ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಸೀಸನ್ 8ರಲ್ಲಿ ಭೇಟಿ ಆಗುವುದಕ್ಕೂ ಮೊದಲೇ ಉತ್ತಮ ಗೆಳೆಯರು. ಆದರೆ, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಇವರ ಗೆಳೆತನ ಕೆಟ್ಟು ಹೋಯಿತು. ನಾನಾ ವಿಚಾರಗಳಿಗೆ ಇಬ್ಬರ ನಡುವೆ ವೈಮನಸ್ಸು ಬೆಳೆದಿದೆ. ಈ ವಿಚಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೂ ಮುಂದುವರಿದಿದೆ. ಈಗ ಪ್ರಶಾಂತ್ ಸಂಬರಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲು ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರಿಗೆ ಚಂದ್ರಚೂಡ್ ದೂರುನೀಡಿದ್ದಾರೆ. ‘ರಾಜಕೀಯ ವ್ಯಕ್ತಿ, ಸಿನಿಮಾ ನಟ-ನಟಿಯರ ವಿರುದ್ಧ ಸಾಕ್ಷ್ಯಗಳು ಇಲ್ಲದೆ ಪ್ರಶಾಂತ್ ಸಂಬರಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತ ಸಂಬರಗಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳುವಂತೆ’ ಅವರು ಕೋರಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ ಕೇಸ್ಗೆ ಸಂಬಂಧಿಸಿ ಪ್ರಶಾಂತ್ ಸಂಬರಗಿ ಸಾಕಷ್ಟು ರೀತಿಯ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಎದುರು ಬರುವ ಪ್ರಶಾಂತ್ ವಿವಿಧ ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ಆ್ಯಂಕರ್ ಅನುಶ್ರೀ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು.
ಇತ್ತೀಚೆಗೆ ಚಕ್ರವರ್ತಿ ಚಂದ್ರಚೂಡ್ ಪ್ರಶಾಂತ್ ವಿರುದ್ಧ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ‘ಬಿಗ್ ಬಾಸ್ನ ಎರಡನೇ ಇನ್ನಿಂಗ್ಸ್ನ ಕ್ವಾರೈಂಟೈನ್ ಸಂದರ್ಭದಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು (ಚಾನಲ್ ನಿಯಮಾವಳಿ ವಿರೋಧಿಸಿ) ವಿಡಿಯೋ ಮಾಡಿದ. ಸದ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು. ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ’ ಎಂದು ಚಂದ್ರಚೂಡ್ ಆರೋಪಿಸಿದ್ದರು.
‘ಅರವಿಂದ್ ವಿಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ. ಇವನ ಮಾತ್ರೋಶ್ರೀ ಪುಷ್ಪ ಸಂಬರಗಿ ಅವರ ತಲೆಮೆಲೆ ಕೈಇಟ್ಟು ಹೇಳಲಿ ಇಂತಹ ಕೆಲಸ ಮಾಡಲಿಲ್ಲವೆಂದು. ಇಲ್ಲ, ತನ್ನ ಮೊಬೈಲ್ ಅನ್ನು ಪೋಲೀಸರ ತನಿಖೆಗೆ ಕೊಡಲಿ. ನಿಜಕ್ಕೂ ಕಲರ್ಸ್ನ ಆಯೋಜಕರು ಯಾವ ಪರಿ ಬುದ್ಧಿವಾದ ಹೇಳಿ ಈತನಿಗಾಗಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು’ ಎಂದು ಚಂದ್ರಚೂಡ್ ಬರೆದುಕೊಂಡಿದ್ದರು.
ಇದನ್ನೂ ಓದಿ: ನವೆಂಬರ್ 1ಕ್ಕೆ ಶುಗರ್ ಡ್ಯಾಡಿ ಪುಸ್ತಕ ರಿಲೀಸ್; ಶೀಘ್ರವೇ 28 ಸೆಕೆಂಡ್ಗಳ ಆಡಿಯೊ ಬಾಂಬ್: ಪ್ರಶಾಂತ್ ಸಂಬರಗಿ
‘ನಾನಿರೋದು ಬಾಡಿಗೆ ಮನೆಯಲ್ಲಿ’; ಪ್ರಶಾಂತ್ ಸಂಬರಗಿಗೆ ತಿರುಗೇಟು ನೀಡಿದ ಅನುಶ್ರೀ