ಸಾಯಿ ಪಲ್ಲವಿ-ನಾಗ ಚೈತನ್ಯ ಲವ್​ ಸ್ಟೋರಿ ಬಗ್ಗೆ ಮೌನ ಮುರಿದ ಸಮಂತಾ; ಡಿವೋರ್ಸ್​ ವದಂತಿಗೆ ಬ್ರೇಕ್​

ಗಂಡನ ಸಿನಿಮಾ ಬಗ್ಗೆ ಸಮಂತಾ ಕೊನೆಗೂ ಮೌನ ಮುರಿದಿದ್ದಾರೆ. ನಾಗ ಚೈತನ್ಯ ಮಾಡಿರುವ ಟ್ವೀಟ್​ ಅನ್ನು ರೀಟ್ವೀಟ್ ಮಾಡಿರುವ ಸಮಂತಾ, ‘ವಿನ್ನರ್​’ ಎಂದು ಹೊಗಳಿದ್ದಾರೆ.

ಸಾಯಿ ಪಲ್ಲವಿ-ನಾಗ ಚೈತನ್ಯ ಲವ್​ ಸ್ಟೋರಿ ಬಗ್ಗೆ ಮೌನ ಮುರಿದ ಸಮಂತಾ; ಡಿವೋರ್ಸ್​ ವದಂತಿಗೆ ಬ್ರೇಕ್​
ನಾಗ ಚೈತನ್ಯ, ಸಾಯಿ ಪಲ್ಲವಿ, ಸಮಂತಾ ಅಕ್ಕಿನೇನಿ

ನಟಿ ಸಮಂತಾ ಅಕ್ಕಿನೇನಿ ಅವರು ಸಾರ್ವಜನಿಕವಾಗಿ ತಮ್ಮ ಪತಿ ನಾಗ ಚೈತನ್ಯ ಬಗ್ಗೆ ಮಾತನಾಡದೇ ಹಲವು ತಿಂಗಳೇ ಕಳೆದಿದ್ದವು. ಅಲ್ಲದೇ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಇನ್ನೇನು ವಿಚ್ಛೇದನ ಕೂಡ ಪಡೆಯುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಸಮಂತಾ ವರ್ತನೆಗಳು ಕೂಡ ಅದಕ್ಕೆ ಪುಷ್ಠಿ ನೀಡುವಂತೆಯೇ ಇದ್ದವು. ಆದರೆ ಈಗ ಬಹುದಿನಗಳ ಬಳಿಕ ಪತಿ ನಾಗ ಚೈತನ್ಯ ಸಿನಿಮಾ ಬಗ್ಗೆ ಸಮಂತಾ ಮಾತನಾಡಿದ್ದಾರೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಜೊತೆಯಾಗಿ ‘ಲವ್​ ಸ್ಟೋರಿ’ ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಅದರ ಬಗ್ಗೆ ಸಮಂತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಟ್ರೇಲರ್​ ಹಂಚಿಕೊಳ್ಳಲು ತುಂಬ ಖುಷಿ ಆಗುತ್ತಿದೆ. ನಿಮ್ಮೆಲ್ಲರನ್ನು ಮತ್ತೆ ಥಿಯೇಟರ್​ನಲ್ಲಿ ಭೇಟಿಯಾಗಲು ಕಾಯುತ್ತಿದ್ದೇನೆ’ ಎಂದು ನಾಗ ಚೈತನ್ಯ ಸೋಮವಾರ (ಸೆ.13) ಟ್ವೀಟ್​ ಮಾಡಿದ್ದರು. ಅದಕ್ಕೆ ಸಮಂತಾ ಏನಾದರೂ ಪ್ರತಿಕ್ರಿಯೆ ನೀಡುತ್ತಾರೋ ಇಲ್ಲವೋ ಎಂಬ ಬಗ್ಗೆ ಜನರಿಗೆ ಕೌತುಕ ಮನೆ ಮಾಡಿತ್ತು. ಗಂಡನ ಸಿನಿಮಾ ಬಗ್ಗೆ ಸಮಂತಾ ಕೊನೆಗೂ ಮೌನ ಮುರಿದಿದ್ದಾರೆ. ನಾಗ ಚೈತನ್ಯ ಮಾಡಿರುವ ಟೀಟ್​ ಅನ್ನು ರೀಟ್ವೀಟ್ ಮಾಡಿರುವ ಸಮಂತಾ, ‘ವಿನ್ನರ್​’ ಎಂದು ಹೊಗಳಿದ್ದಾರೆ. ನಾಯಕಿ ಸಾಯಿ ಪಲ್ಲವಿ ಮತ್ತು ಇಡೀ ತಂಡಕ್ಕೆ ಅವರು ಶುಭ ಹಾರೈಸಿದ್ದಾರೆ.

ಗಂಡನ ಸಿನಿಮಾದ ಟ್ರೇಲರ್​ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿ, ಶುಭಕೋರಿದ್ದರಿಂದ ಅವರ ಸಂಸಾರದಲ್ಲಿ ಯಾವುದೇ ಬಿರುಕು ಇದ್ದಂತಿಲ್ಲ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೂ ಅನುಮಾನ ಹೊಗೆಯಾಡುತ್ತಲೇ ಇದೆ. ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ‘ಅಕ್ಕಿನೇನಿ’ ಎಂಬ ಸರ್​ನೇಮ್​ ತೆಗೆದುಹಾಕಿದ ಬಳಿಕ ಡಿವೋರ್ಸ್​ ವದಂತಿ ಕೇಳಿಬರಲಾರಂಭಿಸಿತು. ಆ ಬಗ್ಗೆ ಅಕ್ಕಿನೇನಿ ಕುಟುಂಬದ ಯಾರೋಬ್ಬರೂ ಅಧಿಕೃತವಾಗಿ ಈವರೆಗೆ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ:

ಮಗ-ಸೊಸೆಯ ಡಿವೋರ್ಸ್​ ತೀರ್ಮಾನಕ್ಕೆ ಹೇಗೆ ಸಹಾಯ ಮಾಡ್ತಿದ್ದಾರೆ ನಾಗಾರ್ಜುನ? ಟಾಲಿವುಡ್​ ಗಲ್ಲಿಯಲ್ಲಿ ಗುಸುಗುಸು

ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ

Click on your DTH Provider to Add TV9 Kannada