ಐದೇ ನಿಮಿಷದಲ್ಲಿ ಮದುವೆ ಡ್ರೆಸ್ ಆಯ್ಕೆ ಮಾಡಿದ್ದ ನಟಿ ಸೋನಾಕ್ಷಿ ಸಿನ್ಹಾ; ಹೇಗೆ ಸಾಧ್ಯ?
ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಖ್ಬಾಲ್ ಅವರು ಇತ್ತೀಚೆಗೆ ದಾಂಪತ್ಯ ಜೀವನ ಆರಂಭಿಸಿದರು. ಮದುವೆಯ ದಿನ ಸೋನಾಕ್ಷಿ ಸಿನ್ಹಾ ಧರಿಸಿದ್ದ ಸೀರೆ ಮತ್ತು ಆಭರಣ ತುಂಬ ಸಿಂಪಲ್ ಆಗಿತ್ತು. ಅದರ ಹಿಂದಿನ ಕಥೆ ಏನು ಎಂಬುದನ್ನು ಅವರು ಈಗ ತೆರೆದಿಟ್ಟಿದ್ದಾರೆ. ಸಿಂಪಲ್ ಮದುವೆಯ ಟ್ರೆಂಡ್ ಮರಳಿ ಬರುತ್ತದೆ ಎಂದು ಅವರು ಹೇಳಿದ್ದಾರೆ.
ನಟಿ ಸೋನಾಕ್ಷಿ ಸಿನ್ಹಾ ಅವರು ಇತ್ತೀಚೆಗೆ ಪ್ರಿಯಕರ ಝಹೀರ್ ಇಖ್ಬಾಲ್ ಜೊತೆ ಮದುವೆ ಆದರು. ಅವರ ವಿವಾಹ ಅನೇಕ ಕಾರಣಗಳಿಂದ ಚರ್ಚೆಗೆ ಆಹಾರ ಆಯಿತು. ಇಬ್ಬರದ್ದು ಅಂತರ್ಧರ್ಮೀಯ ವಿವಾಹ ಎಂಬ ಕಾರಣದಿಂದ ಹಲವರು ಟೀಕೆ ಮಾಡಿದರು. ಅದೇನೇ ಇರಲಿ, ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರು ಈಗ ಖುಷಿಯಿಂದ ಸಂಸಾರ ನಡೆಸುತ್ತಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಮದುವೆಯ ಡ್ರೆಸ್ ಬಗ್ಗೆ ಮಾತನಾಡಿದ್ದಾರೆ. ಸರಳವಾಗಿ ವಿವಾಹ ಆಗುವುದು ಅವರ ಉದ್ದೇಶ ಆಗಿತ್ತು ಎಂಬುದನ್ನು ವಿವರಿಸಿದ್ದಾರೆ.
ಮದುವೆಯಲ್ಲಿ ಯಾವ ರೀತಿ ಡ್ರೆಸ್ ಧರಿಸಬೇಕು ಎಂಬುದರ ಬಗ್ಗೆ ಬಹುತೇಕರಿಗೆ ಕನಸು ಇರುತ್ತದೆ. ಹಾಗಾಗಿ ಮದುವೆ ಡ್ರೆಸ್ ಆಯ್ಕೆ ಮಾಡುವಾಗ ತುಂಬ ಸಮಯ ಹಿಡಿಯುತ್ತದೆ. ಆದರೆ ಸೋನಾಕ್ಷಿ ಸಿನ್ಹಾ ಅವರು ಕೇವಲ ಐದೇ ನಿಮಿಷದಲ್ಲಿ ತಮ್ಮ ಮದುವೆಯ ಡ್ರೆಸ್ ಸೆಲೆಕ್ಟ್ ಮಾಡಿದ್ದರು. ಅದು ಹೇಗೆ ಸಾಧ್ಯವಾಯ್ತು ಎಂಬುದಕ್ಕೂ ಅವರು ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಝಹೀರ್ ಇಖ್ಬಾಲ್ ಜತೆ ಮದುವೆ ಆದ ಬಳಿಕ ಸೋನಾಕ್ಷಿ ಜೀವನ ಇನ್ನಷ್ಟು ಕಲರ್ಫುಲ್
ವಿವಾಹದ ದಿನ ತಾಯಿಯ ಸೀರೆಯನ್ನೇ ಧರಿಸಬೇಕು ಎಂಬುದು ಸೋನಾಕ್ಷಿ ಸಿನ್ಹಾ ಅವರ ಆಸೆ ಆಗಿತ್ತು. ಅದರಲ್ಲಿ ಯಾವ ಸೀರೆ ಎಂಬುದನ್ನು ಸೆಲೆಕ್ಟ್ ಮಾಡಲು ಅವರು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಐದೇ ನಿಮಿಷದಲ್ಲಿ ಸೀರೆ ಆಯ್ಕೆ ಮಾಡಿಕೊಂಡರು. ಅಲ್ಲದೇ, ಮದುವೆಯ ದಿನ ತಾಯಿಯ ಆಭರಣಗಳನ್ನೇ ಸೋನಾಕ್ಷಿ ಸಿನ್ಹಾ ಅವರು ಧರಿಸಿದ್ದರು. ಬಟ್ಟೆಗಳನ್ನು ರಿಪೀಟ್ ಮಾಡುವ ಬಗ್ಗೆ ಸೋನಾಕ್ಷಿ ಯಾವುದೇ ಹಿಂಜರಿಕೆ ಇಟ್ಟುಕೊಂಡಿಲ್ಲ.
View this post on Instagram
ಬೇರೆ ನಟಿಯರಿಗೆ ಹೋಲಿಸಿದರೆ ಸೋನಾಕ್ಷಿ ಸಿನ್ಹಾ ಅವರು ತುಂಬ ಸರಳವಾಗಿ ಮದುವೆ ಆಗಿದ್ದಾರೆ. ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅವರ ವಿವಾಹ ನಡೆಯಿತು. ಬಳಿಕ ಬಾಲಿವುಡ್ ಮಂದಿಗಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸರಳ ಮದುವೆಯ ಟ್ರೆಂಡ್ ಮತ್ತೆ ಚಾಲ್ತಿಗೆ ಬರಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಸೋನಾಕ್ಷಿ ಸಿನ್ಹಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ‘ಹೀರಾಮಂಡಿ’ ವೆಬ್ಸರಣಿಯಲ್ಲಿ ಅವರು ಮಾಡಿದ ಪಾತ್ರ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.