Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ

‘ಮನಿ ಹೈಸ್ಟ್​’ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ಪಾತ್ರಕ್ಕೂ ಖ್ಯಾತ ನಗರಗಳ ಹೆಸರನ್ನು ಇಟ್ಟಿರೋದು ವಿಶೇಷ. ಬ್ಯಾಂಕ್​ ದರೋಡೆ ಮಾಡುವ ಒಂದು ತಂಡದ ಕಥೆಯನ್ನು ಈ ವೆಬ್​ ಸೀರಿಸ್​ ಹೇಳುತ್ತಿದೆ.

Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ
Money Heist 5: ಉದ್ಯೋಗಿಗಳಿಗೆ ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ನೀಡಿ ರಜೆ ಘೋಷಿಸಿದ ಭಾರತದ ಕಂಪನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 01, 2021 | 6:59 PM

‘ಮನಿ ಹೈಸ್ಟ್​ ಸೀಸನ್​ 5’ ರಿಲೀಸ್​ಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್​​ 3ರಂದು ಈ ಸಿರೀಸ್​ ರಿಲೀಸ್​ ಆಗುತ್ತಿದೆ. ಮೂಲತಃ ಸ್ಪ್ಯಾನಿಶ್​ ವೆಬ್​ ಸೀರಿಸ್​ ಇದಾಗಿದ್ದು, ಇಂಗ್ಲಿಷ್​ನಲ್ಲೂ ಡಬ್​ ಆಗಿ ನೆಟ್​ಫ್ಲಿಕ್ಸ್​ನಲ್ಲಿ ತೆರೆಕಾಣುತ್ತಿದೆ. ಭಾರತದಲ್ಲಿಯೂ ಈ ವೆಬ್​ ಸೀರಿಸ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ರಿಲೀಸ್​ ದಿನಾಂಕ ಸಮೀಪಿಸಿದಂತೆ ಈ ವೆಬ್​ ಸೀರಿಸ್​ ಕ್ರೇಜ್​ ಜೋರಾಗಿದೆ. ಅಚ್ಚರಿ ಎಂದರೆ, ಈ ವೆಬ್​ ಸೀರಿಸ್​ ರಿಲೀಸ್​ ಆಗುವ ದಿನ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿದೆ.

‘ಮನಿ ಹೈಸ್ಟ್​’ ನಾಲ್ಕು ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ಪಾತ್ರಕ್ಕೂ ಖ್ಯಾತ ನಗರಗಳ ಹೆಸರನ್ನು ಇಟ್ಟಿರೋದು ವಿಶೇಷ. ಬ್ಯಾಂಕ್​ ದರೋಡೆ ಮಾಡುವ ಒಂದು ತಂಡದ ಕಥೆಯನ್ನು ಈ ವೆಬ್​ ಸೀರಿಸ್​ ಹೇಳುತ್ತಿದೆ. ಸಾಕಷ್ಟು ಕುತೂಹಲಕಾರಿ ಅಂಶ ಹಾಗೂ ಪ್ರಶ್ನೆಗಳೊಂದಿಗೆ ನಾಲ್ಕನೇ ಸೀಸನ್​ ಅಂತ್ಯವಾಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಸೀಸನ್​ 5ರಲ್ಲಿ ಉತ್ತರ ಸಿಗುವ ನಿರೀಕ್ಷೆ ಪ್ರೇಕ್ಷಕರಲ್ಲಿದೆ. ಈ ಕಾರಣಕ್ಕೆ ಈ ವೆಬ್​ ಸೀರಿಸ್​ ನೋಡೋಕೆ ಅನೇಕರು ತುದಿಗಾಲಿನಲ್ಲಿ ನಿಂತಿದ್ದಾರೆ.

ಜೈಪುರ ಮೂಲದ ಕಂಪೆನಿ ಸೆಪ್ಟೆಂಬರ್​ 3ರಂದು ರಜೆ ಘೋಷಿಸಿದೆ. ಈ ವಿಶೇಷ ರಜೆಗೆ ‘ನೆಟ್​ಫ್ಲಿಕ್ಸ್​ ಮತ್ತು ಚಿಲ್​ ಹಾಲಿಡೇ’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಕಂಪೆನಿಯ ಸಿಇಒ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಕಳೆದ ಎರಡು ವರ್ಷಗಳಿಂದ ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸೆಪ್ಟೆಂಬರ್​ 3ರಂದು ‘ಮನಿ ಹೈಸ್ಟ್’​ ನೋಡೋಕೆ ನಾವು ಅವಕಾಶ ಮಾಡಿಕೊಡುತ್ತಿದ್ದೇವೆ. ಅಂದು ಸಿಬ್ಬಂದಿಗೆ ರಜೆ ನೀಡುತ್ತಿದ್ದೇವೆ. ನೆಟ್​ಫ್ಲಿಕ್ಸ್​ ಸಬ್​ಸ್ಕ್ರಿಪ್ಶನ್​ ಇಲ್ಲದವರಿಗೆ ಅದನ್ನೂ ನೀಡುತ್ತಿದ್ದೇವೆ’ ಎಂದಿದ್ದಾರೆ ಅಭಿಷೇಕ್.

ಸದ್ಯ, ಈ ಸಿಇಒ ಹೇಳಿಕೆ ಸಾಕಷ್ಟು ವೈರಲ್​ ಆಗುತ್ತಿದೆ. ಅನೇಕರು ಈ ಬಗ್ಗೆ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮನಿ ಹೈಸ್ಟ್​ ಪ್ರೊಫೆಸರ್​ಗೆ ಕಾಡಿತ್ತು ಕ್ಯಾನ್ಸರ್​; ಅವರ ಮುಂದಿತ್ತು ಸಾವು ಅಥವಾ ಕಾಲು ಕತ್ತರಿಸುವ ಆಯ್ಕೆ

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್