‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ

ರಾಕೇಶ್​ ಜೋಕ್​ ಮಾಡುತ್ತಾ ಶಮಿತಾ ಕಾಲೆಳೆದಿದ್ದಾರೆ. ನೀವು ನನ್ನ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ ರಾಕೇಶ್​. ಆದರೆ, ಇದು ಶಮಿತಾಗೆ ಇಷ್ಟವಾಗಿಲ್ಲ.

‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 01, 2021 | 8:01 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಜೈಲು ಪಾಲಾಗಿದ್ದಾರೆ. ಮತ್ತೊಂದೆಡೆ ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ರಾಕೇಶ್​ ಬಾಪಟ್​ ಹಾಗೂ ಶಮಿತಾ ಶೆಟ್ಟಿ ನಡುವೆ ಒಂದು ಆಪ್ತತೆ ಬೆಳೆಯುತ್ತಿರುವುದು ಅಭಿಮಾನಿಗಳಿಗೆ ಗೊತ್ತಾಗುತ್ತಿತ್ತು. ಈಗ ಇದು ಸ್ಪಷ್ಟವಾಗಿದೆ. ಇಬ್ಬರ ನಡುವೆ ನಡೆದ ಫೈಟ್ ವೇಳೆ ಶಮಿತಾ ಅಸಲಿ ವಿಚಾರ ಬಾಯ್ಬಿಟ್ಟಿದ್ದಾರೆ.

ರಾಕೇಶ್​ ಜೋಕ್​ ಮಾಡುತ್ತಾ ಶಮಿತಾ ಕಾಲೆಳೆದಿದ್ದಾರೆ. ನೀವು ನನ್ನ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ ರಾಕೇಶ್​. ಆದರೆ, ಇದು ಶಮಿತಾಗೆ ಇಷ್ಟವಾಗಿಲ್ಲ. ಹೀಗಾಗಿ, ಬೆಡ್​​ರೂಮ್​ನಿಂದ ಹೊರ ನಡೆದಿದ್ದಾರೆ. ಈ ವಿಚಾರ ರಾಕೇಶ್​ಗೆ ಬೇಸರ ತರಿಸಿದೆ. ಅಲ್ಲದೆ, ಶಮಿತಾ ಮನವೊಲಿಸಲು ಅವರು ಪ್ರಯತ್ನಿಸಿದ್ದಾರೆ. ಆದರೆ ಇದು ಸಾಧ್ಯವಾಗಿಲ್ಲ. ‘ನಾನು ನಿನ್ನ ಜತೆ ಮಾತನಾಡಲು ಬಯಸುವುದಿಲ್ಲ. ನಿನಗಾಗಿ ನಾನು ನನ್ನ ತಾಯಿಯ ಪತ್ರವನ್ನು ಹರಿದು ಹಾಕಿದೆ. ಆದರೆ, ಈಗ ನೀನು ನನಗೆ ಇದನ್ನೆಲ್ಲ ಹೇಳುತ್ತಿದ್ದೀಯಲ್ಲ’ ಎಂದು ರಾಕೇಶ್​ ವಿರುದ್ಧ ಬೇಸರ ಹೊರ ಹಾಕಿದ್ದಾರೆ ಶಮಿತಾ. ಇತ್ತೀಚೆಗೆ ಶಮಿತಾ ಅವರು ರಾಕೇಶ್​ ಅವರನ್ನು ನಾಮಿನೇಷನ್​ನಿಂದ ಬಚಾವ್​ ಮಾಡಿದ್ದರು ಮತ್ತು ಮನೆಯಿಂದ ಬಂದ ಪತ್ರವನ್ನು ಹರಿದು ಹಾಕಿದ್ದರು. ಈ ಮೂಲಕ ತಾವೇ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದರು.

ದಿವ್ಯಾ ಅಗರ್​​ವಾಲ್​ ಜೊತೆ ರಾಕೇಶ್​ ಮಾತನಾಡುವುದನ್ನು ಶಮಿತಾ ತಡೆಯುತ್ತಿದ್ದಾರೆ. ಇದು ರಾಕೇಶ್​​ಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಶಮಿತಾ ಜತೆ ಮಾತನಾಡಿದ ರಾಕೇಶ್​ ‘ದಿವ್ಯಾ ಎಂದರೆ ನನಗೆ ಇಷ್ಟವಿಲ್ಲ. ಅವಳು ನನಗೆ ಮುಖ್ಯಳಲ್ಲ. ಆದರೆ ಒಂದೇ ಮನೆಯಲ್ಲಿರುವಾಗ ಅವಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ರಾಕೇಶ್​.

ಈ ವೇಳೆ ಶಮಿತಾ ಕಣ್ಣೀರು ಹಾಕುತ್ತಲೇ ರಾಕೇಶ್​​ ಅವರನ್ನು ಇಷ್ಟಪಡುವುದನ್ನು ಒಪ್ಪಿಕೊಂಡಿದ್ದಾರೆ. ‘ನಾನು ಮೊದಲ ದಿನದಿಂದಲೂ ನಿನ್ನ ಜತೆ ನಡೆದುಕೊಂಡಿದ್ದ ರೀತಿ ನಕಲಿ ಅಲ್ಲ. ನನ್ನ ಕೈಗೆ, ಕತ್ತಿಗೆ ಕಿಸ್​ ಮಾಡೋಕೆ ಅವಕಾಶ ಕೊಟ್ಟೆ. ಇದಕ್ಕೆ ಕಾರಣ ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ’ ಎಂದು ಅವರು ಒಪ್ಪಿಕೊಂಡರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್​ ಬಾಸ್​ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ 

ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​

Published On - 8:01 pm, Wed, 1 September 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ