ಬರ್ತ್ಡೇ ವಿಶ್ ಮಾಡಿ ಸೆಲ್ಫಿ ತೆಗೆದುಕೊಳ್ಳಲು ಬಂದ ಫ್ಯಾನ್ಸ್ನ ತಳ್ಳಿದ ಸಂಜಯ್ ದತ್
ಎಲ್ಲಾ ಸಂದರ್ಭದಲ್ಲೂ ಹೀರೋಗಳು ಒಂದೇ ಮೂಡ್ನಲ್ಲಿ ಇರುವುದಿಲ್ಲ. ಅವರಿಗೆ ಅಭಿಮಾನಿಗಳು ಮುತ್ತಿಕೊಂಡರೆ ಸಿಟ್ಟಾಗುತ್ತಾರೆ. ಸಂಜಯ್ ದತ್ ವಿಚಾರದಲ್ಲಿ ಆಗಿದ್ದೂ ಅದೇ. ಅವರು ಫ್ಯಾನ್ಸ್ನ ಮಾತನಾಡಿಸೋ ಯಾವುದೇ ಮೂಡ್ನಲ್ಲಿಯೂ ಇರಲಿಲ್ಲ.
ನಟ ಸಂಜಯ್ ದತ್ ಅವರು ಜುಲೈ 29ರಂದು ಹುಟ್ಟಹಬ್ಬ ಆಚರಿಸಿಕೊಂಡಿದ್ದಾರೆ. ಅವರಿಗೆ ಈಗ 65 ವರ್ಷ ವಯಸ್ಸು. ಜನ್ಮದಿನದಂದು ನೆಚ್ಚಿನ ಸೆಲೆಬ್ರಿಟಿಯನ್ನು ನೋಡೋದು ಎಂದರೆ ಫ್ಯಾನ್ಸ್ಗೆ ಎಲ್ಲಿಲ್ಲದ ಖುಷಿ. ಆಪ್ತರ ಜೊತೆ ಬರ್ತ್ಡೇ ಆಚರಿಸಿಕೊಳ್ಳಲು ಅವರು ಕೆಲವೇ ಕೆಲವರ ಜೊತೆ ಹೋಟೆಲ್ ಒಂದಕ್ಕೆ ಬಂದಿದ್ದರು. ಈ ವೇಳೆ ಅವರ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಇದರಿಂದ ಅವರಿಗೆ ಕಿರಿಕಿರಿ ಆಗಿದೆ. ಅವರು ಅಭಿಮಾನಿಗಳನ್ನು ದೂಡಿ ಸಾಗಿದ್ದಾರೆ.
ಸಾಮಾನ್ಯವಾಗಿ ಹೀರೋಗಳು ಎಲ್ಲಾ ಸಂದರ್ಭದಲ್ಲೂ ಒಂದೇ ಮೂಡ್ನಲ್ಲಿ ಇರುವುದಿಲ್ಲ. ಅವರಿಗೆ ಅಭಿಮಾನಿಗಳು ಮುತ್ತಿಕೊಂಡರೆ ಸಿಟ್ಟಾಗುತ್ತಾರೆ. ಸಂಜಯ್ ದತ್ ವಿಚಾರದಲ್ಲಿ ಆಗಿದ್ದೂ ಅದೇ. ಅವರು ಫ್ಯಾನ್ಸ್ನ ಮಾತನಾಡಿಸೋ ಯಾವುದೇ ಮೂಡ್ನಲ್ಲಿಯೂ ಇರಲಿಲ್ಲ. ಅವರ ಎದುರು ಬಂದ ಫ್ಯಾನ್ಸ್ ಸೆಲ್ಫಿಗಾಗಿ ಒತ್ತಾಯ ಮಾಡುತ್ತಿದ್ದರು. ಆದರೆ, ಇದನ್ನು ಗಮನಿಸದೆ ಅವರು ಮುಂದೆ ಸಾಗಿದ್ದಾರೆ.
View this post on Instagram
ಸಂಜಯ್ ದತ್ ಅವರು ಎಷ್ಟೇ ಪ್ರಯತ್ನಪಟ್ಟರೂ ಅಭಿಮಾನಿಗಳು ಅವರಿಗೆ ಅಡ್ಡಲಾಗಿ ನಿಂತೇ ಇದ್ದರು. ಇದರಿಂದ ಸಿಟ್ಟಾದ ಸಂಜಯ್ ದತ್ ಅವರು ಅಭಿಮಾನಿಗಳನ್ನು ತಳ್ಳಿ ಮುಂದೆ ಸಾಗಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರು ಸಂಜಯ್ ದತ್ ಅವರನ್ನು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ‘ಸಂಜಯ್ ದತ್ ಮಧ್ಯ ಸೇವಿಸಿದ್ದರು ಅನಿಸುತ್ತದೆ’ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಸಂಜಯ್ ದತ್ ಜನ್ಮದಿನಕ್ಕೆ ರಿವೀಲ್ ಆಯ್ತು ‘ಕೆಡಿ’ ಚಿತ್ರದ ಪೋಸ್ಟರ್
ಸಂಜಯ್ ದತ್ ಬರ್ತ್ಡೇ ಪ್ರಯುಕ್ತ ‘ಕೆಡಿ’ ಸಿನಿಮಾದ ಲುಕ್ ರಿವೀಲ್ ಆಗಿದೆ. ಧ್ರುವ ಸರ್ಜಾ ನಟನೆಯ ಈ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಧಾಕ್ ದೇವ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ಅವರ ಲುಕ್ ಖಳ ನಾಯಕ್ ದಿನಗಳನ್ನು ನೆನಪಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.