‘ಬನ್ಸಾಲಿ ರೀತಿಯ ನಿರ್ದೇಶಕರು ನನಗೆ ಚಾನ್ಸ್ ಕೊಡಲ್ಲ’; ಮನೋಜ್ ಬಾಜ್ಪಾಯಿ ನೇರಮಾತು
‘ದೇವದಾಸ್’ ಸಿನಿಮಾದಲ್ಲಿ ನಟಿಸಲು ಮನೋಜ್ಗೆ ಬನ್ಸಾಲಿ ಅವರು ಆಫರ್ ನೀಡಿದ್ದರು. ಚುನ್ನಿಲಾಲ್ ಪಾತ್ರವನ್ನು ಮನೋಜ್ ಮಾಡಬೇಕಿತ್ತು. ‘ದೇವದಾಸ್’ ಚಿತ್ರದಲ್ಲಿ ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ಚುನ್ನಿಲಾಲ್ ಕಾಣಿಸಿಕೊಳ್ಳುತ್ತಾನೆ. ಈ ಪಾತ್ರವನ್ನು ಮನೋಜ್ ಮಾಡಬೇಕಿತ್ತು.
ಮನೋಜ್ ಬಾಜ್ಪಾಯಿ ಅವರ ನಟನೆಯ 100ನೇ ಸಿನಿಮಾ ‘ಭಯ್ಯಾ ಜಿ’ ಇತ್ತೀಚೆಗೆ ರಿಲೀಸ್ ಆಗಿದೆ. ಅವರು ತಮ್ಮ ಕರಿಯರ್ನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕೆಲವು ಸಿನಿಮಾಗಳು ಫ್ಲಾಪ್ ಎನಿಸಿಕೊಂಡರೆ ಕೆಲವು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಅವರಿಗೆ ಕೆಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ, ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಾಗಲೇ ಅವರಿಗೆಲ್ಲ ವಯಸ್ಸಾಗಿತ್ತು. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಆದರೆ, ಆ ಆಸೆ ಈಡೇರಲೇ ಇಲ್ಲ.
ರೇಡಿಯೋ ನಶಾ ಜೊತೆ ಮನೋಜ್ ಮಾತನಾಡಿದ್ದಾರೆ. ‘ನಾನು ಗುಲ್ಜರ್ ಅವರ ಜೊತೆ ಕೆಲಸ ಮಾಡೋಕೆ ಸಾಧ್ಯವಾಗಿಲ್ಲ. ನನಗೆ ಗೋವಿಂದ್ ನಿಹಲಾನಿ ಜೊತೆ ಕೆಲಸ ಮಾಡಬೇಕಿತ್ತು. ನಾನು ಚಿತ್ರರಂಗಕ್ಕೆ ಕಾಲಿಡುವಾಗ ಇವರೆಲ್ಲ ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿ ಇದ್ದರು. ನನಗೆ ಶ್ಯಾಮ್ ಬೆಂಗಾಲಿ ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕಿತು ಎಂದಿದ್ದಾರೆ’ ಮನೋಜ್.
‘ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ಕೆಲಸ ಮಾಡಬೇಕು. ಆದರೆ, ಅವರು ಮಾಡುವ ಸಿನಿಮಾಗಳಲ್ಲಿ ನನ್ನಂಥ ಕಲಾವಿದರ ಅಗತ್ಯವೇ ಇರುವುದಿಲ್ಲ. ನನ್ನಲ್ಲಿ ಯಾವ ಸುಂದರ ಅಂಶವಿದೆ ಎಂದು ಅವರು ತೋರಿಸುತ್ತಾರೆ? ಅವರು ನಿಜಕ್ಕೂ ಭಿನ್ನ’ ಎಂದಿದ್ದಾರೆ ಮನೋಜ್. ಅವರು ಇದನ್ನು ಹಾಸ್ಯದ ರೀತಿಯಲ್ಲಿ ಹೇಳಿದ್ದಾರೆ. ಮುಂದೊಂದು ದಿನ ಮನೋಜ್ ಅವರಿಗೆ ಬನ್ಸಾಲಿ ಜೊತೆ ಕೆಲಸ ಮಾಡೋ ಅವಕಾಶ ಸಿಗಲಿ ಎಂದು ಫ್ಯಾನ್ಸ್ ಕೋರಿದ್ದಾರೆ.
ಇದನ್ನೂ ಓದಿ: ಮನೋಜ್ ಬಾಜ್ಪಾಯಿಗೆ ಬಂದಿತ್ತು ಆತ್ಮಹತ್ಯೆಯ ಆಲೋಚನೆ; ಗೆಳೆಯರ ಸಹಾಯದಿಂದ ಬದುಕಿದ ನಟ
ಈ ಮೊದಲು ‘ದೇವದಾಸ್’ ಸಿನಿಮಾದಲ್ಲಿ ನಟಿಸಲು ಮನೋಜ್ಗೆ ಬನ್ಸಾಲಿ ಅವರು ಆಫರ್ ನೀಡಿದ್ದರು. ಚುನ್ನಿಲಾಲ್ ಪಾತ್ರವನ್ನು ಮನೋಜ್ ಮಾಡಬೇಕಿತ್ತು. ‘ದೇವದಾಸ್’ ಚಿತ್ರದಲ್ಲಿ ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ಚುನ್ನಿಲಾಲ್ ಕಾಣಿಸಿಕೊಳ್ಳುತ್ತಾನೆ. ಈ ಪಾತ್ರವನ್ನು ಮನೋಜ್ ಮಾಡಬೇಕಿತ್ತು. ಆದರೆ, ಈ ಚಿತ್ರದಲ್ಲಿ ಹೀರೋ ಆಗಬೇಕು ಎನ್ನುವ ಕನಸು ಮನೋಜ್ಗೆ ಇತ್ತು. ಈ ಕಾರಣಕ್ಕೆ ಅವರು ಆಫರ್ ತಿರಸ್ಕರಿಸಿದರು. ಆ ಬಳಿಕ ಜಾಕಿ ಶ್ರಾಫ್ ಈ ಪಾತ್ರವನ್ನು ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.