ಊರ್ವಶಿ ಬಾತ್ರೂಂ ವಿಡಿಯೋದ ಅಸಲಿ ವಿಚಾರ ತಿಳಿದು ಎಲ್ಲರೂ ಶಾಕ್
ಊರ್ವಶಿ ಅವರ ಸದಾ ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ. ಅವರ ವಿಡಿಯೋ ಲೀಕ್ ಆದಾಗಲೇ ಇದೊಂದು ಪಬ್ಲಿಸಿಟಿ ಸ್ಟಂಟ್ ಎಂದು ಅನೇಕರು ಕರೆದಿದ್ದರು. ಈ ಬಗ್ಗೆ ಅವರ ಮ್ಯಾನೇಜರ್ ಕೂಡ ಪ್ರತಿಕ್ರಿಯಿಸಿ ಸಿಟ್ಟಾಗಿದ್ದರು. ಈಗ ಊರ್ವಶಿ ಅವರೇ ಈ ಬಗ್ಗೆ ಬರೆದಿದ್ದಾರೆ.
ನಟಿ ಊರ್ವಶಿ ರೌಟೇಲಾ ಅವರ ಬಾತ್ರೂಂ ವಿಡಿಯೋ ಇತ್ತೀಚೆಗೆ ಲೀಕ್ ಆಗಿತ್ತು. ಇದು ಪಬ್ಲಿಸಿಟಿ ಸ್ಟಂಟ್ ಇರಬಹುದು ಎಂದು ಎಲ್ಲರೂ ಊಹಿಸಿದ್ದರು. ಈಗ ಹಾಗೆಯೇ ಆಗಿದೆ. ಇದು ಸಿನಿಮಾದ ದೃಶ್ಯ ಎಂದು ಊರ್ವಶಿ ಒಪ್ಪಿಕೊಂಡಿದ್ದಾರೆ. ಸಿನಿಮಾದ ದೃಶ್ಯ ಲೀಕ್ ಆದ ಬಗ್ಗೆ ಅವರು ಮೊಸಳೆ ಕಣ್ಣೀರು ಹಾಕಿದ್ದಾರೆ. ಆದರೆ, ಜನರು ಇದನ್ನು ಒಪ್ಪಿಲ್ಲ. ಅನೇಕರು ಊರ್ವಶಿ ಅವರನ್ನು ಡ್ರಾಮಾ ಕ್ವೀನ್ ಎಂದು ಕರೆದಿದ್ದಾರೆ.
ಊರ್ವಶಿ ರೌಟೇಲಾ ಅವರ ಖಾಸಗಿ ವಿಡಿಯೋ ಇತ್ತೀಚೆಗೆ ಲೀಕ್ ಆಗಿದೆ ಎಂದು ಹೇಳಲಾಗಿತ್ತು. ಅವರು ಬಾತ್ರೂಂಗೆ ಬಂದು ಟಾಪ್ ಓಪನ್ ಮಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಇತ್ತು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಅನೇಕರು ಈ ವಿಡಿಯೋದ ಅಸಲಿಯತ್ತು ತಿಳಿಯಬೇಕಿದೆ ಎಂದು ಹೇಳಿದ್ದರು. ಹೀಗಿರುವಾಗಲೇ ಅಸಲಿ ವಿಚಾರ ರಿವೀಲ್ ಆಗಿದೆ. ಈ ಬಗ್ಗೆ ಊರ್ವಶಿ ಅವರೇ ಮಾತನಾಡಿದ್ದಾರೆ.
ಇದನ್ನೂ ಓದಿ: ಊರ್ವಶಿ ರೌಟೇಲಾ ಬಾತ್ರೂಂ ವಿಡಿಯೋ ಲೀಕ್; ಸಿಟ್ಟಾದ ನಟಿ
‘ಘುಸ್ಪೈಥಿಯೇ’ ಚಿತ್ರದ ದೃಶ್ಯ ಇದಾಗಿದೆ. ಇದನ್ನು ಊರ್ವಶಿ ಒಪ್ಪಿಕೊಂಡಿದ್ದಾರೆ. ‘ಆ ವಿಡಿಯೋ ವೈರಲ್ ಆದಾಗ ನಾನು ಅಪ್ಸೆಟ್ ಆಗಿದ್ದೆ. ಅದು ನನ್ನ ವೈಯಕ್ತಿಕ ಜೀವನದ ದೃಶ್ಯ ಅಲ್ಲ, ಇದು ಸಿನಿಮಾದಲ್ಲಿ ಬರೋ ಒಂದು ದೃಶ್ಯದ ಭಾಗ’ ಎಂದಿದ್ದಾರೆ ಊರ್ವಶಿ. ಈ ರೀತಿ ಯಾರಿಗೂ ಆಗಬಾರದು ಎಂಬುದು ಅವರ ಅಭಿಪ್ರಾಯ. ‘ಯಾವ ಮಹಿಳೆಗೂ ಈ ರೀತಿ ಆಗಬಾರದು’ ಎಂದಿದ್ದಾರೆ ಅವರು.
ಊರ್ವಶಿ ಅವರ ಸದಾ ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ. ಅವರ ವಿಡಿಯೋ ಲೀಕ್ ಆದಾಗಲೇ ಇದೊಂದು ಪಬ್ಲಿಸಿಟಿ ಸ್ಟಂಟ್ ಎಂದು ಅನೇಕರು ಕರೆದಿದ್ದರು. ಈ ಬಗ್ಗೆ ಅವರ ಮ್ಯಾನೇಜರ್ ಕೂಡ ಪ್ರತಿಕ್ರಿಯಿಸಿ ಸಿಟ್ಟಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.