KBC 13: ಫುಡ್ ಡೆಲಿವರಿ ಬಾಯ್ ಆದ ಅಮಿತಾಭ್ ಬಚ್ಚನ್; ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಕೆಬಿಸಿ ವೇದಿಕೆ

Amitabh Bachchan: ಹಲವು ಅಪರೂಪದ ಸಂದರ್ಭಗಳಿಗೆ ಸಾಕ್ಷಿಯಾಗುತ್ತಿರುವ ಕೆಬಿಸಿ ವೇದಿಕೆಯಲ್ಲಿ ಇದೀಗ ಅಮಿತಾಭ್ ಬಚ್ಚನ್ ಫುಡ್ ಡೆಲಿವರಿ ಬಾಯ್ ಆಗಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

KBC 13: ಫುಡ್ ಡೆಲಿವರಿ ಬಾಯ್ ಆದ ಅಮಿತಾಭ್ ಬಚ್ಚನ್; ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಕೆಬಿಸಿ ವೇದಿಕೆ
ಅಮಿತಾಭ್ ಬಚ್ಚನ್ ಹಾಗೂ ಆಕಾಶ್
Follow us
TV9 Web
| Updated By: shivaprasad.hs

Updated on:Sep 15, 2021 | 2:41 PM

ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್ ಹಲವು ವಿಶೇಷಗಳಿಗೆ ಸಾಕ್ಷಿಯಾಗುತ್ತಿದೆ. ಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಈಗಾಗಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದಲ್ಲದೇ ಸಾಮಾನ್ಯ ಜನರೂ ಕೂಡ ಶೋನಲ್ಲಿ ಭಾಗವಹಿಸುತ್ತಿದ್ದು, ಬಹುಮಾನ ಗೆಲ್ಲುತ್ತಿದ್ದಾರೆ. ಅಲ್ಲದೇ, ಹಲವು ಅಚ್ಚರಿಯ ಕತೆಗಳಿಗೆ ಕೆಬಿಸಿ ವೇದಿಕೆ ಕಿವಿಯಾಗಿದೆ. ಇಂಥದ್ದೇ ಒಂದು ಅಪರೂಪದ ಸಂದರ್ಭಕ್ಕೆ ಕೆಬಿಸಿ ವೇದಿಕೆ ಸಾಕ್ಷಿಯಾಗಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಹೌದು. ನಿರೂಪಕ, ಅಮಿತಾಭ್ ಬಚ್ಚನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫುಡ್ ಡೆಲಿವರಿ ಬಾಯ್ ಒಬ್ಬರಿಗೆ ತಾವೇ ಆಹಾರವನ್ನು ತಂದುಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೊ ವೈರಲ್ ಆಗಿದ್ದು, ಬಿಗ್​ಬಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಮಿತಾಭ್ ಜೀವನದ ಸವಾಲಿನ ಕುರಿತು ಮಾತನಾಡುತ್ತಾ ವಿಡಿಯೊ ಆರಂಭವಾಗುತ್ತದೆ. ಛಲದಿಂದ ಮುನ್ನುಗ್ಗಿದರೆ ಸವಾಲುಗಳನ್ನು ಮೀರಿ ಯಶಸ್ಸನ್ನು ಗಳಿಸಬಹುದು. ಅದಕ್ಕೆ ಉದಾಹರಣೆ ವೃತ್ತಿಯಲ್ಲಿ ಆಹಾರವನ್ನು ತಲುಪಿಸುವ ಕಾರ್ಯವನ್ನು ಮಾಡುವ ಆಕಾಶ್ ವಾಘ್ಮಾರೆ  ಎಂದು ಅಮಿತಾಭ್ ನುಡಿಯುವುದರೊಂದಿಗೆ ವಿಡಿಯೊ ಆರಂಭವಾಗುತ್ತದೆ.  ನಂತರ ಆಕಾಶ್ ಅವರನ್ನು ವೀಕ್ಷಕರಿಗೆ ಪರಿಚಯಿಸುವ ಅಮಿತಾಭ್, ವಿದ್ಯಾಭ್ಯಾಸಕ್ಕಾಗಿ, ತಮ್ಮ ಕನಸುಗಳ ಸಾಕಾರಕ್ಕಾಗಿ ಪಾರ್ಟ್ ಟೈಮ್ ಜಾಬ್ ರೂಪದಲ್ಲಿ ಹೇಗೆ ಆಕಾಶ್ ಕೆಲಸ ಮಾಡಿದರು ಎಂಬುದನ್ನು ತಿಳಿಸಿದ್ಧಾರೆ. ನಂತರ ಆಕಾಶ್ ತಾವೇ ಸ್ವತಃ ತಮ್ಮ ಬದುಕಿನ ಕುರಿತು ಮಾತನಾಡಿದ್ದಾರೆ.

ಕೊನೆಯಲ್ಲಿ ಅಮಿತಾಭ್, ಆಕಾಶ್ ಕನಸುಗಳ ಕುರಿತು ಮಾತನಾಡಿದ್ದಾರೆ. ‘‘ಒಂದು ದಿನ ಒಬ್ಬ ಡೆಲಿವರಿ ವ್ಯಕ್ತಿ ಬಂದು ಆತನ ಹೆಸರು ಹಿಡಿದು ಕರೆದು, ಆಹಾರವನ್ನು ಡೆಲಿವರಿ ಮಾಡಬೇಕು ಎಂದು ಆಕಾಶ್ ಬಯಸುತ್ತಾರೆ. ಇಂದೇ ಆ ಕನಸು ಸಾಕಾರಗೊಳ್ಳಲಿದೆ. ನಾನು ಆಕಾಶ್ ಅವರಿಗೆ ಆಹಾರವನ್ನು ನೀಡುತ್ತಿದ್ದೇನೆ’’ ಎಂದು ನುಡಿದು ಅಮಿತಾಭ್ ಆಹಾರವನ್ನು ವಿತರಿಸಿದ್ದಾರೆ. ಇದಕ್ಕೆ ಭಾವುಕರಾದ ಆಕಾಶ್, ‘‘ನಾನು ಇದಕ್ಕಾಗಿ ನಿಮಗೆ ಕೃತಜ್ಞನಾಗಿದ್ದೇನೆ’’ ಎಂದು ನುಡಿದಿದ್ದಾರೆ. ಅಮಿತಾಭ್ ಬಚ್ಚನ್ ₹ 2,50,000 ಮೊತ್ತಕ್ಕೆ ಕೇಳಲಾಗುವ 13ನೇ ಪ್ರಶ್ನೆ ಎಂದು ಕೇಳುತ್ತಾ ಪ್ರೋಮೋ ಮುಕ್ತಾಯವಾಗಿದೆ.

ಹೀಗೆ ಕೆಬಿಸಿ ಅನೇಕ ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ಪ್ರತಿ ಶುಕ್ರವಾರ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ‘ಶಾನ್ದಾರ್ ಶುಕ್ರವಾರ್’ ಎಂಬ ಹೆಸರಿನಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಈ ವಾರ ಭಾರತದ ಒಲಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ಶ್ರೀಜಿತ್ ಭಾಗವಹಿಸಲಿದ್ದಾರೆ. ಕಳೆದ ವಾರ ದೀಪಿಕಾ ಪಡುಕೋಣೆ ಹಾಗೂ ಫರಾ ಖಾನ್ ಭಾಗವಹಿಸಿದ್ದರು. ಮೊದಲ ವಾರದಲ್ಲಿ ಖ್ಯಾತ ಕ್ರಿಕೆಟ್ ತಾರೆಯರಾದ ವೀರೇಂದ್ರ ಸೆಹ್ವಾಗ್ ಹಾಗೂ ಸೌರವ್ ಗಂಗೂಲಿ ಭಾಗವಹಿಸಿದ್ದರು.

ಇದನ್ನೂ ಓದಿ:

ಸಮಂತಾ ಬಗ್ಗೆ ಏನೂ ಪ್ರಶ್ನಿಸಬೇಡಿ; ಮಾಧ್ಯಮಗಳಿಗೆ ನಾಗ ಚೈತನ್ಯ ಖಡಕ್​ ಎಚ್ಚರಿಕೆ?

Salaar: ಪ್ರಶಾಂತ್ ನೀಲ್‌ರನ್ನು ಗೋಳು ಹೊಯ್ದುಕೊಂಡ ಶ್ರುತಿ ಹಾಸನ್; ಕಾರಣವೇನು?

(Amitabh Bachchan becomes food delivery boy in KBC 13 watch the video)

Published On - 2:39 pm, Wed, 15 September 21

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ