ಹೆಸರಿನ ಜೊತೆ ಅಮಿತಾಭ್ ಸೇರಿಸಿದ್ದಕ್ಕೆ ಸಿಟ್ಟಾದ ಜಯಾ ಬಚ್ಚನ್; ಕೋಪ ನೋಡಿ
ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಅವರ ದಾಂಪತ್ಯ ಜೀವನಕ್ಕೆ ಈಗ 51 ವರ್ಷಗಳು ತುಂಬಿವೆ. ಇಬ್ಬರೂ ಹಾಯಾಗಿ ಸಂಸಾರ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅವರನ್ನು ಜಯಾ ಅಮಿತಾಭ್ ಬಚ್ಚನ್ ಎಂದು ಕರೆದಿದ್ದಕ್ಕೆ ಸಿಟ್ಟಾಗಿದ್ದಾರೆ. ರಾಜ್ಯ ಸಭೆಯಲ್ಲಿ ಈ ಘಟನೆ ನಡೆದಿದೆ.
ನಟಿ ಹಾಗೂ ರಾಜಕಾರಣಿ ಜಯಾ ಅವರ ಜೊತೆ ಅಮಿತಾಭ್ ಬಚ್ಚನ್ ಅನ್ನೋದು ಕೂಡ ಸೇರಿದೆ. ಇತ್ತೀಚೆಗೆ ಕಲಾಪದ ವೇಳೆ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ‘ಜಯಾ ಅಮಿತಾಭ್ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ಜಯಾ ಬಚ್ಚನ್ ಅವರು ತಕರಾರು ತೆಗೆದಿದ್ದಾರೆ. ‘ನನ್ನ ಹೆಸರಿನ ಜೊತೆ ಪತಿಯ ಹೆಸರನ್ನು ಏಕೆ ಸೇರಿಸಬೇಕಿತ್ತು’ ಎಂದು ಪ್ರಶ್ನೆ ಮಾಡಿದ್ದಾರೆ.
‘ಶ್ರೀಮತಿ ಜಯಾ ಅಮಿತಾಭ್ ಬಚ್ಚನ್ ಜೀ’ ಎಂದು ಸಂಬೋಧಿಸಿದರು ಹರಿವಂಶ್ ನಾರಾಯಣ್. ಇದಕ್ಕೆ ಜಯಾ ಬಚ್ಚನ್ ಅವರು ಸಿಟ್ಟಾಗಿದ್ದಾರೆ. ‘ಜಯಾ ಬಚ್ಚನ್ ಎಂದು ಕರೆದರೆ ಸಾಕು’ ಎಂದರು ಜಯಾ. ಪಾರ್ಲಿಮೆಂಟ್ ರೆಕಾರ್ಡ್ನಲ್ಲಿ ಜಯಾ ಅಮಿತಾಭ್ ಬಚ್ಚನ್ ಎಂದು ಇರುವುದಾಗಿಯೂ ಅದಕ್ಕಾಗಿಯೇ ತಾವು ಹೀಗೆ ಕರೆದಿದ್ದಾಗಿಯೂ ಹರಿವಂಶ್ ಅವರು ಸ್ಪಷ್ಟನೆ ಕೊಟ್ಟರು. ‘ಇಲ್ಲಿ ನಿಮ್ಮ ಪೂರ್ತಿ ಹೆಸರು ಬರೆದಿದೆ. ಅದನ್ನೇ ನಾನು ಕರೆದೆ’ ಎಂದರು ಹರಿವಂಶ್.
Watch: “It’s a very painful incident and we should not bring politics into the matter,” says Samajwadi Party MP Jaya Bachchan on the death of the UPSC student in Old Rajinder Nagar pic.twitter.com/4928QcZoNS
— IANS (@ians_india) July 29, 2024
‘ಇದು ಹೊಸ ಸಂಗತಿ. ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಅವರಿಗೆ ತಮ್ಮದೇ ಆದ ಅಸ್ತಿತ್ವ ಅಥವಾ ಸಾಧನೆಗಳಿಲ್ಲ’ ಎಂದು ಜಯಾ ಬೇಸರ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಇಷ್ಟು ಸಣ್ಣ ವಿಚಾರಕ್ಕೆ ಯಾಕಿಷ್ಟು ಕೋಪ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ಒಟ್ಟಿಗೇ ನಗುತ್ತಾ ಕಾಣಿಸಿಕೊಂಡ ಸೋನಿಯಾ ಗಾಂಧಿ- ಜಯಾ ಬಚ್ಚನ್
ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಅವರು 1973ರ ಜೂನ್ 3ರಂದು ವಿವಾಹ ಆದರು. ಇವರ ದಾಂಪತ್ಯ ಜೀವನಕ್ಕೆ ಈಗ 51 ವರ್ಷಗಳು ತುಂಬಿವೆ. ಇಬ್ಬರೂ ಹಾಯಾಗಿ ಸಂಸಾರ ಮಾಡಿಕೊಂಡು ಬರುತ್ತಿದ್ದಾರೆ. ಇವರು ಮೊಮ್ಮಕ್ಕಳನ್ನು ಎತ್ತಿ ಆಡಿಸಿದ್ದಾರೆ. ಈ ಮಧ್ಯೆ ಈ ದಂಪತಿಯ ಮಗ ಅಭಿಷೇಕ್ ಬಚ್ಚನ್ ಅವರು ಪತ್ನಿ ಐಶ್ವರ್ಯಾ ರೈಗೆ ವಿಚ್ಛೇದನ ನೀಡುತ್ತಾರೆ ಎಂದು ವರದಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.