ಮಂಡಿ ಮೂಲಕ ತಿರುಮಲದ ಮೆಟ್ಟಿಲೇರಿದ ಜಾನ್ವಿ ಕಪೂರ್; ಇಲ್ಲಿದೆ ವಿಡಿಯೋ
ಜಾನ್ವಿ ತಮ್ಮ ಹುಟ್ಟುಹಬ್ಬದಂದು (ಮಾರ್ಚ್ 6) ಕಾಲ್ನಡಿಗೆಯಲ್ಲಿ ತೆರಳಿ ತಿರುಪತಿ ದೇವರ ದರ್ಶನ ಪಡೆದಿದ್ದರು. ಈ ವೇಳೆ ಅವರ ಸ್ನೇಹಿತರಾದ ಶಿಖರ್ ಪಹಾರಿಯಾ ಮತ್ತು ಓರಿ ಜೊತೆಗಿದ್ದರು. ಆಗ ಈ ವಿಚಾರ ರಿವೀಲ್ ಆಗಿರಲಿಲ್ಲ. ಇತ್ತೀಚೆಗಷ್ಟೇ ತಿರುಮಲ ಯಾತ್ರೆಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಓರಿ ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಜಾನ್ವಿ ಕಪೂರ್ (Janhvi Kapoor) ಅವರಿಗೆ ದೇವರ ಮೇಲೆ ಸಾಕಷ್ಟು ಭಕ್ತಿ ಇದೆ. ಅವರು ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ. ಅದರಲ್ಲೂ ತಿರುಪತಿಗೆ ಅವರು ಹೆಚ್ಚು ತೆರಳುತ್ತಾರೆ. ಅವರ ತಾಯಿ ಶ್ರೀದೇವಿಗೂ ತಿರುಪತಿ ದೇವರ ಮೇಲೆ ಅಪಾರ ಭಕ್ತಿ ಇತ್ತು. ಅದೇ ರೀತಿ ಜಾನ್ವಿ ಕಪೂರ್ ಕೂಡ ಈ ದೇವರ ಮೇಲೆ ವಿಶೇಷ ಭಕ್ತಿ ಹೊಂದಿದ್ದಾರೆ. ಆಗಾಗ ಅವರು ಇಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಜಾನ್ವಿ ಕಪೂರ್ ಅವರು ಮಂಡಿ ಊರಿ ತಿರುಪತಿ ದೇವಸ್ಥಾನದ ಮೆಟ್ಟಿಲೇರಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಜಾನ್ವಿ ತಮ್ಮ ಹುಟ್ಟುಹಬ್ಬದಂದು (ಮಾರ್ಚ್ 6) ಕಾಲ್ನಡಿಗೆಯಲ್ಲಿ ತೆರಳಿ ತಿರುಪತಿ ದೇವರ ದರ್ಶನ ಪಡೆದಿದ್ದರು. ಈ ವೇಳೆ ಅವರ ಸ್ನೇಹಿತರಾದ ಶಿಖರ್ ಪಹಾರಿಯಾ ಮತ್ತು ಓರಿ ಜೊತೆಗಿದ್ದರು. ಆಗ ಈ ವಿಚಾರ ರಿವೀಲ್ ಆಗಿರಲಿಲ್ಲ. ಇತ್ತೀಚೆಗಷ್ಟೇ ತಿರುಮಲ ಯಾತ್ರೆಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಓರಿ ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ಚೆನ್ನೈನಲ್ಲಿರುವ ಜಾನ್ವಿ ಕಪೂರ್ ಅವರ ಮನೆಯಿಂದ ಕಾರಿನಲ್ಲಿ ಹೊರಟು ತಿರುಪತಿವರೆಗಿನ ಪಯಣ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಈ ಬ್ಲಾಗ್ನ ವಿಡಿಯೋ ವೈರಲ್ ಆಗಿದೆ.
ಚೆನ್ನೈನಿಂದ ತಿರುಪತಿ ತಲುಪಲು ಸುಮಾರು ಮೂರು ಗಂಟೆಗಳು ಬೇಕಾಯಿತು ಎಂದು ಓರಿ ಹೇಳಿದ್ದಾರೆ. ಜಾನ್ವಿ ಕಪೂರ್ ನಡೆದುಕೊಂಡು ತಿರುಮಲ ತಲುಪಿದ್ದಾರೆ. ದೇವಸ್ಥಾನದ ಸಮೀಪ ಬಂದಾಗ ಜಾನ್ವಿ ಕಪೂರ್ – ಶಿಖರ್ ತಿರುಮಲ ದೇವಸ್ಥಾನದ ಮೆಟ್ಟಿಲುಗಳನ್ನು ಮೊಣಕಾಲಿನ ಮೂಲಕ ಹತ್ತಿದರು. ಜಾನ್ವಿ ಕಪೂರ್ ಅವರು ಇದುವರೆಗೆ ಸುಮಾರು 50 ಬಾರಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ತಿರುಪತಿ ದೇವಸ್ಥಾನದ ಬಗ್ಗೆ ಜಾನ್ವಿಗೆ ವಿಶೇಷ ಭಕ್ತಿ ಇದೆ. ಯಾವುದೇ ಆಡಂಬರದ ಮದುವೆ ಆಗದೆ, ತಿರುಪತಿಯಲ್ಲಿ ಅವರು ಸಿಂಪಲ್ ಆಗಿ ಮದುವೆ ಆಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು. ಅವರ ಮದುವೆ ಶಿಖರ್ ಜೊತೆ ಶೀಘ್ರವೇ ನಡೆಯಲಿದೆ ಎನ್ನಲಾಗಿದೆ. ಅವರು ಆಗಾಗ ಶಿಖರ್ ಜೊತೆ ಇಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ: ತೂಕ ಇಳಿಸಲು ನಟಿ ಜಾನ್ವಿ ಕಪೂರ್ ಮಾಡುವ ವರ್ಕ್ಔಟ್ ಯಾವುದು?
ಸಿನಿಮಾಗಳ ವಿಚಾರಕ್ಕೆ ಬಂದರೆ ಜೂನಿಯರ್ ಎನ್ಟಿಆರ್ ‘ದೇವರ’ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿ ಇರುವಾಗಲೇ ತೆಲುಗಿನಲ್ಲಿ ಮತ್ತೊಂದು ಸಿನಿಮಾಗೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾಮ್ ಚರಣ್ 16ನೇ ಚಿತ್ರಕ್ಕೆ ಜಾನ್ವಿ ನಾಯಕಿ ಆಗಿದ್ದಾರೆ. ಈ ಚಿತ್ರವನ್ನು ‘ಉಪ್ಪೇನ’ ಖ್ಯಾತಿಯ ಬುಚ್ಚಿಬಾಬು ಸಾನಾ ನಿರ್ದೇಶಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ