ರಾಣಿ ಮುಖರ್ಜಿ ಅಜ್ಜಿ ಆರತಿ ರಾಯ್ ನಿಧನ; ಸಂತಾಪ ಸೂಚಿಸಿದ ಬೆಂಗಾಲಿ ಚಿತ್ರರಂಗ

ದೇಬಶ್ರೀ ಅವರು ಬೆಂಗಾಲಿ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯನ್ನು ಪರಿಗಣಿಸಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ದೇಬಶ್ರೀ ಈ ಮಟ್ಟಕ್ಕೆ ಬೆಳೆಯಲು ಅವರ ತಾಯಿಯೇ ಕಾರಣವಂತೆ.

ರಾಣಿ ಮುಖರ್ಜಿ ಅಜ್ಜಿ ಆರತಿ ರಾಯ್ ನಿಧನ; ಸಂತಾಪ ಸೂಚಿಸಿದ ಬೆಂಗಾಲಿ ಚಿತ್ರರಂಗ
ರಾಣಿ ಮುಕರ್ಜಿ-ಆರತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 09, 2022 | 5:34 PM

ರಾಣಿ ಮುಖರ್ಜಿ(Rani Mukerji) ಅವರ ಅಜ್ಜಿ, ಖ್ಯಾತ ಬೆಂಗಾಲಿ ನಟಿ ದೇಬಶ್ರೀ ಅವರ ತಾಯಿ ಆರತಿ ರಾಯ್ (Arati Roy) ಅವರು ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರತಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಮಂಗಳವಾರ (ನವೆಂಬರ್ 8) ಅವರು ನಿಧನ ಹೊಂದಿದ್ದಾರೆ. ಕೆಲ ತಿಂಗಳಿಂದ ಆರತಿ ತಮ್ಮ ಹಿರಿಯ ಮಗಳ ಜತೆ ವಾಸ ಮಾಡುತ್ತಿದ್ದರು.

ದೇಬಶ್ರೀ ಅವರು ಬೆಂಗಾಲಿ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯನ್ನು ಪರಿಗಣಿಸಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ದೇಬಶ್ರೀ ಈ ಮಟ್ಟಕ್ಕೆ ಬೆಳೆಯಲು ಅವರ ತಾಯಿಯೇ ಕಾರಣವಂತೆ. ಈ ವಿಚಾರವನ್ನು ದೇಬಶ್ರೀ ಅನೇಕ ಬಾರಿ ಹೇಳಿಕೊಂಡಿದ್ದಿದೆ. ಪ್ರತಿ ಹಂತದಲ್ಲೂ ಅವರು ತಾಯಿಗೆ ಧನ್ಯವಾದ ಹೇಳುತ್ತಲೇ ಬಂದಿದ್ದಾರೆ.

‘ನಾನು ನನ್ನ ತಾಯಿಯಿಂದ ನಟಿಯಾದೆ. ಅವರು ನನ್ನನ್ನು ನಟಿ ಮಾಡಲು ಸಾಕಷ್ಟು ಶ್ರಮಿಸಿದರು. ಅವರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಉಸಿರು ಹೋಗುವ ಸಂದರ್ಭದಲ್ಲಿ ಮೂವರು ಹೆಣ್ಣು ಮಕ್ಕಳು ಅವರ ಪಕ್ಕದಲ್ಲೇ ಇದ್ದರು. ಅವರು ಸಾಯುವಾಗಲೂ ಖುಷಿಯಿಂದ ಇದ್ದರು’ ಎಂದಿದ್ದಾರೆ ದೇಬಶ್ರೀ.

ಈ ವರ್ಷ ಆಗಸ್ಟ್​ ತಿಂಗಳಲ್ಲಿ ಆರತಿ ಅವರು ಮನೆಯಲ್ಲಿ ನಡೆಯುವಾಗ ಆಯತಪ್ಪಿ ಬಿದ್ದಿದ್ದರು. ಈ ವೇಳೆ ಅವರಿಗೆ ಗಂಭೀರ ಗಾಯಗಳಾಗಿತ್ತು. ರಕ್ತಸ್ರಾವ ಆಗಿ ಅವರು ಮೂರ್ಚೆ ತಪ್ಪಿದ್ದರು. ವಯೋ ಸಹಜ ಕಾಯಿಲೆಗಳು ಇದ್ದಿದ್ದರಿಂದ ಚೇತರಿಸಿಕೊಳ್ಳೋದು ಆರತಿಗೆ ಕಷ್ಟವಾಗಿತ್ತು. ಇಲ್ಲಿಯವರೆಗೂ ಅವರು ಚಿಕಿತ್ಸೆ ಪಡೆಯುತ್ತಲೇ ಇದ್ದರು. ಈಗ ಅವರು ಕೊನೆಯುಸಿರು ಎಳೆದಿದ್ದಾರೆ. ದೇಬಶ್ರೀ ಅವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬೆಂಗಾಲಿ ಚಿತ್ರರಂಗದವರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ರಾಣಿ ಮುಖರ್ಜಿಗೆ ಟೊಮ್ಯಾಟೋ ರೇಟ್​ ಕೇಳಿದ ಮಹಿಳೆಯರು; ಉತ್ತರ ಹೇಳಲು ತಡವರಿಸಿದ ನಟಿ

ಆರತಿ ರಾಯ್ ಅವರು ರಾಣಿ ಮುಖರ್ಜಿಯ ಅಜ್ಜಿ. ರಾಣಿ ಮುಖರ್ಜಿಯ ತಾಯಿ ಕೃಷ್ಣಾ ಮುಖರ್ಜಿ ಹಾಗೂ ದೇಬಶ್ರೀ ಸಹೋದರಿಯರು. ರಾಣಿ ಮುಖರ್ಜಿ ಅವರಿಗೆ ಅನಾರೋಗ್ಯ ಕಾಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರು ಆರತಿ ಅಂತ್ಯಸಂಸ್ಕಾರದಲ್ಲಿ ಭಾಗಿ ಆಗುತ್ತಿಲ್ಲ.

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್