ವಿಡಿಯೋ: ತರುಣ್-ಸೋನಲ್ರ ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆ ಹೀಗಿದೆ
Tharun Sudhir-Sonal Monteiro: ನಿರ್ದೇಶಕ ತುರಣ್ ಸುಧೀರ್ ಖ್ಯಾತ ನಟಿ ಸೋನಲ್ ಜೊತೆ ವಿವಾಹವಾಗುತ್ತಿದ್ದು, ಮದುವೆ ಆಮಂತ್ರಣ ಪತ್ರಿಕೆಯನ್ನು ಭಿನ್ನವಾಗಿ ವಿನ್ಯಾಸ ಮಾಡಿಸಿದ್ದಾರೆ. ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ಇಲ್ಲಿದೆ ನೋಡಿ.
ಸ್ಯಾಂಡಲ್ವುಡ್ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ವಿವಾಹವಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಇವರ ಮದುವೆ ಸಮಾರಂಭವಿದ್ದು ಅತಿಥಿಗಳ ಆಹ್ವಾನಕ್ಕೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ತಯಾರು ಮಾಡಿಸಿದ್ದಾರೆ. ಪ್ರಕೃತಿ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಖಾಲಿ ಹಾಳೆ, ಬರೆಯಲು ಪೆನ್ಸಿಲ್ ಮತ್ತು ಪೆನ್ನುಗಳಿವೆ. ಆಮಂತ್ರಣ ಪತ್ರಿಕೆಯಲ್ಲಿ ಇರುವ ಎಲ್ಲ ವಸ್ತುಗಳಲ್ಲಿಯೂ ಬೀಜಗಳಿದ್ದು ಅವನ್ನು ಮಣ್ಣಿಗೆ ಹಾಕಿದರೆ ಹೂವು, ತರಕಾರಿ ಗಿಡಗಳು ಬಳೆಯುತ್ತವೆ. ಜೊತೆಗೆ ಚಾಕಲೇಟ್ಗಳನ್ನು ಸಹ ಈ ಜೋಡಿ ಆಮಂತ್ರಣ ಪತ್ರಿಕೆಯಲ್ಲಿ ಇರಿಸಿದೆ. ತರುಣ್ ಹಾಗೂ ಸೋನಲ್ರ ಮದುವೆ ಆಮಂತ್ರಣ ಪತ್ರಿಕೆಯ ವಿಡಿಯೋ ವೈರಲ್ ಆಗುತ್ತಿದ್ದು, ಇಲ್ಲಿದೆ ನೋಡಿ ವಿಡಿಯೋ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos