AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Heist 5: ‘ಮನಿ ಹೈಸ್ಟ್ 5’​​ನಲ್ಲಿ ವಿರಾಟ್ ಕೊಹ್ಲಿ, ಬಾಬ್ಬಿ ಡಿಯೋಲ್; ಇದೇನು ಅಚ್ಚರಿ?

ನೆಟ್​ಫ್ಲಿಕ್ಸ್​​ನ ಖ್ಯಾತ ಸೀರೀಸ್​​ಗಳಲ್ಲಿ ಒಂದಾದ ಮನಿ ಹೈಸ್ಟ್​ನ 5ನೇ ಸೀಸನ್ ಬಿಡುಗಡೆಯಾಗಿದೆ. ಅದರಲ್ಲಿನ ಪಾತ್ರವೊಂದು ವಿರಾಟ್ ಕೊಹ್ಲಿ ಹಾಗೂ ಬಾಬ್ಬಿ ಡಿಯೋಲ್ ತರಹವೇ ಇರುವುದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.

Money Heist 5: 'ಮನಿ ಹೈಸ್ಟ್ 5'​​ನಲ್ಲಿ ವಿರಾಟ್ ಕೊಹ್ಲಿ, ಬಾಬ್ಬಿ ಡಿಯೋಲ್; ಇದೇನು ಅಚ್ಚರಿ?
ಮನಿ ಹೈಸ್ಟ್ 5ನ ಪಾತ್ರ, ವಿರಾಟ್ ಕೊಹ್ಲಿ, ಬಾಬ್ಬಿ ಡಿಯೋಲ್ (ಸಾಂದರ್ಭಿಕ ಚಿತ್ರ)
TV9 Web
| Updated By: shivaprasad.hs|

Updated on:Sep 04, 2021 | 6:59 PM

Share

ನೆಟ್​ಫ್ಲಿಕ್ಸ್​ನ ಬಹುನಿರೀಕ್ಷಿತ ಸ್ಪ್ಯಾನಿಶ್ ವೆಬ್ ಸೀರೀಸ್ ‘ಮನಿ ಹೈಸ್ಟ್ 5’ ಬಿಡುಗಡೆಯಾಗಿದೆ. ಭಾರತದಲ್ಲೂ ಈ ಸೀರೀಸ್​ಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಅಚ್ಚರಿಯ ಸಂಗತಿಯೊಂದು ಎದುರಾಗಿದೆ. ಕೆಲವರಿಗೆ ಭಾರತ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದರೆ, ಮತ್ತೆ ಕೆಲವರಿಗೆ ಬಾಲಿವುಡ್​ನ ಖ್ಯಾತ ನಟ ಬಾಬ್ಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಅರೇ, ಇದೇನು ಅಚ್ಚರಿ ಎಂದು ಯೋಚಿಸುತ್ತಿದ್ದೀರಾ? ಅಸಲಿಗೆ ಸೀರೀಸ್​ನಲ್ಲಿ ಕೊಹ್ಲಿ ಹಾಗೂ ಬಾಬ್ಬಿಯಂತೆಯೇ ಕಾಣಿಸುವ ನಟನೊಬ್ಬ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಟ್ವಿಟರ್​ನಲ್ಲಿ ಮಜವಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಾಬ್ಬಿ ಡಿಯೋಲ್ ಅವರಿಗೆ ಕೊನೆಗೂ ಒಂದು ಭರ್ಜರಿ ಬ್ರೇಕ್ ಸಿಕ್ಕಿದೆ, ಅದು ಮನಿ ಹೈಸ್ಟ್ ಮುಖಾಂತರ ಎಂದು ಅಭಿಮಾನಿಯೊಬ್ಬ ತಮಾಷೆ ಮಾಡಿದ್ದರೆ, ಮತ್ತೋರ್ವ ಅಭಿಮಾನಿ ವಿರಾಟ್ ಹಾಗೂ ಬಾಬ್ಬಿಯ ಮಗನಂತೆ ಇದ್ದಾನೆ ಎಂದು ಹಾಸ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಮನಿ ಹೈಸ್ಟ್​ನಲ್ಲಿ ಅಧಿಕಾರಿಯೊಬ್ಬನ ಪಾತ್ರ ಮಾಡಿರುವ ವ್ಯಕ್ತಿ ಬಾಬ್ಬಿ ಹಾಗೂ ವಿರಾಟ್​ರನ್ನು ಹೋಲುತ್ತಿರುವುದಂತೂ ಹೌದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರ ಕೆಲವು ರಿಯಾಕ್ಷನ್ ಇಲ್ಲಿವೆ (ಕೃಪೆ: ಟ್ವಿಟರ್) :

Money Heist 5 Virat Kohli and Bobby Deol

Money Heist 5 Virat Kohli and Bobby Deol

Money Heist 5 Virat Kohli and Bobby Deol

Money Heist 5 Virat Kohli and Bobby Deol

‘ಮನಿ ಹೈಸ್ಟ್​’ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ಪಾತ್ರಕ್ಕೂ ಖ್ಯಾತ ನಗರಗಳ ಹೆಸರನ್ನು ಇಟ್ಟಿರುವುದು ವಿಶೇಷ. ಬ್ಯಾಂಕ್​ ದರೋಡೆ ಮಾಡುವ ಒಂದು ತಂಡದ ಕಥೆಯನ್ನು ಈ ವೆಬ್​ ಸೀರೀಸ್​ ಹೇಳುತ್ತಿದೆ. ಮನಿ ಹೈಸ್ಟ್ ಸೀಸನ್ 5ಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಭಾಗ ಶುಕ್ರವಾರದಂದು (ಸೆಪ್ಟೆಂಬರ್ 03) ಬಿಡುಗಡೆಯಾಗಿದೆ. ಮುಂದಿನ ಭಾಗ ಡಿಸೆಂಬರ್ 3ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ:

Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ

‘ನಿಮ್ಮಲ್ಲಿ ಹೊಂದಾಣಿಕೆ ಸಾಧ್ಯವೇ ನೋಡಿ’; ಹನಿ ಸಿಂಗ್​-ಶಾಲಿನಿ ದಂಪತಿಗೆ ಜಡ್ಜ್​ ಸಲಹೆ

(Money Heist 5 contains a character like Virat Kohli and Bobby deol see the twitter reaction)

Published On - 6:56 pm, Sat, 4 September 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!