‘ದಿ ಫ್ಯಾಮಿಲಿ ಮ್ಯಾನ್’ ನಟ ಮನೋಜ್ ಬಾಜ್ಪಾಯಿ ಲೋಕಸಭಾ ಚುನಾವಣೆಗೆ ನಿಲ್ತಾರಾ? ಸಿಕ್ತು ಸ್ಪಷ್ಟನೆ
ಅನೇಕ ಕಲಾವಿದರು ರಾಜಕೀಯಕ್ಕೆ ಕಾಲಿಟ್ಟು ಯಶಸ್ವಿ ಆಗಿದ್ದಾರೆ. ಮನೋಜ್ ಬಾಜ್ಪಾಯಿ ಕೂಡ ಅದೇ ಹಾದಿಯಲ್ಲಿದ್ದಾರಾ ಎಂಬ ಅನುಮಾನ ಕೆಲವರಿಗೆ ಮೂಡಿದೆ. ಬಿಹಾರದ ಪಶ್ಚಿಮ ಚಂಪಾರಣ್ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ ಎಂದು ಸುದ್ದಿ ಪ್ರಕಟ ಆಗಿದೆ. ಅದಕ್ಕೆ ಮನೋಜ್ ಬಾಜ್ಪಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಮನೋಜ್ ಬಾಜ್ಪಾಯಿ (Manoj Bajpayee) ಅವರಿಗೆ ಸಖತ್ ಬೇಡಿಕೆ ಇದೆ. ಸಿನಿಮಾ ಮಾತ್ರವಲ್ಲದೇ ವೆಬ್ ಸಿರೀಸ್ ಲೋಕದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಸಾಮಾಜಿಕ ವಿಚಾರಗಳ ಬಗ್ಗೆ ಅವರು ಆಗಾಗ ಮಾತನಾಡುತ್ತಾರೆ. ಹಾಗಾಗಿ ಅವರು ಎಲೆಕ್ಷನ್ಗೆ ನಿಲ್ಲುವ ಸಾಧ್ಯತೆ ಇದೆ ಎಂಬ ಸುದ್ದಿ ಹರಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅವರು ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿದೆ. ಅದಕ್ಕೆ ಸ್ವತಃ ಮನೋಜ್ ಬಾಜ್ಪಾಯಿ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿಯಲ್ಲಿ ಹುರುಳಿಲ್ಲ ಎಂದು ಅವರು ಹೇಳಿದ್ದಾರೆ.
ಜನಪ್ರಿಯ ನಟರಿಗೂ ರಾಜಕೀಯಕ್ಕೂ ಹತ್ತಿರದ ನಂಟು ಇದೆ. ಅನೇಕ ಕಲಾವಿದರು ರಾಜಕೀಯಕ್ಕೆ ಕಾಲಿಟ್ಟು ಯಶಸ್ವಿ ಆಗಿದ್ದಾರೆ. ಮನೋಜ್ ಬಾಜ್ಪಾಯಿ ಕೂಡ ಅದೇ ಹಾದಿಯಲ್ಲಿದ್ದಾರಾ ಎಂಬ ಅನುಮಾನ ಕೆಲವರಿಗೆ ಮೂಡಿದೆ. ಬಿಹಾರದ ಪಶ್ಚಿಮ ಚಂಪಾರಣ್ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ ಎಂದು ಸುದ್ದಿ ಪ್ರಕಟ ಆಗಿದೆ. ಅದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಮನೋಜ್ ಬಾಜ್ಪಾಯಿ ಅವರು ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ.
Manoj Bajpayee: ಶೂ ಇಲ್ಲದೇ ಬಡವನಂತೆ ನಿಂತಿದ್ದ ಮನೋಜ್ ಬಾಜಪಾಯಿ ಜೊತೆ ಶಾರುಖ್ ನಡೆದುಕೊಂಡಿದ್ದು ಹೇಗೆ?
‘ಈ ವಿಷಯವನ್ನು ನಿಮಗೆ ಯಾರು ಹೇಳಿದ್ದಾರೆ ಎಂಬುದನ್ನು ತಿಳಿಸಿ ಅಥವಾ ನಿನ್ನೆ ರಾತ್ರಿ ನಿಮಗೆ ಈ ರೀತಿ ಕನಸು ಬಿದ್ದಿತ್ತಾ’ ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮ ರಾಜಕೀಯದ ಎಂಟ್ರಿ ಕುರಿತ ಸುದ್ದಿಯಲ್ಲಿ ಹುರುಳಿಲ್ಲ ಎಂಬುದನ್ನು ಮನೋಜ್ ಬಾಜ್ಪಾಯಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಅವರು ಕೆಲವು ರಾಜಕೀಯ ನಾಯಕರನ್ನು ಭೇಟಿ ಆಗಿದ್ದರು. ಆ ಬಳಿಕ ಕೆಲವು ಅಂತೆ-ಕಂತೆಗಳು ಹುಟ್ಟಿಕೊಂಡವು.
Achcha ye bataiye ye baat kisne bola ya kal raat Sapna aaya ? Boliye boliye! https://t.co/8pIbjoxrGR
— manoj bajpayee (@BajpayeeManoj) January 4, 2024
ಹಲವು ವರ್ಷಗಳಿಂದ ಮನೋಜ್ ಬಾಜ್ಪಾಯಿ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಅಭಿಮಾನಿ ಬಳಗ ಕೂಡ ಹಿರಿದಾಗಿದೆ. ಹಿಂದಿ, ತೆಲುಗು, ತಮಿಳಿನ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಯ ಮೂಲಕ ಅವರು ಒಟಿಟಿ ಕ್ಷೇತ್ರದಲ್ಲಿ ಫೇಮಸ್ ಆಗಿದ್ದಾರೆ. ‘ಪದ್ಮಶ್ರೀ’ ಪ್ರಶಸ್ತಿ ಕೂಡ ಅವರಿಗೆ ಸಿಕ್ಕಿದೆ. ಸದ್ಯ ಹಲವು ಪ್ರಾಜೆಕ್ಟ್ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ..