Sanjay Dutt: ಸ್ಕ್ರಿಪ್ಟ್​ನಲ್ಲಿ ಗೊಂದಲ; ಮೂರನೇ ಪಾರ್ಟ್​ನಿಂದ ಹೊರ ನಡೆದ ಸಂಜಯ್ ದತ್

ಚಿತ್ರದ ಶೂಟಿಂಗ್ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎನ್ನಲಾಗಿದೆ. ಯಾವುದೇ ಪ್ಲ್ಯಾನ್ ಇಲ್ಲದೆ ಶೂಟ್ ಮಾಡಲಾಗುತ್ತಿದೆ. ಇದು ಸಂಜಯ್ ದತ್ ಬೇಸರಕ್ಕೆ ಕಾರಣ ಆಗಿದೆ. ಇನ್ನು, ಸಿನಿಮಾದ ಸ್ಕ್ರಿಪ್ಟ್​ನಲ್ಲಿ ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಅವರು ಸಿನಿಮಾ ಹೊರ ನಡೆದಿದ್ದಾರೆ.

Sanjay Dutt: ಸ್ಕ್ರಿಪ್ಟ್​ನಲ್ಲಿ ಗೊಂದಲ; ಮೂರನೇ ಪಾರ್ಟ್​ನಿಂದ ಹೊರ ನಡೆದ ಸಂಜಯ್ ದತ್
ಸಂಜಯ್ ದತ್
Follow us
ರಾಜೇಶ್ ದುಗ್ಗುಮನೆ
|

Updated on: May 21, 2024 | 11:37 AM

ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್ 2’ನಲ್ಲಿ ಅವರು ಮಾಡಿದ ಅಧೀರನ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಆ ಪಾತ್ರ ಅಲ್ಲಿಗೆ ಕೊನೆ ಆಗಿದೆ. ಈ ಸಿನಿಮಾದ ಬಳಿಕ ದಕ್ಷಿಣ ಭಾರತದಿಂದ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ಅಷ್ಟೇ ಅಲ್ಲ, ಬಾಲಿವುಡ್​ನಲ್ಲೂ ಅವರು ಬ್ಯುಸಿ ಇದ್ದಾರೆ. ಅವರು ಹಿಂದಿಯ ‘ವೆಲ್​ಕಮ್​ 3’ ಚಿತ್ರದ ಭಾಗವಾಗಬೇಕಿತ್ತು. ಆದರೆ, ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ.

ಈ ವರ್ಷದ ಆರಂಭದಲ್ಲಿ ಫಿರೋಜ್ ನಾಡಿಯಾದ್ವಾಲಾ ಹಾಗೂ ಅಕ್ಷಯ್ ಕುಮಾರ್ ಅವರು ‘ವೆಲ್​ಕಮ್​ ಟು ದಿ ಜಂಗಲ್’ ಸಿನಿಮಾ ಘೋಷಣೆ ಮಾಡಿದರು. ‘ವೆಲ್​ಕಮ್’ ಫ್ರಾಂಚೈಸ್​ನ​ 3 ಸಿನಿಮಾ ಇದು. ಈ ಚಿತ್ರದ ಪಾತ್ರವರ್ಗವನ್ನು ಘೋಷಣೆ ಮಾಡಲಾಗಿದ್ದು, ದೊಡ್ಡ ದೊಡ್ಡ ಸ್ಟಾರ್​ಗಳು ಇದ್ದಾರೆ. ಸಂಜಯ್ ದತ್ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಬೇಕಿತ್ತು. ಆದರೆ, ಈ ಚಿತ್ರದಿಂದ ಅವರು ಹೊರ ನಡೆದಿದ್ದಾರೆ.

‘ವೆಲ್​ಕಮ್ 3’ ಚಿತ್ರದ ಶೂಟಿಂಗ್ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎನ್ನಲಾಗಿದೆ. ಯಾವುದೇ ಪ್ಲ್ಯಾನ್ ಇಲ್ಲದೆ ಶೂಟ್ ಮಾಡಲಾಗುತ್ತಿದೆ. ಇದು ಸಂಜಯ್ ದತ್ ಬೇಸರಕ್ಕೆ ಕಾರಣ ಆಗಿದೆ. ಇನ್ನು, ಸಿನಿಮಾದ ಸ್ಕ್ರಿಪ್ಟ್​ನಲ್ಲಿ ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಸಂಜಯ್ ದತ್ ಅವರ ಉಳಿದ ಸಿನಿಮಾಗಳಿಗೆ ತೊಂದರೆ ಉಂಟಾಗುತ್ತಿದೆ. ಈ ಕಾರಣಕ್ಕೆ ಅವರು ಸಿನಿಮಾದಿಂದ ಹೊರ ನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.

‘ವೆಲ್​ಕಮ್ 3’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಅವರು ಅಕ್ಷಯ್ ಕುಮಾರ್​ಗೆ ತಮಗಾಗುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ. ಇದನ್ನು ಒಪ್ಪಿಕೊಂಡಿರೋ ಅಕ್ಷಯ್ ಅವರು ಹೊರ ನಡೆಯಲು ಅವಕಾಶ ನೀಡಿದ್ದಾರೆ. ಸಂಜಯ್ ದತ್ ಅವರು ಈಗಾಗಲೇ 15 ದಿನಗಳ ಕಾಲ ಶೂಟ್​ನಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಇದರಿಂದ ತಂಡಕ್ಕೆ ಮತ್ತಷ್ಟು ನಷ್ಟ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಖಳನಾಯಕ್ ಜೊತೆ ‘ಕಾಟೇರ’: ಸಂಜಯ್ ದತ್, ದರ್ಶನ್ ಭೇಟಿ

ಸಂಜಯ್ ದತ್ ಅವರ ಮನ ಒಲಿಸಲು ತಂಡ ಪ್ರಯತ್ನಿಸಬೇಕು. ಇಲ್ಲವಾದಲ್ಲಿ, ಬೇರೆ ಕಲಾವಿದನ ಹಾಕಿಕೊಂಡು ಮತ್ತೆ ರೀಶೂಟ್ ಮಾಡಬೇಕು. ಇದಕ್ಕೆ ಸಂಜಯ್ ದತ್ ಜೊತೆ ಇರುವ ಇತರ ಕಲಾವಿದರ ಕಾಲ್​ಶೀಟ್ ಹೊಂದಾಣಿಕೆ ಮಾಡಬೇಕು. ಇದೆಲ್ಲವೂ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್