AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೋಜ್​ ಬಾಜ್​ಪಾಯಿಗೆ ಬಂದಿತ್ತು ಆತ್ಮಹತ್ಯೆಯ ಆಲೋಚನೆ; ಗೆಳೆಯರ ಸಹಾಯದಿಂದ ಬದುಕಿದ ನಟ

1969ರ ಏಪ್ರಿಲ್ 23ರಂದು ​ ಬಿಹಾರದ ಬೆಲ್ವಾ ಎಂಬ ಹಳ್ಳಿಯಲ್ಲಿ ಮನೋಜ್ ಜನಿಸಿದರು. ಅವರು ಗುಡಿಸಲಲ್ಲಿ ಕಟ್ಟಿದ ಶಾಲೆಗೆ ಹೋಗುತ್ತಿದ್ದರು. ಅಮಿತಾಭ್ ಬಚ್ಚನ್ ಅವರ ಪ್ರಭಾವ ಮನೋಜ್​ ಮೇಲೆ ಸಾಕಷ್ಟು ಇತ್ತು. ಅವರಿಗೆ ನಟನೆಯ ಮೇಲೆ ಆಸಕ್ತಿ ಹುಟ್ಟಲು ಅವರು ಕೂಡ ಪ್ರಮುಖ ಕಾರಣ.

ಮನೋಜ್​ ಬಾಜ್​ಪಾಯಿಗೆ ಬಂದಿತ್ತು ಆತ್ಮಹತ್ಯೆಯ ಆಲೋಚನೆ; ಗೆಳೆಯರ ಸಹಾಯದಿಂದ ಬದುಕಿದ ನಟ
ಮನೋಜ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 23, 2024 | 7:48 AM

Share

ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದವರು ನಟ ಮನೋಜ್ ಬಾಜಪೇಯಿ. ಅವರಿಗೆ ಇಂದು (ಏಪ್ರಿಲ್ 23) ಬರ್ತ್​ಡೇ. ಭಾರತ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​’ ವೆಬ್ ಸರಣಿ (The Family Man Web Series) ಮೂಲಕ ಅವರ ಖ್ಯಾತಿ ಹೆಚ್ಚಾಗಿದೆ. ಇಂದು ಅವರು ಸ್ಟಾರ್ ಹೀರೋ. ಅವರ ಬದುಕು ಅಷ್ಟು ಸಲಭವಾಗಿರಲಿಲ್ಲ. ಮನೋಜ್ ನಟಿಸಿದ ಸಿನಿಮಾಗಳು ಸೋತವು. ಪತ್ನಿ ಬಿಟ್ಟು ಹೋದರು. ಆತ್ಮಹತ್ಯೆಯ ಆಲೋಚನೆಯೂ ಅವರಿಗೆ ಬಂದಿತ್ತು.

1969ರ ಏಪ್ರಿಲ್ 23ರಂದು ​ ಬಿಹಾರದ ಬೆಲ್ವಾ ಎಂಬ ಹಳ್ಳಿಯಲ್ಲಿ ಮನೋಜ್ ಜನಿಸಿದರು. ಅವರು ಗುಡಿಸಲಲ್ಲಿ ಕಟ್ಟಿದ ಶಾಲೆಗೆ ಹೋಗುತ್ತಿದ್ದರು. ಅಮಿತಾಭ್ ಬಚ್ಚನ್ ಅವರ ಪ್ರಭಾವ ಮನೋಜ್​ ಮೇಲೆ ಸಾಕಷ್ಟು ಇತ್ತು. ಅವರಿಗೆ ನಟನೆಯ ಮೇಲೆ ಆಸಕ್ತಿ ಹುಟ್ಟಲು ಅವರು ಕೂಡ ಪ್ರಮುಖ ಕಾರಣ. ಮನೋಜ್ ಅವರು 17ನೇ ವಯಸ್ಸಿಗೆ ದೆಹಲಿಗೆ ಬಂದರು. ಅಲ್ಲಿ ಕಾಲೇಜಿಗೆ ಹೋಗುವುದರ ಜೊತೆ ರಂಗಭೂಮಿ ಜೊತೆ ನಂಟು ಬೆಳೆಸಿಕೊಂಡರು. ವಿಶೇಷ ಎಂದರೆ ಮನೆಯವರೂ ಮನೋಜ್ ಅವರನ್ನು ಬೆಂಬಲಿಸಿದರು.

ದೆಹಲಿಯಲ್ಲಿರುವ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ಗೆ ಸೇರಬೇಕೆಂಬುದು ಮನೋಜ್ ಅವರ ಕನಸಾಗಿತ್ತು. ಅದು ಸಾಧ್ಯವಾಗದೇ ಇದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನು ಮಾಡಿದ್ದರು. ಇದನ್ನು ತಿಳಿದ ಗೆಳೆಯರು ಅವನನ್ನು ಬಿಟ್ಟು ಎಲ್ಲಿಯೂ ಹೋಗುತ್ತಲೇ ಇರಲಿಲ್ಲ.

ಮನೋಜ್ ಅವರು ನಂತರ ಬಣ್ಣದ ಬದುಕು ಆರಂಭಿಸಿದರು. ಅವರಿಗೆ ಬಿಹಾರ ಮೂಲದ ಹುಡುಗಿಯ ಜೊತೆ ಮದುವೆ ಆಯಿತು. ಆದರೆ, ಕಷ್ಟದ ದಿನಗಳಲ್ಲಿ ಅವರನ್ನು ಬಿಟ್ಟು ಹೋದರು. ನಂತರ ನಟಿ ಶಬಾನಾ ರಾಜಾ ಅವರನ್ನು ಮನೋಜ್​ ಮದುವೆ ಆದರು.

ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್​’ ನಟ ಮನೋಜ್​ ಬಾಜ್​ಪಾಯಿ​ ಲೋಕಸಭಾ ಚುನಾವಣೆಗೆ ನಿಲ್ತಾರಾ? ಸಿಕ್ತು ಸ್ಪಷ್ಟನೆ

ಈಗ ಮನೋಜ್ ವೆಬ್​ ಸೀರಿಸ್, ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಮನೋಜ್​ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳ ಕಡೆಗಳಿಂದ ಅವರಿಗೆ ಬರ್ತ್​ಡೇ ವಿಶ್​ಗಳು ಬರುತ್ತಿವೆ. ‘ಫ್ಯಾಮಿಲಿ ಮ್ಯಾನ್ 3’ ಬಗ್ಗೆ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ