ಆಸ್ತಿ ಸೀಜ್ ಆದರೂ ಇಲ್ಲ ಚಿಂತೆ; 3 ಕೋಟಿ ರೂ. ಕೊಟ್ಟು ವಿದೇಶಿ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ
ಬ್ರಿಟಿಷ್ ಲಕ್ಷುರಿ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಲೋಟಸ್ ಕಂಪನಿಯ ಎಲೆಟ್ರೆ ಕಾರನ್ನು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಖರೀದಿ ಮಾಡಿದ್ದಾರೆ. ಹಸಿರು ಬಣ್ಣದ ಕಾರನ್ನು ಈ ದಂಪತಿ ರೈಡ್ ಮಾಡಿದ್ದಾರೆ. ಈ ಕಾರಿನ ಬೆಲೆ 3 ಕೋಟಿ ರೂಪಾಯಿ ಎನ್ನಲಾಗಿದೆ.
ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾಗೆ ಇತ್ತೀಚೆಗೆ ಸಮಸ್ಯೆ ಎದುರಾಗಿತ್ತು. ಬಿಟ್ಕಾಯಿನ್ ಫ್ರಾಡ್ ಕೇಸ್ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇವರಿಗೆ ಸೇರಿದ 97.79 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸೀಜ್ ಮಾಡಿದ್ದರು. ಈ ವಿಚಾರದಲ್ಲಿ ದಂಪತಿ ಸಾಕಷ್ಟು ಚಿಂತೆಗೆ ಒಳಗಾಗಿದ್ದರು ಎಂದು ವರದಿ ಆಗಿತ್ತು. ಆದರೆ, ಇವರು ಅಷ್ಟೆಲ್ಲ ಚಿಂತೆಗೆ ಒಳಗಾದಂತೆ ಇಲ್ಲ. ಈ ದಂಪತಿ ಎಲ್ಲವನ್ನು ಮರೆತು ದುಬಾರಿ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ.
ಬ್ರಿಟಿಷ್ ಲಕ್ಷುರಿ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಲೋಟಸ್ ಕಂಪನಿಯ ಎಲೆಟ್ರೆ ಕಾರನ್ನು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಖರೀದಿ ಮಾಡಿದ್ದಾರೆ. ಹಸಿರು ಬಣ್ಣದ ಕಾರನ್ನು ಈ ದಂಪತಿ ರೈಡ್ ಮಾಡಿದ್ದಾರೆ. ಈ ಕಾರಿನ ಬೆಲೆ 3 ಕೋಟಿ ರೂಪಾಯಿ ಎನ್ನಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೆಹಲಿ ನೋಂದಣಿಯನ್ನು ಈ ಕಾರು ಹೊಂದಿದೆ.
ಶಿಲ್ಪಾ ಖರೀದಿ ಮಾಡಿದ್ದು ಲೋಟಸ್ ಎಲೆಟ್ರೆ ಹೆಸರಿನ ಕಾರು. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 258 ಕಿ.ಮೀ.. ಇದು ಎಲೆಕ್ಟ್ರಿಕ್ ಕಾರು. ಪಾಪರಾಜಿ ಪೇಜ್ಗಳಲ್ಲಿ ಕಾರಿನ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ. ಈ ದಂಪತಿಗೆ ಎಲ್ಲರೂ ಶುಭಾಶಯ ಕೋರಿದ್ದಾರೆ.
View this post on Instagram
ಏಪ್ರಿಲ್ ತಿಂಗಳಲ್ಲಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ದಂಪತಿಗೆ ಸೇರಿದ 97 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಸೀಜ್ ಮಾಡಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದರಲ್ಲಿ ಮುಂಬೈ ಹಾಗೂ ಪುಣೆಯ ಫ್ಲ್ಯಾಟ್, ಸೇರಿ ಅನೇಕ ಪ್ರಾಪರ್ಟಿಗಳನ್ನು ಸೀಜ್ ಮಾಡಲಾಗಿತ್ತು. 2017ರಲ್ಲಿ ನಡೆದ ಬಿಟ್ ಕಾಯಿನ್ ಫ್ರಾಡ್ಗೆ ಈ ಪ್ರಕರಣದ ಲಿಂಕ್ ಇದೆ.
ಇದನ್ನೂ ಓದಿ: ರಕುಲ್ ಪ್ರೀತ್ ಮತ್ತು ಶಿಲ್ಪಾ ಶೆಟ್ಟಿ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಲಕ್ಷ ಗೊತ್ತೆ?
ಈ ಘಟನೆಯ ಬಳಿಕ ಶಿಲ್ಪಾ ಶೆಟ್ಟಿ ಅವರು ಮಂಗಳೂರಿಗೆ ಆಗಮಿಸಿದ್ದರು. ಅಲ್ಲಿ ಅವರು ಭೂತಕೋಲ ವೀಕ್ಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಅವರ ಮಕ್ಕಳು ಕೂಡ ಶಿಲ್ಪಾ ಜೊತೆಗೆ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.