AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್​: ಇರ್ಫಾನ್ ಪಠಾಣ್

IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗವನ್ನು ಸಂಪಾದಿಸಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಒಂದೇ ಒಂದು ಕಪ್ ಗೆಲ್ಲದಿದ್ದರೂ ಇಷ್ಟೊಂದು ಫ್ಯಾನ್ಸ್ ಬೇಸ್ ಉಳಿಸಿಕೊಳ್ಳುವುದು ಸುಲಭವಲ್ಲ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

TV9 Web
| Updated By: Digi Tech Desk

Updated on:Feb 14, 2024 | 3:05 PM

16 ವರ್ಷಗಳು...ಒಂದೇ ಒಂದು ಕಪ್ ಗೆದ್ದಿಲ್ಲ...ಪ್ರತಿ ಸೀಸನ್​ನಲ್ಲೂ ಲೆಕ್ಕಾಚಾರ...ಕೊನೆಗೆ ನೋವಿನ ವಿದಾಯ...ಇದಾಗ್ಯೂ ಅಂದಿಗೂ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸ, ಕಪ್ ಕೈ ತಪ್ಪಿದ್ದರೆ ಮುಂದಿನ ವರ್ಷ ನಮ್ದೆ ಎನ್ನುವ ಭರವಸೆ.

1 / 7
ಹೀಗಾಗಿಯೇ ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳಿದ್ದರೆ ಅದು RCB ಫ್ಯಾನ್ಸ್​ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೊಂಡಾಡಿರುವುದು. ಅಂತಹದೊಂದು ವಿಶೇಷ ಅಭಿಮಾನಿಗಳ ಬಳಗವನ್ನೇ ಆರ್​ಸಿಬಿ ಸಂಪಾದಿಸಿಕೊಂಡಿದೆ.

2 / 7
ಈ ಬಗ್ಗೆ ಮಾತನಾಡಿರುವ ಇರ್ಫಾನ್ ಪಠಾಣ್, ಆರ್​ಸಿಬಿ ತಂಡಕ್ಕೆ ಇರುವಂತಹ ಅಭಿಮಾನಿಗಳ ಬಳಗವನ್ನು ಈವರೆಗೆ ನಾನೆಲ್ಲೂ ನೋಡಿಲ್ಲ. ನನ್ನ ಪ್ರಕಾರ, ಇಂತಹ ಫ್ಯಾನ್ ಬೇಸ್ ವಿಶ್ವದ ಯಾವುದೇ ತಂಡಕ್ಕಿಲ್ಲ. ಅಂತಹದೊಂದು ಅಭಿಮಾನಿಗಳ ಬಳಗವನ್ನು ಆರ್​ಸಿಬಿ ತಂಡ ಹೊಂದಿದೆ.

3 / 7
ಆರ್​ಸಿಬಿ ತಂಡವು ಇದುವರೆಗೆ ಕಪ್ ಗೆದ್ದಿಲ್ಲ ಎಂಬುದು ನಿಜ. ಆದರೂ ಅಭಿಮಾನಿಗಳ ಬಳಗದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಡೀ ವಿಶ್ವದಲ್ಲೇ ಅತ್ಯಂತ ನಿಷ್ಠಾವಂತ ಅಭಿಮಾನಿಗಳೆಂದರೆ ಅದು ಆರ್​ಸಿಬಿ ಫ್ಯಾನ್ಸ್​ ಮಾತ್ರ. ಒಂದು ವೇಳೆ ಆರ್​ಸಿಬಿ ಕಪ್ ಗೆದ್ದರೆ ಅದುವೇ ಐಪಿಎಲ್​ ಇತಿಹಾಸದ ಅತೀ ದೊಡ್ಡ ಮೂಮೆಂಟ್ ಆಗಿರಲಿದೆ ಎಂದು ಇರ್ಫಾನ್ ಪಠಾಣ್ ಭವಿಷ್ಯ ನುಡಿದಿದ್ದಾರೆ.

4 / 7
2016 ರಲ್ಲಿ ಆರ್​ಸಿಬಿ ಕಪ್ ಗೆಲ್ಲುವ ಸನಿಹಕ್ಕೆ ಬಂದಿತ್ತು. ನಾನು ಆ ವರ್ಷ ಕಪ್ ಆರ್​ಸಿಬಿ ತಂಡದ್ದೇ ಎಂದುಕೊಂಡಿದ್ದೆ. ಆದರೆ ಅಂತಿಮ ಹಂತದಲ್ಲಿ ಎಡವಿತು. ಒಂದು ವೇಳೆ ವಿರಾಟ್ ಕೊಹ್ಲಿ ಮತ್ತು ಆರ್​ಸಿಬಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ ಅದುವೇ ಹೊಸ ಇತಿಹಾಸವಾಗಲಿದೆ. ಅದುವೇ ಐಪಿಎಲ್​ನ ಅತೀ ದೊಡ್ಡ ಕ್ಷಣವಾಗಲಿದೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.

5 / 7
ಈ ಬಾರಿಯ ಐಪಿಎಲ್​ಗಾಗಿ ಆರ್​ಸಿಬಿ ತಂಡವು 25 ಸದಸ್ಯರ ಬಲಿಷ್ಠ ಬಳಗವನ್ನು ರೂಪಿಸಿದೆ. ಈ ತಂಡದಲ್ಲಿ ಹೊಸದಾಗಿ ಅಲ್ಝಾರಿ ಜೋಸೆಫ್, ಲಾಕಿ ಫರ್ಗುಸನ್, ಟಾಮ್ ಕರನ್​ನಂತಹ ಸ್ಟಾರ್ ಆಟಗಾರರ ಎಂಟ್ರಿಯಾಗಿದೆ. ಹೀಗಾಗಿ ಈ ಬಾರಿ ಕಪ್ ನಮ್ದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಆರ್​ಸಿಬಿ ಅಭಿಮಾನಿಗಳು.

6 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

7 / 7

Published On - 8:17 am, Tue, 13 February 24

Follow us
"ಮೋದಿ ಹೆಸರು ಹೇಳಲೂ ಹೆದರುವ ಹೇಡಿ ನಮ್ಮ ಪ್ರಧಾನಿ": ಪಾಕ್​ ಸಂಸದ ವ್ಯಂಗ್ಯ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ

ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF

ಬಂಕರ್​ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ

ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ

ಸೇನೆಯೊಂದಿಗೆ ನಾವಿದ್ದೇವೆ ಅಂತ ಸೂಚಿಸಲು ತಿರಂಗ ಯಾತ್ರೆ: ದಿನೇಶ್ ಗುಂಡೂರಾವ್

ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’

ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?

Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ

Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ