ಸೋತು ಸುಣ್ಣವಾದ ಸರಣಿಯಲ್ಲಿ ನಾಲ್ಕನೇ ಸಿನಿಮಾ; ಟೈಗರ್ ಶ್ರಾಫ್​ ಸಿನಿಮಾಗೆ ಸಿಗ್ತಿಲ್ಲ ನಿರ್ದೇಶಕ

‘ಬಾಘಿ’ ಹಾಗೂ ‘ಬಾಘಿ 2’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದವು. ಆದರೆ, ‘ಬಾಘಿ 3’ ಸಿನಿಮಾ ಅಂದುಕೊಟ್ಟ ಮಟ್ಟಕ್ಕೆ ಹಿಟ್ ಆಗಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 93 ಕೋಟಿ ರೂಪಾಯಿ. ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಈಗ ನಾಲ್ಕನೇ ಪಾರ್ಟ್ ಬರುತ್ತಿದೆ.

ಸೋತು ಸುಣ್ಣವಾದ ಸರಣಿಯಲ್ಲಿ ನಾಲ್ಕನೇ ಸಿನಿಮಾ; ಟೈಗರ್ ಶ್ರಾಫ್​ ಸಿನಿಮಾಗೆ ಸಿಗ್ತಿಲ್ಲ ನಿರ್ದೇಶಕ
ಟೈಗರ್ ಶ್ರಾಫ್
Follow us
ರಾಜೇಶ್ ದುಗ್ಗುಮನೆ
|

Updated on:Jul 29, 2024 | 12:45 PM

ಬಾಲಿವುಡ್​ನ ಖ್ಯಾತ ನಟ ಟೈಗರ್ ಶ್ರಾಫ್ ಅವರು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅಂದುಕೊಂಡ ರೀತಿಯಲ್ಲಿ ಕಮಾಲ್ ಮಾಡಿಲ್ಲ. ಇದಾದ ಬಳಿಕ ಟೈಗರ್ ಶ್ರಾಫ್ ಅವರಿಗೆ ಆಫರ್​ಗಳೇ ಬಂದಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ ಈಗ ಪಡೆಯುತ್ತಿರೋ ಸಂಭಾವನೆಗಿಂತ ಅರ್ಧದಷ್ಟು ಮೊತ್ತವನ್ನು ಕಡಿಮೆ ಮಾಡಿಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ. ಈ ಮಧ್ಯೆ ಅವರಿಗೆ ‘ಬಾಘಿ 4’ ಚಿತ್ರದ ತಂಡದಿಂದ ಆಫರ್ ಬಂದಿದೆ ಎನ್ನಲಾಗಿದೆ.

‘ಬಾಘಿ’ ಹಾಗೂ ‘ಬಾಘಿ 2’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದವು. ಆದರೆ, ‘ಬಾಘಿ 3’ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 93 ಕೋಟಿ ರೂಪಾಯಿ. ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಈಗ ಅವರಿಗೆ ‘ಬಾಘಿ 4’ ಸಿನಿಮಾ ಕಡೆಯಿಂದ ಆಫರ್ ಬಂದಿದೆ ಎನ್ನಲಾಗಿದೆ.

2016ರಲ್ಲಿ ‘ಬಾಘಿ’ ರಿಲೀಸ್ ಆಯಿತು. 2018ರಲ್ಲಿ ‘ಬಾಘಿ 2’ ಹಾಗೂ 2020ರಲ್ಲಿ ‘ಬಾಘಿ 3’ ರಿಲೀಸ್ ಆಗಿದೆ. ಈಗ ನಾಲ್ಕು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಆಲೋಚನೆ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾಗೆ ಬಂದಿದೆ. ಈಗ ಅವರು ನಿರ್ದೇಶಕರ ಹುಡುಕಾಟದಲ್ಲಿ ಇದ್ದಾರೆ.

ಟೈಗರ್ ಶ್ರಾಫ್ ಅವರನ್ನು ಜನರು ಇತ್ತೀಚೆಗೆ ತಿರಸ್ಕರಿಸುತ್ತಿದ್ದಾರೆ. ಅವರು ಹೀರೋ ಆಗಿ ನಟಿಸಿದ ಸಿನಿಮಾಗಳು ಮೆಚ್ಚುಗೆ ಪಡೆಯುತ್ತಿಲ್ಲ. ಅದರಲ್ಲೂ ಅವರ ಸಿನಿಮಾಗಳಲ್ಲಿ ಇರೋದೆಲ್ಲ ಕೇವಲ ಆ್ಯಕ್ಷನ್. ಹೀಗಾಗಿ, ಒಂದು ವರ್ಗದ ಜನರಿಗೆ ಈ ಸಿನಿಮಾ ಅಷ್ಟಾಗಿ ಇಷ್ಟ ಆಗದೇ ಇರಬಹುದು. ಆದರೂ ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳೋಕೆ ರೆಡಿ ಆಗಿದ್ದಾರೆ.

ಇದನ್ನೂ ಓದಿ: ದಿಶಾ ಪಟಾಣಿ ವಿಚಾರದಲ್ಲಿ ಕಾಲೆಳೆದ ಅಕ್ಷಯ್ ಕುಮಾರ್​​ಗೆ ತಿರುಗೇಟು ಕೊಟ್ಟ ಟೈಗರ್ ಶ್ರಾಫ್

‘ಬಾಘಿ 4’ ಚಿತ್ರಕ್ಕೆ ನಿರ್ದೇಶಕರು ಸಿಕ್ಕ ಬಳಿಕವೇ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಟೈಗರ್ ಶ್ರಾಫ್ ಸದ್ಯ ‘ಈಗಲ್’ ಹಾಗೂ ‘ಸಿಂಗಂ ಅಗೇನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:44 pm, Mon, 29 July 24

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್