ನೂರಾರು ಕೋಟಿಯ ಒಡತಿ ಕಂಗನಾ ರಣಾವತ್​ಗೆ ಇಲ್ಲ ಭಯ; ಡಾಕ್ಟರ್ ಆಗಬೇಕಿದ್ದವರು ನಟಿಯಾದರು

Kangana Ranauat Birthday: ಕಂಗನಾ ರಣಾವತ್ ಜನಿಸಿದ್ದು 1987ರ ಮಾರ್ಚ್ 23ರಂದು. ಹಿಮಾಚಲ ಪ್ರದೇಶದ ಸೂರಜ್‌ಪುರ ಅವರ ಹುಟ್ಟೂರು. ಕೃಷಿ ಹಿನ್ನೆಲೆಯನ್ನು ಅವರ ಕುಟುಂಬ ಹೊಂದಿದೆ. ಅಚ್ಚರಿ ವಿಚಾರ ಎಂದರೆ ಕಂಗನಾ ಕುಟುಂಬದವರ ಈಗಲೂ ಊರಲ್ಲಿ ಕೃಷಿಯನ್ನೇ ಮಾಡುತ್ತಿದ್ದಾರೆ.

ನೂರಾರು ಕೋಟಿಯ ಒಡತಿ ಕಂಗನಾ ರಣಾವತ್​ಗೆ ಇಲ್ಲ ಭಯ; ಡಾಕ್ಟರ್ ಆಗಬೇಕಿದ್ದವರು ನಟಿಯಾದರು
ಕಂಗನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 23, 2024 | 6:38 AM

ಕಂಗನಾ ರಣಾವತ್ (Kangana Ranauat) ಅವರಿಗೆ ಇಂದು (ಮಾರ್ಚ್ 23) ಬರ್ತ್​ಡೇ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರ ನಟನೆಯ ‘ಎಮರ್ಜೆನ್ಸಿ’ ಚಿತ್ರದಿಂದ ವಿಶೇಷ ಪೋಸ್ಟರ್ ರಿಲೀಸ್ ಆಗೋ ಸಾಧ್ಯತೆ ಇದೆ. ಕಂಗನಾ ರಣಾವತ್ ದಿಟ್ಟ ಹೇಳಿಕೆಗಳ ಮೂಲಕ ಆಗಾಗ ಚರ್ಚೆ ಆಗುತ್ತಾ ಇರುತ್ತಾರೆ. ಯಾವುದೇ ವಿಷಯ ಇದ್ದರೂ ಅದನ್ನು ನಿಷ್ಠುರವಾಗಿ ಹೇಳಿ ಟೀಕೆಗೆ ಒಳಗಾಗಿದ್ದೂ ಇದೆ. ಆದರೆ, ಏನೇ ಹೇಳುವುದಾದರೂ ಅವರು ಭಯ ಬೀಳುವುದಿಲ್ಲ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ಪ್ರವೇಶಿಸಿದ ಅವರು ಈಗ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಅವರಿಗೆ ಈಗ 37 ವರ್ಷ ವಯಸ್ಸು. ಈವರೆಗೆ ಅವರು ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಅವರು ಹೊಂದಿದ್ದಾರೆ.

ಕಂಗನಾ ರಣಾವತ್ ಅವರು ಜನಿಸಿದ್ದು 1987ರ ಮಾರ್ಚ್ 23ರಂದು. ಹಿಮಾಚಲ ಪ್ರದೇಶದ ಸೂರಜ್‌ಪುರ ಅವರ ಹುಟ್ಟೂರು. ಕೃಷಿ ಹಿನ್ನೆಲೆಯನ್ನು ಅವರ ಕುಟುಂಬ ಹೊಂದಿದೆ. ಅಚ್ಚರಿ ವಿಚಾರ ಎಂದರೆ ಕಂಗನಾ ಕುಟುಂಬದವರ ಈಗಲೂ ಊರಲ್ಲಿ ಕೃಷಿಯನ್ನೇ ಮಾಡುತ್ತಿದ್ದಾರೆ. ಕಂಗನಾ ಪಾಲಕರಿಗೆ ಮಗಳು ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಆದರೆ ಕಂಗನಾ ಆಸೆಯೇ ಬೇರೆ ಇತ್ತು. ಬಾಲ್ಯದಿಂದಲೂ ನಟಿಯಾಗಬೇಕೆಂಬ ಕನಸು ಕಂಡರು. ಇದಕ್ಕಾಗಿ ಅವರು 16 ನೇ ವಯಸ್ಸಿಗೆ ಮನೆಯಿಂದ ಓಡಿ ಬಂದರು. ನಂತರ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.

ಕಂಗನಾಗೆ ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಕ್ಕಿತು. ಚಿತ್ರರಂಗದಲ್ಲಿ ಛಾಪು ಮೂಡಿಸುವುದು ಅವರಿಗೆ ಸುಲಭ ಆಗಿರಲಿಲ್ಲ. ದೊಡ್ಡ ಹೆಸರು ಮಾಡಲು ಅವರು ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಆದರೂ ಕಂಗನಾ ಛಲಬಿಡಲಿಲ್ಲ ಈ ಕಠಿಣ ಪರಿಶ್ರಮದಿಂದಲೇ ಅವರು ಬಾಲಿವುಡ್‌ನಲ್ಲಿ ಗುಂಪುಗಾರಿಕೆ ಮಾಡಲು ಹೆಚ್ಚು ಆಸಕ್ತಿ ತೋರಿಸುವುದಿಲ್ಲ.

ಕಂಗನಾ ರಣಾವತ್ ಅವರನ್ನು ಬಾಲಿವುಡ್​ನ ಕ್ವೀನ್ ಎಂದು ಫ್ಯಾನ್ಸ್ ಕರೆಯುತ್ತಾರೆ. ಕಂಗನಾ 2006ರಲ್ಲಿ ರಿಲೀಸ್ ಆದ ‘ಗ್ಯಾಂಗ್​ಸ್ಟರ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈಗ ಅವರು ಬಣ್ಣದ ಲೋಕಕ್ಕೆ ಬಂದು 18 ವರ್ಷಗಳು ಕಳೆದಿವೆ. ಕಂಗನಾಗೆ ಅನೇಕ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಬಾಲಿವುಡ್ ‘ಕ್ವೀನ್’ ಕಂಗನಾ ರಣಾವತ್ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಂಗನಾ ತುಂಬಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ಕಂಗನಾ ನಟಿ ಮಾತ್ರವಲ್ಲ, ಅವರು ನಿರ್ದೇಶಕಿ ಹಾಗೂ ನಿರ್ಮಾಪಕಿ ಕೂಡ ಹೌದು. ‘ಎಮರ್ಜೆನ್ಸಿ’ ಚಿತ್ರವನ್ನು ಅವರು ನಿರ್ದೇಶಿಸಿದ್ದಾರೆ. ನಿರ್ಮಾಣದಲ್ಲಿ ಅವರದ್ದೂ ಪಾಲಿದೆ. ಕಂಗನಾ ಗಳಿಕೆಯ ಬಗ್ಗೆ ಹೇಳುವುದಾದರೆ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾರೆ. ಕೆಲವು ವರದಿ ಪ್ರಕಾರ ಕಂಗನಾ ಅವರ ಒಟ್ಟೂ ಆಸ್ತಿ ಸುಮಾರು 124 ಕೋಟಿ ರೂಪಾಯಿ. ಕಂಗನಾ ಪ್ರತಿ ತಿಂಗಳು 1 ಕೋಟಿ ರೂಪಾಯಿಗೂ ಹೆಚ್ಚು ಸಂಪಾದನೆ ಮಾಡುತ್ತಾರೆ.

ಕಂಗನಾ ರಣಾವತ್ ಚಲನಚಿತ್ರಗಳಲ್ಲಿ ಮಾತ್ರವಲ್ಲ, ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಇದರಿಂದಲೂ ಹಣ ಬರುತ್ತದೆ. ಮುಂಬೈನಲ್ಲಿ ಕಂಗನಾ ಅವರು ಐಷಾರಾಮಿ ಫ್ಲಾಟ್ ಹೊಂದಿದ್ದಾರೆ. ಪ್ರವಾಸಿ ತಾಣ ಮನಾಲಿಯಲ್ಲಿ ಐಷಾರಾಮಿ ಬಂಗಲೆಯನ್ನೂ ಹೊಂದಿದ್ದಾರೆ. ಕಂಗನಾ ಬಳಿ ಐಷಾರಾಮಿ ಕಾರುಗಳೂ ಇವೆ. BMW 7 Series, Mercedes Benz GLE ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಕಂಗನಾ ಹೊಂದಿದ್ದಾರೆ.

ಇದನ್ನೂ ಓದಿ: ‘ರಾಜಕೀಯಕ್ಕೆ ಬರಲು ನನಗೆ ಇದು ಸರಿಯಾದ ಕಾಲ’: ಕಂಗನಾ ರಣಾವತ್​

ಕಂಗನಾ ರಣಾವತ್ ಅವರ ಸಿನಿಮಾ ವಿಚಾರದ ಬಗ್ಗೆ ಮಾತನಾಡೋದಾದರೆ, ಶೀಘ್ರದಲ್ಲೇ ಅವರ ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರವನ್ನು ಸ್ವತಃ ಕಂಗನಾ ರಣಾವತ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮಿಕಾ ಚಾವ್ಲಾ, ಸತೀಶ್ ಕೌಶಿಕ್, ಮಿಲಿಂದ್ ಸೋಮ್, ಅನುಪಮ್ ಖೇರ್, ಶ್ರೇಯಸ್ ತಲ್ಪಡೆ ಮುಂತಾದ ಕಲಾವಿದರು ‘ಎಮರ್ಜೆನ್ಸಿ’ ಚಿತ್ರದಲ್ಲಿ ಕೆಲಸ ನಟಿಸಿದ್ದಾರೆ. ಈ ಚಿತ್ರ ಜೂನ್ 14 ರಂದು ದೊಡ್ಡ ಪರದೆಯಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ