ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

ಗಾಸಿಪ್​ ಮಂದಿಯ ಬಾಯಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ಹರಿದಾಡುತ್ತಿರುವ ಈ ಮಾಹಿತಿಯ ಬಗ್ಗೆ ಸೈಫ್​ ಅಲಿ ಖಾನ್ ಆಗಲಿ, ಯಶ್​ ಆಗಲಿ ಏನೂ ಹೇಳಿಕೆ ನೀಡಿಲ್ಲ.

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?
ಯಶ್, ಸೈಫ್ ಅಲಿ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 14, 2021 | 1:20 PM

ಸಿನಿಮಾಗಳ ಆಯ್ಕೆಯಲ್ಲಿ ನಟ ಯಶ್​ ಸಿಕ್ಕಾಪಟ್ಟೆ ಎಚ್ಚರಿಕೆ ವಹಿಸುತ್ತಾರೆ. ಒಳ್ಳೆಯ ಕಥೆ, ಪಾತ್ರ ಮತ್ತು ಟೀಮ್​ಗೆ ಅವರು ಮೊದಲ ಮಹತ್ವ ನೀಡುತ್ತಾರೆ. ಆ ಕಾರಣದಿಂದಲೇ ಯಶ್​ಗೆ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದಿಂದ ಭರ್ಜರಿ ಯಶಸ್ಸು ಸಿಕ್ಕಿತು. ಆ ಚಿತ್ರದ ಗೆಲುವಿನ ಬಳಿಕ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮಿದರು. ಅಲ್ಲದೇ, ಯಶ್​ಗೆ ಎಲ್ಲ ಭಾಷೆಗಳಿಂದಲೂ ಆಫರ್​ ಬರಲು ಶುರುವಾಯಿತು. ಆದರೆ ಅವರು ಎಲ್ಲ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಹಾಗೆ ಯಶ್​ ರಿಜೆಕ್ಟ್​ ಮಾಡಿದ್ದ ಒಂದು ಸಿನಿಮಾದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋಲು ಕಂಡರು ಎಂಬ ಸುದ್ದಿ ಈಗ ಹರಿದಾಡುತ್ತಿದೆ.

2019ರ ಅಕ್ಟೋಬರ್​ನಲ್ಲಿ ಸೈಫ್​ ಅಲಿ ಖಾನ್​ ನಟನೆಯ ‘ಲಾಲ್​ ಕಪ್ತಾನ್​’ ಸಿನಿಮಾ ತೆರೆಕಂಡಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಆ ಚಿತ್ರ ಮುಗ್ಗರಿಸಿತು. ಸೈಫ್​ ಅಭಿಮಾನಿಗಳು ಆ ಸಿನಿಮಾದಿಂದ ನಿರಾಶರಾದರು. ಅಚ್ಚರಿ ಎಂದರೆ ಆ ಚಿತ್ರದಲ್ಲಿ ಹೀರೋ ಆಗಿ ನಟಿಸುವಂತೆ ಸೈಫ್​ಗಿಂತಲೂ ಮುನ್ನ ಯಶ್​ಗೆ ಆಫರ್​ ನೀಡಲಾಗಿತ್ತಂತೆ. ಆದರೆ ಕಥೆ ಮತ್ತು ಪಾತ್ರ ಇಷ್ಟವಾಗದ ಕಾರಣ ಯಶ್​ ಆ ಅವಕಾಶವನ್ನು ಸ್ವೀಕರಿಸಿರಲಿಲ್ಲ. ಅವರು ರಿಜೆಕ್ಟ್​ ಮಾಡಿದ ಬಳಿಕ ಆ ಸಿನಿಮಾ ಸೈಫ್​ ಮಡಿಲಿಗೆ ಹೋಯಿತು ಎನ್ನಲಾಗುತ್ತಿದೆ.

ಗಾಸಿಪ್​ ಮಂದಿಯ ಬಾಯಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ಹರಿದಾಡುತ್ತಿರುವ ಈ ಮಾಹಿತಿಯ ಬಗ್ಗೆ ಸೈಫ್​ ಆಗಲಿ, ಯಶ್​ ಆಗಲಿ ಏನೂ ಹೇಳಿಕೆ ನೀಡಿಲ್ಲ. ‘ಲಾಲ್​ ಕಪ್ತಾನ್​’ ಸಿನಿಮಾದಲ್ಲಿ ಸೈಫ್ ಅಲಿ ಖಾನ್​ಗೆ ವಿಭಿನ್ನ ಪಾತ್ರ ಇತ್ತು. ಅಘೋರಿಯ ರೂಪದಲ್ಲಿ ಅವರು ಕಾಣಿಸಿಕೊಂಡಿದ್ದರು. 1700ನೇ ಇಸವಿ ಸಂದರ್ಭದಲ್ಲಿ ನಡೆಯುವ ಕಥೆಯನ್ನು ಆ ಚಿತ್ರ ಒಳಗೊಂಡಿತ್ತು. ನವದೀಪ್​ ಸಿಂಗ್​ ನಿರ್ದೇಶನ ಮಾಡಿದ್ದರು.

ಸದ್ಯ ಯಶ್​ ಗಮನವೆಲ್ಲ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೇಲಿದೆ. ಕೊರೊನಾ ವೈರಸ್​ ಹಾವಳಿಯಿಂದಾಗಿ ಆ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. 2022ರ ಏಪ್ರಿಲ್​ 14ರಂದು ‘ಕೆಜಿಎಫ್​ 2’ ಬಿಡುಗಡೆ ಆಗಲಿದೆ. ಪ್ರಶಾಂತ್​ ನೀಲ್​-ಯಶ್​ ಕಾಂಬಿನೇಷನ್​ನ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ರವೀನಾ ಟಂಡನ್​, ಸಂಜಯ್​ ದತ್​ ಕಾಣಿಸಿಕೊಳ್ಳುವುದರಿಂದ ಉತ್ತರ ಭಾರತದ ಸಿನಿಪ್ರಿಯರಲ್ಲೂ ಕಾತರ ಹೆಚ್ಚಿದೆ.

ಇದನ್ನೂ ಓದಿ:

ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್​ ನಂ.1, ಯಶ್​ಗೆ 5ನೇ ಸ್ಥಾನ; ಇದು ಯಾವ​ ಹಣಾಹಣಿ?

ಯಶ್​-ರಾಧಿಕಾ ಪಂಡಿತ್​ ಚಿತ್ರರಂಗದ ಬೆಸ್ಟ್​ ಕಪಲ್​; ಮನಃಪೂರ್ವಕವಾಗಿ ಹೊಗಳಿದ ಪರಭಾಷಾ ನಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ