Updated on: Feb 07, 2024 | 10:39 PM
ಬಾಲಿವುಡ್ನ ಸ್ಟಾರ್ ನಟ ಸಂಜಯ್ ದತ್ ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
‘ಕೆಜಿಎಫ್ 2’ ಬಳಿಕ ದಕ್ಷಿಣ ಚಿತ್ರರಂಗದ ಡಾರ್ಲಿಂಗ್ ವಿಲನ್ ಆಗಿರುವ ಸಂಜಯ್ ದತ್, ಇದೀಗ ಕನ್ನಡದ ‘ಕೆಡಿ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಇದೀಗ ಸಂಜಯ್ ದತ್ ಅವರನ್ನು ನಟ ದರ್ಶನ್ ಭೇಟಿಯಾಗಿದ್ದಾರೆ. ಸಂಜಯ್ ದತ್ ಅವರಿಗಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ಈ ಭೇಟಿ ನಡೆದಿದೆ ಎನ್ನಲಾಗುತ್ತಿದೆ.
‘ಕೆಡಿ’ ಸಿನಿಮಾದ ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ ಪ್ರೇಮ್, ‘ಕೆಡಿ’ ನಿರ್ಮಾಪಕರು ಒಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.
ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಎರಡನೇ ಕನ್ನಡ ಸಿನಿಮಾ.
ಸಂಜಯ್ ದತ್ ಕೆಲವು ದಿನಗಳ ಹಿಂದಷ್ಟೆ ನಡೆದ ಧ್ರುವ ಸರ್ಜಾರ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದರು.
ಪ್ರೇಮ್ ಅವರು ದರ್ಶನ್ಗಾಗಿ ಸಿನಿಮಾ ಒಂದನ್ನು ನಿರ್ದೇಶನ ಮಾಡುವವರಿದ್ದಾರೆ. ಆ ಸಿನಿಮಾವನ್ನು ಕೆವಿಎನ್ ಅವರೇ ನಿರ್ಮಾಣ ಮಾಡುವ ಸಾಧ್ಯತೆ ಇದೆ.