17ನೇ ವಯಸ್ಸಿಗೆ ಧೂಮಪಾನದ ಚಟ; ಆ ವ್ಯಕ್ತಿಗಾಗಿ ಸಿಗರೇಟ್ ಬಿಟ್ಟ ರಣಬೀರ್ ಕಪೂರ್
ಮಗಳ ಪಾಲನೆಯಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತೊಡಗಿಕೊಂಡಿದ್ದಾರೆ. ಸಿನಿಮಾ ಕೆಲಸಗಳ ನಡುವೆ ಅವರು ಮಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ರಹಾಗಾಗಿ ಸಿಗೇಟರ್ ಬಿಟ್ಟೆ ಎಂದಿದ್ದಾರೆ ರಣಬೀರ್ ಕಪೂರ್. ಅವರ ಹೇಳಿಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.
ರಣಬೀರ್ ಕಪೂರ್ಗೆ ಮಗಳು ರಹಾ ಬಗ್ಗೆ ವಿಶೇಷ ಪ್ರೀತಿ ಬಂದಿದೆ. ಆಕೆಯ ಆರೈಕೆಯಲ್ಲಿ ಅವರು ಸದಾ ಬ್ಯುಸಿ ಇರುತ್ತಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮಗಳ ಜೊತೆ ರಣಬೀರ್ ಹಾಗೂ ಆಲಿಯಾ ಭಟ್ ಪೋಸ್ ಕೊಟ್ಟಿದ್ದು ಇದೆ. ರಹಾ ನೋಡೋಕೆ ಸೇಮ್ ಟು ಸೇಮ್ ಆಲಿಯಾ ಭಟ್ ತರಹವೇ ಇದ್ದಾಳೆ. ಈ ಕಾರಣಕ್ಕೆ ಎಲ್ಲರೂ ಅವಳಿಗೆ ಜೂನಿಯರ್ ಆಲಿಯಾ ಎಂದು ಕರೆದಿದ್ದು ಇದೆ. ರಹಾ ಜನಿಸಿದ ಬಳಿಕ ರಣಬೀರ್ ಕಪೂರ್ಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿದೆ. ಹೀಗಾಗಿ, ಅವರು ಸಿಗರೇಟ್ ಸೇದುವುದನ್ನೇ ಬಿಟ್ಟಿದ್ದಾರೆ.
ಇತ್ತೀಚೆಗೆ ರಣಬೀರ್ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ತಮ್ಮ ಮಗಳ ಬಗ್ಗೆ ಹಾಗೂ ಅವಳು ಜನಿಸುವುದಕ್ಕೂ ಮೊದಲು ಹೇಗಿದ್ದೆ ಎನ್ನುವ ಬಗ್ಗೆ ಮಾತನಾಡಿದ್ದರು. ‘ನಾನು ಒಂದು ಮಗುವಿನ ತಂದೆ. ಅದು ನನ್ನ ಜೀವನದ ಗೇಮ್ ಚೇಂಜರ್ ಪಾಯಿಂಟ್. ನಾನು ಈಗಷ್ಟೇ ಜನಿಸಿದ್ದೇನೆ ಎಂದು ಭಾಸವಾಗುತ್ತಿದೆ. ನಾನು ಮತ್ತೆ ಹುಟ್ಟಿದ್ದೇನೆ. ಈ ಮೊದಲು ಜೀವಿಸಿದ್ದು ಒಂದಾದರೆ ಈಗ ಜೀವಿಸುತ್ತಿರೋದು ಮತ್ತೊಂದು ಜೀವನ ಎನಿಸುತ್ತಿದೆ. ಹೊಸ ಭಾವನೆ ಹಾಗೂ ಆಲೋಚನೆಗಳೊಂದಿಗೆ ಬದುಕುತ್ತಿದ್ದೇನೆ. ನನಗೆ ಈ ಮೊದಲು ಸಾವಿನ ಬಗ್ಗೆ ಯಾವುದೇ ಭಯ ಇಲ್ಲ. ನಾನು ಯಾವಾಗಲೂ 71ನೇ ವಯಸ್ಸಿಗೆ ಸಾಯಬೇಕು ಎಂದುಕೊಳ್ಳುತ್ತಿದ್ದೆ. ಏಕೆಂದರೆ ನನಗೆ 8ನೇ ನಂಬರ್ (7+1=8) ಮೇಲೆ ವಿಶೇಷ ಪ್ರೀತಿ. ಆದರೆ, 71 ಅನ್ನೋದು ಬೇಗ ಅನಿಸುತ್ತಿದೆ. ಇದಕ್ಕೆಲ್ಲ ಕಾರಣ ರಹಾ’ ಎಂದಿದ್ದಾರೆ ರಣಬೀರ್.
ರಹಾಗಾಗಿ ಸಿಗೇಟರ್ ಬಿಟ್ಟೆ ಎಂದಿದ್ದಾರೆ ರಣಬೀರ್ ಕಪೂರ್. ‘ನಾನು 17ನೇ ವಯಸ್ಸಿನಿಂದ ಸಿಗರೇಟ್ ಸೇದೋಕೆ ಆರಂಭಿಸಿದೆ. ಅದು ನನಗೆ ಚಟವಾಗಿತ್ತು. ಕಳೆದ ವರ್ಷ ನಾನು ಸಿಗರೇಟ್ ಬಿಟ್ಟೆ. ನಾನು ತಂದೆ ಆದ ಬಳಿಕ ತುಂಬಾನೇ ಅನಾರೋಗ್ಯಕರ ಜೀವನ ನಡೆಸುತ್ತಿದ್ದೇನೆ ಎನಿಸಿತು. ಅದಕ್ಕಾಗಿ ಸಿಗರೇಟ್ ಸೇದುವುದನ್ನು ತೊರೆದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಕ್ಷಮಿಸಿ, ಅನಿಮಲ್ ರೀತಿಯ ಸಿನಿಮಾ ಮತ್ತೆ ಮಾಡಲ್ಲ’: ರಣಬೀರ್ ಕಪೂರ್ ಹೀಗೆ ಹೇಳಿದ್ದೇಕೆ?
‘ಆಲಿಯಾ ಪ್ರೆಗ್ನೆಂಟ್ ಆದಾಗ ನನಗೇನು ಅನಿಸುತ್ತಾ ಇರಲಿಲ್ಲ. ಆದರೆ, ಆಲಿಯಾ ಇದನ್ನು ಫೀಲ್ ಮಾಡುತ್ತಿದ್ದಳು. ಏಕೆಂದರೆ ಮಗು ಇದ್ದಿದ್ದು ಅವಳ ಹೊಟ್ಟೆಯಲ್ಲಿ. ಆದರೆ, ಮಗಳು ಜನಿಸಿ ಅದನ್ನು ನನ್ನ ಕೈ ಮೇಲೆ ಇಟ್ಟಾಗ ನನ್ನ ಹೃದಯವನ್ನು ತೆಗೆದು ಯಾರೋ ನನ್ನ ಕೈಮೇಲೆ ಇಟ್ಟ ಭಾವನೆ’ ಎಂದಿದ್ದಾರೆ ರಣಬೀರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.