Updated on: Sep 15, 2021 | 12:11 PM
ಪ್ರಸ್ತುತ ಬಾಲಿವುಡ್ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅಡ್ವಾನಿ ಪ್ರಮುಖರು.
ಎಂ.ಎಸ್. ಧೋನಿ: ಅನ್ಟೋಲ್ಡ್ ಸ್ಟೋರಿ, ಕಬೀರ್ ಸಿಂಗ್, ಗುಡ್ ನ್ಯೂಸ್ ಮುಂತಾದ ಚಿತ್ರಗಳಿಂದ ಅವರಿಗೆ ಖ್ಯಾತಿ ಸಿಕ್ಕಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ಶೇರ್ ಷಾ’ ಬಹುದೊಡ್ಡ ಯಶಸ್ಸು ಗಳಿಸಿದ್ದಲ್ಲದ್ದೇ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.
ಕಿಯಾರಾಗೆ ದಕ್ಷಿಣ ಭಾರತದಲ್ಲೂ ಸಖತ್ ಡಿಮ್ಯಾಂಡ್ ಇದೆ. ಅವರು ರಾಮ್ಚರಣ್ ಹಾಗೂ ಶಂಕರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಈ ಹಿಂದೆ ‘ಭರತ್ ಆನೆ ನೇನು’ ಹಾಗೂ ‘ವಿನಯ ವಿಧೇಯ ರಾಮ’ ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದರು.
ಸದ್ಯ ಕಿಯಾರಾ ಕೈಯಲ್ಲಿ ಬಹುನಿರೀಕ್ಷಿತ 4 ಚಿತ್ರಗಳಿವೆ. ಅದಾಗ್ಯೂ ಇವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಬಹಳ ಚ್ಯೂಸಿಯಂತೆ.
ಇದುವರೆಗೆ 14 ಚಿತ್ರಗಳಲ್ಲಿ ನಟಿಸಿರುವ ಕಿಯಾರಾ, ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ.
ಕಿಯಾರಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಾಗಿ ಓಡಾಡುವುದನ್ನು ಕಂಡು ಅವರೀರ್ವರು ರಿಲೇಶನ್ಶಿಪ್ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು.
ಆದರೆ ಈರ್ವರೂ ಕೂಡ ತಾವು ಪ್ರೇಮಿಸುತ್ತಿಲ್ಲ, ಉತ್ತಮ ಗೆಳೆತನವಷ್ಟೇ ಎಂದು ಸ್ಪಷ್ಟನೆ ನೀಡಿದ್ದರು.