ಆಮಿರ್ ಖಾನ್ ಮಗಳ ಮದುವೆಗೆ ಪ್ರಮುಖ ವ್ಯಕ್ತಿಯೇ ಗೈರು; ಮೂಡಿತು ಅನುಮಾನ

ಅಮಿರ್ ಖಾನ್ ಮಾಜಿ ಪತ್ನಿಯರಾದ ರೀನಾ ದತ್ತ ಹಾಗೂ ಕಿರಣ್ ರಾವ್ ಅವರು ಇರಾ ಖಾನ್ ಮದುವೆಯಲ್ಲಿ ಭಾಗಿ ಆಗಿದ್ದರು. ಮದುವೆಯಲ್ಲಿ ಇವರು ಹೈಲೈಟ್ ಆಗಿದ್ದಾರೆ. ಆದರೆ, ಫಾತಿಮಾ ಅವರು ಮದುವೆಗೆ ಬರದೇ ಇರುವುದನ್ನು ನೋಡಿ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಮೂಡಿದೆ.

ಆಮಿರ್ ಖಾನ್ ಮಗಳ ಮದುವೆಗೆ ಪ್ರಮುಖ ವ್ಯಕ್ತಿಯೇ ಗೈರು; ಮೂಡಿತು ಅನುಮಾನ
ಆಮಿರ್​ ಹಾಗೂ ಅವರ ಮಗಳು
Follow us
|

Updated on:Jan 06, 2024 | 10:38 AM

ಆಮಿರ್ ಖಾನ್ (Aamir Khan) ಮಗಳು ಇರಾ ಖಾನ್ ಅವರು ಇತ್ತೀಚೆಗೆ ನೂಪುರ್ ಶಿಖಾರೆ ಜೊತೆ ಮದುವೆ ಆಗಿದ್ದಾರೆ. ಮುಂಬೈ ಹೋಟೆಲ್​ ಒಂದರಲ್ಲಿ ಖಾಸಗಿಯಾಗಿ ಈ ಮದುವೆ ಸಮಾರಂಭ ನಡೆದಿದೆ. ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಆಗಮಿಸಿದ್ದರು. ಹಲವು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿ ಆಗಿದ್ದರು.  ಮದುವೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿವಾಹ ಸಮಾರಂಭಕ್ಕೆ ಪ್ರಮುಖ ವ್ಯಕ್ತಿಯೊಬ್ಬರು ಮಿಸ್​ ಆಗಿದ್ದಾರೆ. ಅದುವೇ ಫಾತಿಮಾ ಸನಾ ಶೇಖ್.

ಅಮಿರ್ ಖಾನ್ ಮಾಜಿ ಪತ್ನಿಯರಾದ ರೀನಾ ದತ್ತ ಹಾಗೂ ಕಿರಣ್ ರಾವ್ ಅವರು ಇರಾ ಖಾನ್ ಮದುವೆಯಲ್ಲಿ ಭಾಗಿ ಆಗಿದ್ದರು. ಮದುವೆಯಲ್ಲಿ ಇವರು ಹೈಲೈಟ್ ಆಗಿದ್ದಾರೆ. ಆದರೆ, ಫಾತಿಮಾ ಅವರು ಮದುವೆಗೆ ಬರದೇ ಇರುವುದನ್ನು ನೋಡಿ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಇಬ್ಬರ ಮಧ್ಯೆ ಈಗ ಏನೂ ಇಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.

ಆಮಿರ್ ಖಾನ್ ಹಾಗೂ ಫಾತಿಮಾ ಮಧ್ಯೆ ದೊಡ್ಡ ವಯಸ್ಸಿನ ಅಂತರ ಇದೆ. ಇಬ್ಬರೂ ‘ದಂಗಲ್’ ಸಿನಿಮಾದಲ್ಲಿ ಅಪ್ಪ-ಮಗಳ ಪಾತ್ರ ಮಾಡಿದ್ದರು. ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ಈ ಕಾರಣದಿಂದಲೇ ಕಿರಣ್ ರಾವ್​ ಅವರಿಗೆ ಆಮಿರ್ ವಿಚ್ಛೇದನ ನೀಡಿದರು ಎನ್ನುವ ಸುದ್ದಿಯೂ ಇದೆ. ಆದರೆ, ಫಾತಿಮಾ ಅವರು ಮದುವೆಗೆ ಬರದೇ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮಗಳ ಮದುವೆಯಲ್ಲಿ ಮಾಜಿ ಪತ್ನಿ ಕಿರಣ್​ ರಾವ್​ಗೆ ಕಿಸ್​ ಮಾಡಿದ ಆಮಿರ್ ಖಾನ್​; ವಿಡಿಯೋ ವೈರಲ್​ 

ಇಂದು (ಜನವರಿ 6) ಉದಯಪುರದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕುಟುಂಬದವರು, ಆಪ್ತರು ಆಗಮಿಸಲಿದ್ದಾರೆ. ಜನವರಿ 8ರಂದು ಮುಂಬೈನಲ್ಲಿ ರಿಸೆಪ್ಷನ್ ಇದೆ. ಇದಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ಕರೀನಾ ಕಪೂರ್ ಸೇರಿ ಅನೇಕ ಸೆಲೆಬ್ರಿಟಿಗಳು  ಆಗಮಿಸಲಿದ್ದಾರೆ.

ಇರಾ ಖಾನ್ ಹಾಗೂ ನೂಪುರ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ನೂಪುರ್  ಫಿಟ್ನೆಸ್ ಟ್ರೇನರ್ ಆಗಿದ್ದಾರೆ. ನೂಪುರ್ ಬಳಿ ಟ್ರೇನಿಂಗ್ ಪಡೆಯಲು ಇರಾ ಬಂದಿದ್ದರು. ಆಗ ಇಬ್ಬರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:30 am, Sat, 6 January 24

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ