ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್​ ಕಪೂರ್​ ಆಗಿದ್ದು ಕೇವಲ ‘ಚಿಂಗಂ’

ಇತ್ತೀಚೆಗೆ ರಣಬೀರ್​ ಕಪೂರ್​ ಅವರು ಪೊಲೀಸ್​ ಗೆಟಪ್​ ಧರಿಸಿ ರೋಹಿತ್​ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದರು. ಅದನ್ನು ಕಂಡು ಜನರು ಏನೇನೂ ಕಲ್ಪನೆ ಮಾಡಿಕೊಂಡಿದ್ದರು. ‘ಸಿಂಗಂ ಅಗೇನ್​’ ಚಿತ್ರದಲ್ಲಿ ರಣಬೀರ್​ ಕಪೂರ್​ ಕೂಡ ನಟಿಸುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದರು. ಆದರೆ ಅದು ನಿಜವಾಗಿಲ್ಲ.

ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್​ ಕಪೂರ್​ ಆಗಿದ್ದು ಕೇವಲ ‘ಚಿಂಗಂ’
Ranbir Kapoor
Follow us
ಮದನ್​ ಕುಮಾರ್​
|

Updated on: Jan 05, 2024 | 4:07 PM

2023ರಲ್ಲಿ ರಣಬೀರ್​ ಕಪೂರ್​ (Ranbir Kapoor) ಅವರಿಗೆ ‘ಅನಿಮಲ್​’ ಸಿನಿಮಾದ ಮೂಲಕ ಅಭೂತಪೂರ್ವ ಗೆಲುವು ಸಿಕ್ಕಿದೆ. ಆ ಸಿನಿಮಾ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಬೀಗಿದೆ. ಹಾಗಾಗಿ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಜೋರಾಗಿದೆ. ನಿರ್ದೇಶಕ ರೋಹಿತ್​ ಶೆಟ್ಟಿ (Rohit Shetty) ಜೊತೆ ಸೇರಿ ರಣಬೀರ್​ ಕಪೂರ್ ಅವರು ‘ಸಿಂಗಂ’ ಆಗುತ್ತಾರೆ ಎಂದು ಜನರು ಊಹಿಸಿದ್ದರು. ಆ ಊಹೆಗೆ ಕಾರಣ ಆಗಿದ್ದು ಕೆಲವು ಫೋಟೋಗಳು. ಆದರೆ ಜನರ ಊಹೆ ನಿಜವಾಗಿಲ್ಲ. ರಣಬೀರ್​ ಕಪೂರ್​ ‘ಸಿಂಗಂ’ ಆಗಿಲ್ಲ. ಅವರು ಬರೀ ‘ಚಿಂಗಂ’ ಆಗಿದ್ದಾರೆ!

ರೋಹಿತ್​ ಶೆಟ್ಟಿ ನಿರ್ದೇಶನದಲ್ಲಿ ‘ಸಿಂಗಂ ಅಗೇನ್​’ ಸಿನಿಮಾ ಮೂಡಿಬರುತ್ತಿದೆ. ಇದರಲ್ಲಿ ಪೊಲೀಸ್​ ಕಹಾನಿ ಇರಲಿದೆ. ದೀಪಿಕಾ ಪಡುಕೋಣೆ, ಅಕ್ಷಯ್​ ಕುಮಾರ್​, ಅಜಯ್​ ದೇವಗನ್​, ರಣವೀರ್​ ಸಿಂಗ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ರಣಬೀರ್​ ಕಪೂರ್​ ಅವರು ಪೊಲೀಸ್​ ಗೆಟಪ್​ ಧರಿಸಿ ರೋಹಿತ್​ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದರು. ಅದನ್ನು ಕಂಡು ಜನರು ಏನೇನೋ ಕಲ್ಪನೆ ಮಾಡಿಕೊಂಡಿದ್ದರು. ‘ಸಿಂಗಂ ಅಗೇನ್​’ ಚಿತ್ರದಲ್ಲಿ ರಣಬೀರ್​ ಕಪೂರ್​ ಕೂಡ ನಟಿಸುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದರು. ಆದರೆ ಅದು ನಿಜವಾಗಿಲ್ಲ.

ಇದನ್ನೂ ಓದಿ: ಹಿರಿದಾಯಿತು ‘ಸಿಂಗಂ ಅಗೇನ್’ ಸಿನಿಮಾದ ಪಾತ್ರವರ್ಗ

ರಣಬೀರ್​ ಕಪೂರ್​ ಅವರು ಪೊಲೀಸ್​ ವೇಷ ಧರಿಸಿರುವುದು ಒಂದು ಜಾಹೀರಾತಿಗಾಗಿ ಮಾತ್ರ! ಇನ್​ಶ್ಯೂರೆನ್ಸ್​ ಕಂಪನಿಯ ಜಾಹೀರಾತಿನಲ್ಲಿ ರೋಹಿತ್​ ಶೆಟ್ಟಿ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ. ‘ಚಿಂಗಂ ಕೆ’ ಎಂಬ ಪೊಲೀಸ್​ ಅಧಿಕಾರಿಯ ಪಾತ್ರವನ್ನು ರಣಬೀರ್​ ಕಪೂರ್​ ಮಾಡಿದ್ದಾರೆ. ರೋಹಿತ್​ ಶೆಟ್ಟಿಯ ಸಿನಿಮಾ ಶೂಟಿಂಗ್​ ವೇಳೆ ಯಾವ ಅವಘಡ ಬೇಕಾದರೂ ಆಗಬಹುದು. ಹಾಗಾಗಿ ಇನ್​ಶ್ಯೂರೆನ್ಸ್​ ಮಾಡಿಸುವುದು ಅಗತ್ಯ ಎಂಬ ಸಂದೇಶ ನೀಡುವ ರೀತಿಯಲ್ಲಿ ಈ ಜಾಹೀರಾತು ಮೂಡಿಬಂದಿದೆ.

ಇದನ್ನೂ ಓದಿ: ‘ಸಿಂಗಂ ಅಗೇನ್​’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಗೆ ಶಕ್ತಿ ಶೆಟ್ಟಿ ಪಾತ್ರ

‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಣಬೀರ್​ ಕಪೂರ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಹಲವು ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಜಾಹೀರಾತುಗಳಲ್ಲಿ ನಟಿಸುವ ಅವರಿಗೆ ಕೋಟ್ಯಂತರ ರೂಪಾಯಿ ಹಣ ಸಿಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್