ಶೀಘ್ರವೇ ನಡೆಯಲಿದೆ ಅನುಬಂಧ ಅವಾರ್ಡ್ಸ್​; ನೀವು ವೋಟ್​ ಮಾಡಬಹುದು

ಕಲರ್ಸ್​ ಕನ್ನಡ ವಾಹಿನಿ ಪ್ರತಿಬಾರಿಯಂತೆ ಈ ಬಾರಿಯೂ ಅನುಬಂಧ ಅವಾರ್ಡ್ಸ್​​ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಪ್ರತಿಬಾರಿ ಇದನ್ನು ಹಬ್ಬದ ರೀತಿಯಲ್ಲಿ ನಡೆಸಲಾಗುತ್ತದೆ.

ಶೀಘ್ರವೇ ನಡೆಯಲಿದೆ ಅನುಬಂಧ ಅವಾರ್ಡ್ಸ್​; ನೀವು ವೋಟ್​ ಮಾಡಬಹುದು
‘ಅನುಬಂಧ ಅವಾರ್ಡ್ಸ್​ಗೆ ನೀವು ವೋಟ್​ ಮಾಡಬಹುದು; ಹೇಗೆ?
Follow us
TV9 Web
| Updated By: Vinay Bhat

Updated on: Sep 16, 2021 | 6:41 AM

ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದರ ಜತೆಗೆ ವರ್ಷಕ್ಕೆ ಒಂದು ಬಾರಿ ಧಾರಾವಾಹಿ ಕಲಾವಿದರನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈಗ ಕಲರ್ಸ್​ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್​ನೊಂದಿಗೆ ವೀಕ್ಷಕರ ಎದುರು ಬರುತ್ತಿದೆ.

ಕಲರ್ಸ್​ ಕನ್ನಡ ವಾಹಿನಿ ಪ್ರತಿಬಾರಿಯಂತೆ ಈ ಬಾರಿಯೂ ಅನುಬಂಧ ಅವಾರ್ಡ್ಸ್​​ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಪ್ರತಿಬಾರಿ ಇದನ್ನು ಹಬ್ಬದ ರೀತಿಯಲ್ಲಿ ನಡೆಸಲಾಗುತ್ತದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಇಟ್ಟುಕೊಂಡು ವಿವಿಧ ರೀತಿಯ ಅವಾರ್ಡ್​ ನೀಡಲಾಗುತ್ತದೆ.

ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ನಾಯಕ, ಜನ ಮೆಚ್ಚಿದ ಜೋಡಿ ಸೇರಿ ಸಾಕಷ್ಟು ಅವಾರ್ಡ್​ಗಳನ್ನು ನೀಡಲಾಗುತ್ತದೆ. ಇದಕ್ಕೆ ವೀಕ್ಷಕರು ವೋಟ್​ ಮಾಡಬೇಕು. ಯಾರು ಹೆಚ್ಚು ವೋಟ್​ ಪಡೆಯುತ್ತಾರೋ ಅವರು ಅನುಬಂಧ ಅವಾರ್ಡ್ಸ್​ಗೆ ಭಾಜನರಾಗುತ್ತಾರೆ.

ವೂಟ್​ ಆ್ಯಪ್​​ನಲ್ಲಿ ವೋಟ್​ ಮಾಡೋಕೆ ಅವಕಾಶ ಕಲ್ಪಿಸಲಾಗಿದೆ. ವೀಕ್ಷಕರು ವೂಟ್​ ಆ್ಯಪ್​ಗೆ ತೆರಳಿ ತಮ್ಮಿಷ್ಟದ ನಟ-ನಟಿಯರಿಗೆ ಹಾಗೂ ಮತ್ತಿತರ ವಿಭಾಗದಲ್ಲಿ ವೋಟ್​ ಮಾಡಿ ಅವರನ್ನು ಗೆಲ್ಲಿಸಬಹುದು. ಅನುಬಂಧ ಅವಾರ್ಡ್ಸ್​ ಕಾರ್ಯಕ್ರಮದ ದಿನ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಈ ಬಾರಿಯ ಅನುಬಂಧ ಅವಾರ್ಡ್ಸ್​ ಕಾರ್ಯಕ್ರಮದ ದಿನಾಂಕವನ್ನು ವಾಹಿನಿ ಇನ್ನೂ ಘೋಷಣೆ ಮಾಡಿಲ್ಲ. ಕೊವಿಡ್​ ನಿಧಾನವಾಗಿ ತಗ್ಗಿದ್ದರಿಂದ ಈ ಬಾರಿ ಅದ್ದೂರಿಯಾಗಿಯೇ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಇನ್ನು ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಕೂಡ ಇರಲಿವೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್​ ಬಾಸ್​ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ; ಎಷ್ಟು ಗಂಟೆಗೆ?

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ