37 ಕೋಟಿ ರೂ.ಗೆ ಎರಡು ಫ್ಲ್ಯಾಟ್ ಖರೀದಿಸಿದ ಆರ್ಯನ್ ಖಾನ್; ಈ ಅಪಾರ್ಟ್ಮೆಂಟ್ ಸಖತ್ ವಿಶೇಷ
ಆರ್ಯನ್‌ಗೆ ಎರಡು ಮಹಡಿಗಳನ್ನು ನೀಡಲಾಗಿದೆ. ಕೊವಿಡ್ ಸಮಯದಲ್ಲಿ ಶಾರುಖ್ ಖಾನ್ ತಮ್ಮ ಜಾಗವನ್ನು ಕಂಪನಿ ಒಂದಕ್ಕೆ ಬಾಡಿಗೆಗೆ ನೀಡಿದ್ದರು. ಈಗ ಆರ್ಯನ್ ಖಾನ್ ಇಲ್ಲಿಯೇ ಫ್ಲಾಟ್ ಖರೀದಿ ಮಾಡಿರೋದು ವಿಶೇಷ. ಶಾರುಖ್ ಖಾನ್ ಅವರು 13 ಕೋಟಿ ರೂಪಾಯಿ ನೀಡಿ 2001ರಲ್ಲಿ ಇಲ್ಲಿ ಮನೆ ಖರೀದಿ ಮಾಡಿದ್ದರು.
ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಆರ್ಯನ್ ಅತಿ ಚಿಕ್ಕ ವಯಸ್ಸಿನಲ್ಲೇ ಬಹುಕೋಟಿ ಡೀಲ್ ಪಡೆದಿದ್ದಾರೆ. ವರದಿಗಳ ಪ್ರಕಾರ ಆರ್ಯನ್ ದಕ್ಷಿಣ ದೆಹಲಿಯ ಪಂಚಶೀಲ ಪಾರ್ಕ್‌ನಲ್ಲಿ ಎರಡು ಫ್ಲಾಟ್‌ಗಳನ್ನು ಖರೀದಿಸಿದ್ದಾರಂತೆ. ಶಾರುಖ್ ಮತ್ತು ಗೌರಿಗೆ ಈ ಸ್ಥಳ ಬಹಳ ಮುಖ್ಯ. ಏಕೆಂದರೆ ಅವರು ಇದೇ ಅಪಾರ್ಟ್ಮೆಂಟ್ನಲ್ಲಿ ಈ ಮೊದಲು ವಾಸವಾಗಿದ್ದರು. ಈಗ ಅದೇ ಕಟ್ಟಡದಲ್ಲಿ ಆರ್ಯನ್ 37 ಕೋಟಿ ರೂಪಾಯಿ ನೀಡಿ ಎರಡು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಈ ಕಟ್ಟಡವನ್ನು ಗೌರಿ ಖಾನ್ ವಿನ್ಯಾಸಗೊಳಿಸಿದ್ದಾರೆ.
ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಆರ್ಯನ್ ಖಾನ್ ಅವರು ಈ ವರ್ಷ ಮೇನಲ್ಲಿ ಈ ಫ್ಲ್ಯಾಟ್ ನೋಂದಾಯಿಸಿದ್ದಾರೆ. ಇದಕ್ಕಾಗಿ ಅವರು 2.64 ಕೋಟಿ ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ. ಬೊಟಿಕ್ ರಿಯಲ್ ಎಸ್ಟೇಟ್ ಸಂಸ್ಥಾಪಕ ಪ್ರದೀಪ್ ಪ್ರಜಾಪತಿ ಮಾಹಿತಿ ನೀಡಿದ್ದಾರೆ. ಯುವ ನಿರ್ದೇಶಕ ಎನಿಸಿಕೊಂಡಿರೋ ಆರ್ಯನ್ ಖಾನ್ ಇಷ್ಟು ದೊಡ್ಡ ಮೌಲ್ಯದ ವಹಿವಾಟು ನಡೆಸುವುದು ತೀರಾ ಅಪರೂಪ. ಈ ಹಿಂದೆ ಅಮಿತಾಬ್ ಬಚ್ಚನ್ ದಕ್ಷಿಣ ದೆಹಲಿಯ ಗುಲ್ಮೊಹರ್ ಪಾರ್ಕ್‌ನಲ್ಲಿ ತಮ್ಮ ಫ್ಲ್ಯಾಟ್ನ 23 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು.
ಆರ್ಯನ್‌ಗೆ ಎರಡು ಮಹಡಿಗಳನ್ನು ನೀಡಲಾಗಿದೆ. ಕೊವಿಡ್ ಸಮಯದಲ್ಲಿ ಶಾರುಖ್ ಖಾನ್ ತಮ್ಮ ಜಾಗವನ್ನು ಕಂಪನಿ ಒಂದಕ್ಕೆ ಬಾಡಿಗೆಗೆ ನೀಡಿದ್ದರು. ಈಗ ಆರ್ಯನ್ ಖಾನ್ ಇಲ್ಲಿಯೇ ಫ್ಲಾಟ್ ಖರೀದಿ ಮಾಡಿರೋದು ವಿಶೇಷ. ಶಾರುಖ್ ಖಾನ್ ಅವರು 13 ಕೋಟಿ ರೂಪಾಯಿ ನೀಡಿ 2001ರಲ್ಲಿ ಇಲ್ಲಿ ಮನೆ ಖರೀದಿ ಮಾಡಿದ್ದರು.
ಆರ್ಯನ್ ಖಾನ್ ಐಷಾರಾಮಿ ಬಟ್ಟೆ ಬ್ರಾಂಡ್ ನಡೆಸುತ್ತಿದ್ದಾರೆ. ಶಾರುಖ್ ಖಾನ್ ಈ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುತ್ತಾರೆ. ಆರ್ಯನ್‌ಗೆ ನಟನೆ ಕ್ಷೇತ್ರಕ್ಕೆ ಬರಲು ಇಷ್ಟವಿಲ್ಲ. ಅವರಿಗೆ ನಿರ್ದೇಶನದಲ್ಲಿ ಆಸಕ್ತಿ ಇದೆ. ಅವರು ವೆಬ್ ಸೀರಿಸ್ ಒಂದನ್ನು ನಿರ್ದೇಶಿಸುತ್ತಿದ್ದಾರೆ. ಇದಕ್ಕೆ ಶಾರುಖ್ ಖಾನ್ ಅವರೇ ಬಂಡವಾಳ ಹೂಡುತ್ತಿದ್ದಾರೆ. ಈ ಎರಡು ಮೂಲಗಳಿಂದ ಆರ್ಯನ್‌ಗೆ ಹಣ ಬರುತ್ತಿದೆ.
ಇದನ್ನೂ ಓದಿ: ಶಾರುಖ್ ಕಣ್ಣಿಗೆ ಹಾನಿ? ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಕಿಂಗ್ ಖಾನ್
ಶಾರುಖ್ ಖಾನ್ ಅವರಿಗೆ 2023 ಉತ್ತಮ ವರ್ಷವಾಗಿದೆ. ಶಾರುಖ್ ಈ ವರ್ಷ ಮೂರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪಠಾಣ್, ಜವಾನ್ ಮತ್ತು ಡಂಕಿ ಮೂರೂ ಸೂಪರ್ ಹಿಟ್ ಆಗಿದ್ದವು. ಶಾರುಖ್ ಖಾನ್ ಶೀಘ್ರದಲ್ಲೇ ಸುಜೋಯ್ ಘೋಷ್ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಕೆಲಸ ಶುರುವಾಗಲಿದೆ ಎನ್ನಲಾಗಿದೆ. ಈ ಮಧ್ಯೆ ಶಾರುಖ್ ಖಾನ್ ಅವರು ಕಣ್ಣಿನ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.