ಒಂದೇ ಒಂದು ವಿಡಿಯೋದಿಂದ ಐಶ್ವರ್ಯಾ ರೈ-ಅಭಿಷೇಕ್ ವಿಚ್ಛೇದನ ವದಂತಿಗೆ ಬಿತ್ತು ತೆರೆ

ಸದ್ಯ ಪ್ರೋ ಕಬ್ಬಡ್ಡಿ ಪಂದ್ಯಗಳು ನಡೆಯುತ್ತಿವೆ. ಅಭಿಷೇಕ್ ಬಚ್ಚನ್ ಅವರು ‘ಜೈಪುರ್ ಪಿಂಕ್ ಪ್ಯಾಂಥರ್ಸ್’ ತಂಡದ ಒಡೆತನ ಹೊಂದಿದ್ದಾರೆ. ಈ ತಂಡವನ್ನು ಚಿಯರ್ಸ್ ಮಾಡಲು ಇಡೀ ಫ್ಯಾಮಿಲಿ ಒಟ್ಟಾಗಿ ಬಂದಿದೆ.

ಒಂದೇ ಒಂದು ವಿಡಿಯೋದಿಂದ ಐಶ್ವರ್ಯಾ ರೈ-ಅಭಿಷೇಕ್ ವಿಚ್ಛೇದನ ವದಂತಿಗೆ ಬಿತ್ತು ತೆರೆ
ಒಂದೇ ಒಂದು ವಿಡಿಯೋದಿಂದ ಐಶ್ವರ್ಯಾ ರೈ-ಅಭಿಷೇಕ್ ವಿಚ್ಛೇದನ ವದಂತಿಗೆ ಬಿತ್ತು ತೆರೆ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 07, 2024 | 9:52 AM

‘ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ (Aishwarya Rai Bchchan) ವಿಚ್ಛೇದನ ಪಡೆಯುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಯಾವುದೂ ಸರಿ ಇಲ್ಲ’ ಎಂಬಿತ್ಯಾದಿ ಸುದ್ದಿಗಳು ಇತ್ತೀಚೆಗೆ ವೈರಲ್ ಆಗಿದ್ದವು. ಇದಕ್ಕೆ ಪೂರಕವಾಗಿ ಸಾಕಷ್ಟು ಘಟನೆಗಳು ನಡೆದವು. ಆದರೆ, ಬಚ್ಚನ್ ಕುಟುಂಬ ಈ ವದಂತಿಗೆ ಹೆಚ್ಚು ತಲೆಕೆಡಿಸಿಕೊಳ್ಳಲೇ ಇಲ್ಲ. ಅಭಿಮಾನಿಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದವು. ಈಗ ಒಂದು ವಿಚಾರದಿಂದ ಎಲ್ಲಾ ವದಂತಿಗೆ ತೆರೆ ಬಿದ್ದಿದೆ. ಆ ಬಗ್ಗೆ ಇಲ್ಲಿದೆ ವಿವರ.

ಸದ್ಯ ಪ್ರೋ ಕಬ್ಬಡ್ಡಿ ಪಂದ್ಯಗಳು ನಡೆಯುತ್ತಿವೆ. ಅಭಿಷೇಕ್ ಬಚ್ಚನ್ ಅವರು ‘ಜೈಪುರ್ ಪಿಂಕ್ ಪ್ಯಾಂಥರ್ಸ್’ ತಂಡದ ಒಡೆತನ ಹೊಂದಿದ್ದಾರೆ. ಈ ತಂಡವನ್ನು ಚಿಯರ್ಸ್ ಮಾಡಲು ಇಡೀ ಫ್ಯಾಮಿಲಿ ಒಟ್ಟಾಗಿ ಬಂದಿದೆ. ‘ಸ್ಟಾರ್ಸ್ ಸ್ಪೋರ್ಟ್ಸ್’ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಆರಾಧ್ಯಾ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ ಸೇರಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಚಿಯರ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಜೈಪುರ್ ಪಿಂಕ್ ಪ್ಯಾಂಥರ್ಸ್’ ತಂಡದ ಒಡೆತನವನ್ನು ಅಭಿಷೇಕ್ ಬಚ್ಚನ್ ಹಾಗೂ ಬಂಟಿ ವಾಲಿಯಾ ಹೊಂದಿದ್ದಾರೆ. 2014ರಿಂದ ಈ ತಂಡ ಪ್ರೋ ಕಬ್ಬಡ್ಡಿ ಆಡುತ್ತಿದೆ. ಈಗ ತಂಡವನ್ನು ಬಚ್ಚನ್ ಕುಟುಂಬ ಒಟ್ಟಾಗಿ ಸಪೋರ್ಟ್ ಮಾಡಿದೆ.

ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ. ಅಮಿತಾಭ್ ಬಚ್ಚನ್ ಬರ್ತ್​ಡೇಗೆ ಉದ್ದ ಲೈನ್ ಬರೆದು ಹಾಕಿದ್ದ ಅಭಿಷೇಕ್ ಬಚ್ಚನ್ ಅವರು ಪತ್ನಿ ಬರ್ತ್​ಡೇಗೆ ಚಿಕ್ಕದಾಗಿ ‘ಹ್ಯಾಪಿ ಬರ್ತ್​ಡೇ’ ಎಂದಷ್ಟೇ ಹಾಕಿದ್ದರು. ಆ ಬಳಿಕ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಮಾತು ಕೇಳಿ ಬಂತು.

ಇದನ್ನೂ ಓದಿ: ಅಭಿಷೇಕ್​ ಜೊತೆ ವಿಚ್ಛೇದನ ಆದರೆ ಐಶ್ವರ್ಯಾ ರೈಗೆ ಸಿಗೋ ಜೀವನಾಂಶ ಎಷ್ಟು?

ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಒಂದಾಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದರು. ಈ ಪ್ರಾರ್ಥನೆ ಸಫಲವಾಗುವ ಸೂಚನೆ ಸಿಕ್ಕಿದೆ. ಐಶ್ವರ್ಯಾ ರೈ ಬಚ್ಚನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಐಶ್ವರ್ಯಾ ರೈ ಬಚ್ಚನ್ ಅವರು ಸಿನಿಮಾ ಆಯ್ಕೆಯಲ್ಲಿ ಸಖಥ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ