Sanjay Dutt Birthday: ಸಂಜಯ್ ದತ್ ಜನ್ಮದಿನಕ್ಕೆ ರಿವೀಲ್ ಆಯ್ತು ‘ಕೆಡಿ’ ಚಿತ್ರದ ಪೋಸ್ಟರ್
‘ಕೆಡಿ’ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅವರು ಈ ಚಿತ್ರದಲ್ಲಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಠಕ್ಕರ್ ಕೊಡೋ ಪಾತ್ರದಲ್ಲಿ ಸಂಜಯ್ ದತ್ ನಟಿಸಲಿದ್ದಾರೆ. ಈ ಸಿನಿಮಾ ರೆಟ್ರೋ ಕಥೆಯನ್ನು ಹೊಂದಿದೆ ಎನ್ನಲಾಗಿದೆ.
ನಟ ಸಂಜಯ್ ದತ್ ಅವರಿಗೆ ಇಂದು (ಜುಲೈ 29) ಜನ್ಮದಿನದ ಸಂಭ್ರಮ. ಅವರಿಗೆ ಆಪ್ತರು, ಗೆಳೆಯರು, ಸಿನಿಮಾ ಇಂಡಸ್ಟ್ರಿಯ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಇತ್ತೀಚೆಗೆ ಸಂಜಯ್ ದತ್ ದಕ್ಷಿಣದತ್ತ ಹೆಚ್ಚು ಮುಖ ಮಾಡಿದ್ದಾರೆ. ಅವರು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿನ ಸಂಜಯ್ ದತ್ ಲುಕ್ನ ರಿವೀಲ್ ಮಾಡಲಾಗಿದೆ. ಕೆವಿಎನ್ ಪ್ರೊಡಕ್ಷನ್ ಕಡೆಯಿಂದ ಸಂಜಯ್ ದತ್ ಅವರ ಲುಕ್ ರಿವೀಲ್ ಮಾಡಲಾಗಿದೆ.
‘ಕೆಡಿ’ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅವರು ಈ ಚಿತ್ರದಲ್ಲಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಠಕ್ಕರ್ ಕೊಡೋ ಪಾತ್ರದಲ್ಲಿ ಸಂಜಯ್ ದತ್ ನಟಿಸಲಿದ್ದಾರೆ. ಈ ಸಿನಿಮಾ ರೆಟ್ರೋ ಕಥೆಯನ್ನು ಹೊಂದಿದೆ ಎನ್ನಲಾಗಿದೆ. ಹೀಗಾಗಿ, ಅದೇ ರೀತಿಯಲ್ಲಿ ಸಿನಿಮಾದ ಲುಕ್ ರಿವೀಲ್ ಮಾಡಲಾಗಿದೆ.
ಈ ಪೋಸ್ಟರ್ನಲ್ಲಿ ಸಂಜಯ್ ದತ್ ಅವರು ರೆಟ್ರೋ ಕಾರಿನ ಮುಂದೆ ನಿಂತಿದ್ದಾರೆ. ಅವರ ಹಿಂಭಾಗದಲ್ಲಿ ಇರೋ ಎಲ್ಲಾ ಮನೆಗಳು ಹಳೆಯ ಕಾಲದ ಮನೆಗಳ ರೀತಿಯಲ್ಲೇ ಇವೆ. ಈ ಮೂಲಕ ಸಿನಿಮಾದ ಕಥೆ ಸಾಗೋದು ಹಳೆಯ ಕಾಲದಲ್ಲಿ ಅನ್ನೋದು ಸ್ಪಷ್ಟವಾಗಿದೆ.
The Lord of Devil’s Democracy, 𝐃𝐡𝐚𝐤 𝐃𝐞𝐯𝐚, steps into #KD’s Vintage Battlefield, bringing a storm of intensity 💥
Here’s wishing our beloved @duttsanjay sir a very Happy Birthday! We’re delighted to have him in #KDTheDevil ❤️🔥#SanjayDuttInKD… pic.twitter.com/zgocz0iLJh
— KVN Productions (@KvnProductions) July 29, 2024
ಇದನ್ನೂ ಓದಿ: ಸ್ಕ್ರಿಪ್ಟ್ನಲ್ಲಿ ಗೊಂದಲ; ಮೂರನೇ ಪಾರ್ಟ್ನಿಂದ ಹೊರ ನಡೆದ ಸಂಜಯ್ ದತ್
ಈ ಚಿತ್ರದಲ್ಲಿ ಸಂಜಯ್ ದತ್ ಅವರದ್ದು ಪೊಲೀಸ್ ಪಾತ್ರವೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅವರ ಕೈಯಲ್ಲಿ ಲಾಟಿ ಇದೆ. ತಲೆ ಮೇಲೆ ಪೊಲೀಸ್ ಕ್ಯಾಪ್ ಇದೆ. ಅವರು ಉದ್ದನೆಯ ಕೂದಲು ಬಿಟ್ಟಿದ್ದಾರೆ. ಧಾಕ್ ದೇವ್ ಎಂಬುದು ಸಂಜಯ್ ಪಾತ್ರದ ಹೆಸರು. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ವರ್ಷವೇ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.