ಗ್ರೀಸ್ನಲ್ಲಿ ಕೃತಿ ಸನೋನ್ ಧಮ್ಮಾರೋ ಧಮ್; ಸ್ಟೈಲಿಶ್ ಆಗಿ ಸಿಗರೇಟ್ ಸೇದುತ್ತಾ ನಿಂತ ನಟಿ
ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಾ ನಿಂತಿರೋದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಇರೋದು ಕೃತಿ ಸನೋನ್ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿದೆ.
ಬಾಲಿವುಡ್ ನಟಿ ಕೃತಿ ಸನೋನ್ ಸದ್ಯ ಗ್ರೀಸ್ ಪ್ರವಾಸದಲ್ಲಿ ಇದ್ದಾರೆ. ಅಲ್ಲಿ ಅವರು ಹಾಯಾಗಿ ಧಮ್ ಹೊಡೆಯುತ್ತಾ ನಿಂತಿರೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಸಾಕಷ್ಟು ಟೀಕೆ ಮಾಡಿದ್ದಾರೆ. ಕೃತಿ ಸನೋನ್ ಅವರು ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡರು. ಬಾಯ್ಫ್ರೆಂಡ್ ಕಬೀರ್ ಬಾಹಿಯಾ ಜೊತೆ ಅವರು ಗ್ರೀಸ್ ತೆರಳಿದ್ದರು. ತಮ್ಮನ್ನು ಅಲ್ಲಿ ಗುರುತಿಸೋರು ಯಾರೂ ಇಲ್ಲ ಎಂದು ಅವರು ಭಾವಿಸಿದ್ದರು. ಆದರೆ, ಹಾಗಾಗಿಲ್ಲ.
ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಾ ನಿಂತಿರೋದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಇರೋದು ಕೃತಿ ಸನೋನ್ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿದೆ. ಕೆಲವರು ನಟಿಯನ್ನು ಟೀಕಿಸಿದ್ದಾರೆ. ‘ಮಾದರಿ ಆಗಬೇಕಾದವರೇ ಹೀಗಾದರೆ ಹೇಗೆ’ ಎಂದು ಕೆಲವರು ಕೇಳಿದ್ದಾರೆ. ‘ಗ್ಲಾಮರ್ ಮಾತ್ರ ಸಾಕಾಗುವುದಿಲ್ಲ, ಆರೋಗ್ಯವೂ ಬೇಕು’ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ‘ಕ್ರೂ’ ಸಿನಿಮಾದಿಂದ ಗೆದ್ದು ಬೀಗಿದ ಬಾಲಿವುಡ್ ನಟಿ ಕೃತಿ ಸನೋನ್
ಇನ್ನು ಕೃತಿಯನ್ನು ಕೆಲವರು ಬೆಂಬಲಿಸಿದ್ದಾರೆ. ‘ಇದು ಅವರ ಖಾಸಗಿ ವಿಚಾರ. ಅವರು ಹೊರದೇಶದಲ್ಲಿ ಏನೇ ಮಾಡಿದರೂ ಅದು ಅವರಿಗೆ ಬಿಟ್ಟ ವಿಚಾರ. ಸಿಗರೇಟ್ನ ಅವರ ಪ್ರಮೋಟ್ ಮಾಡುತ್ತಿಲ್ಲವಲ್ಲ. ಹೀಗಿರುವಾಗ ನೀವೇಕೆ ಅದಕ್ಕೆ ಪ್ರಚಾರ ನೀಡುತ್ತೀರಿ’ ಎಂದು ಕೆಲವರು ಕೇಳಿದ್ದಾರೆ. ‘ಈ ವಾದದಲ್ಲಿ ಹುರುಳಿಲ್ಲ. ಜನರು ಸಿಗರೇಟ್ ಸೇದುತ್ತಾರೆ. ಅದರಲ್ಲೇನಿದೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
Kristi Sanon smoking in Greece byu/Stunning_Cow_5233 inBollyBlindsNGossip
ಈ ಮೊದಲಿನ ಸಂದರ್ಶನ ಒಂದರಲ್ಲಿ ತಾವು ಸಿಗರೇಟ್ ಸೇದುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು. ‘ನಾನು ಸ್ಮೋಕಿಂಗ್ ಮಾಡಲ್ಲ. ನನ್ನ ಪಾತ್ರ ಕೇಳಿದರೆ ಮಾತ್ರ ನಾನು ಕೈಯಲ್ಲಿ ಸಿಗರೇಟ್ ಹಿಡಿಯುತ್ತೇನೆ’ ಎಂದು ಅವರು ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Tue, 30 July 24