಮಿತಾ ಮತ್ತು ರಾಕೇಶ್​ ಕ್ಲೋಸ್​ ಆಗಿದ್ದಾರೆ.

ಶಮಿತಾ ಶೆಟ್ಟಿಗೆ 42ರ ಪ್ರಾಯ. ರಾಕೇಶ್​ ಬಾಪಟ್​ ವಯಸ್ಸು 43. ಒಂದೇ ವಯೋಮಾನದವರಾದ ಈ ಜೋಡಿ ನಡುವೆ ಬಹಳ ಬೇಗ ಹೊಂದಾಣಿಕೆ ಬೆಳೆದಿದೆ. ಶಮಿತಾಗೆ ಹಲವು ಬಾರಿ ಮುತ್ತು ಕೊಡುವ ಮಟ್ಟಕ್ಕೆ ರಾಕೇಶ್​ ಸಲುಗೆ ಬೆಳೆಸಿಕೊಂಡಿದ್ದಾರೆ. ಆದರೆ ಟಾಸ್ಕ್​ ವಿಚಾರದಲ್ಲಿ ರಾಕೇಶ್ ಹಿಂದೇಟು ಹಾಕುತ್ತಿದ್ದಾರೆ. ಅದರ ಬಗ್ಗೆ ಇತ್ತೀಚೆಗೆ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ರಾಕೇಶ್​ ಅವರು ತಮ್ಮ ಉದ್ದೇಶ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ಇದೊಂದು ಸ್ಪರ್ಧೆ ಡಾರ್ಲಿಂಗ್​’ ಎಂದು ಬಹಳ ಪ್ರೀತಿಯಿಂದ ರಾಕೇಶ್​ಗೆ ಬುದ್ಧಿ ಹೇಳಿದ್ದಾರೆ ಶಮಿತಾ. ಆದರೆ ಆ ಮಾತನ್ನು ರಾಕೇಶ್​ ಸ್ವೀಕರಿಸಿಲ್ಲ. ‘ನಿನಗೆ ಒಳ್ಳೆಯದಾಗಲಿ. ನೀನು ಬೇಕಿದ್ದರೆ ಸ್ಪರ್ಧೆ ಮಾಡು. ನಾನು ಇಲ್ಲಿ ಅನುಭವ ಪಡೆಯಲು ಬಂದಿದ್ದೇನೆ. ಒಂದು ಬಾರಿ ನನ್ನ ಮಾತನ್ನು ಸರಿಯಾಗಿ ಎಲ್ಲರೂ ಕೇಳಿ’ ಎಂದು ಅವರು ಗಟ್ಟಿಧ್ವನಿಯಲ್ಲಿ ಹೇಳಿದ್ದಾರೆ.

ಈ ಮಾತನ್ನು ಒಪ್ಪಿಕೊಳ್ಳಲು ಶಮಿತಾ ಸಿದ್ಧರಿರಲಿಲ್ಲ. ‘ನೀನು ಕಂಫರ್ಟ್​ ಝೋನ್​ನಲ್ಲಿ ಇದ್ದೀಯ. ಅದರಿಂದ ಹೊರಗೆ ಬಾ’ ಎಂದು ಅವರು ಹೇಳಿದರು. ‘ಇದೆಲ್ಲ ನನಗೆ ಸಾಕಾಗಿದೆ’ ಎಂದು ರಾಕೇಶ್​ ಕೈ ಮುಗಿದರು. ‘ಇದೆಲ್ಲ ಸಾಕಾಗಿದೆ ಎಂದರೆ ಏನರ್ಥ? ನಿನಗೇನು 70 ವರ್ಷ ಆಗಿದ್ಯಾ? ನಿನಗೆ ಇನ್ನೂ 43 ವರ್ಷ ಮಾತ್ರ’ ಎಂದು ಶಮಿತಾ ಕಿವಿಮಾತು ಹೇಳಲು ಪ್ರಯತ್ನಿಸಿದ್ದಾರೆ.

ವೂಟ್​ ಮೂಲಕ ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಇದೇ ಮೊದಲ ಬಾರಿಗೆ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಅವರು ನಿರೂಪಣೆ ಮಾಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಟಿವಿಯಲ್ಲಿ ಬಿಗ್​ ಬಾಸ್​ ಶುರುವಾಗಲಿದೆ. ಅದಕ್ಕೆ ಎಂದಿನಂತೆ ಸಲ್ಮಾನ್​ ಖಾನ್​ ನಿರೂಪಣೆ ಇರಲಿದೆ.

ಇದನ್ನೂ ಓದಿ:

‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ

ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

Read Full Article

Click on your DTH Provider to Add TV9 Kannada