AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಸಿನಿಮಾ ಒಟಿಟಿ ರಿಲೀಸ್ ಯಾವಾಗ? ಇಲ್ಲಿದೆ ವಿವರ

‘ಧುರಂಧರ್ 2’ OTT ಬಿಡುಗಡೆ ಬಗ್ಗೆ ಇತ್ತೀಚಿನ ಮಾಹಿತಿ ಇಲ್ಲಿದೆ. ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗದೆ, ಜಿಯೋ ಹಾಟ್‌ಸ್ಟಾರ್‌ಗೆ ಮಾರಾಟವಾಗಿದೆ. ಇದು ಇದುವರೆಗಿನ ಅತಿದೊಡ್ಡ ಒಪ್ಪಂದ. ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ 45-60 ದಿನಗಳಲ್ಲಿ, ಅಂದರೆ ಜೂನ್ ಎರಡನೇ ವಾರದೊಳಗೆ ಸ್ಟ್ರೀಮ್ ಆಗುವ ನಿರೀಕ್ಷೆಯಿದೆ. ಪೇಯ್ಡ್ ಪ್ರಿವ್ಯೂ ಹಾಗೂ ಮೊದಲ ದಿನದ ಗಳಿಕೆ 143 ಕೋಟಿಗೂ ಹೆಚ್ಚಿದ್ದು, ಉತ್ತಮ ಪ್ರತಿಕ್ರಿಯೆ ಪಡೆದಿದೆ.

‘ಧುರಂಧರ್ 2’ ಸಿನಿಮಾ ಒಟಿಟಿ ರಿಲೀಸ್ ಯಾವಾಗ? ಇಲ್ಲಿದೆ ವಿವರ
ರಣವೀರ್ ಸಿಂಗ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 20, 2026 | 8:08 AM

Share

‘ಧುರಂಧರ್’ ಚಿತ್ರದ ಮೊದಲ ಭಾಗವು ಡಿಸೆಂಬರ್ 2025ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನಂತರ, ಅದನ್ನು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲಾಯಿತು. ಈಗ ಈ ಚಿತ್ರದ ಮುಂದುವರಿದ ಭಾಗವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವುದಿಲ್ಲ. ಬದಲಾಗಿ ಮತ್ತೊಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಮುಂದುವರಿದ ಭಾಗದ ಡಿಜಿಟಲ್ ಹಕ್ಕುಗಳು 150 ಕೋಟಿ ರೂ.ಗಳಿಗೆ ಮಾರಾಟವಾಗಿವೆ. ಇದನ್ನು, ಇದುವರೆಗಿನ ಅತಿದೊಡ್ಡ ಒಪ್ಪಂದವೆಂದು ಪರಿಗಣಿಸಲಾಗುತ್ತಿದೆ.

‘ಧುರಂಧರ್ 2’ ಚಿತ್ರದ ಒಟಿಟಿ ಬಿಡುಗಡೆಗೆ ಇನ್ನೂ ಅಧಿಕೃತ ದಿನಾಂಕವಿಲ್ಲ . ಆದರೆ ಇಂಡಸ್ಟ್ರಿ ಟ್ರೆಂಡ್ಸ್ ಮತ್ತು ಪಿಂಕ್ವಿಲ್ಲಾ, ಇಂಡಿಯಾ ಟುಡೇ ವರದಿಗಳ ಪ್ರಕಾರ, ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ 45 ರಿಂದ 60 ದಿನಗಳಲ್ಲಿ ಒಟಿಟಿನಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಇದರರ್ಥ ರಣವೀರ್ ಅವರ ಚಿತ್ರವು ಜೂನ್ ಎರಡನೇ ವಾರದ ವೇಳೆಗೆ ಪ್ರಸಾರ ಕಾಣಬಹುದು.

ಇದನ್ನೂ ಓದಿ: ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ

ಈ ಚಿತ್ರದ ಪೇಯ್ಡ್ ಪ್ರಿವ್ಯೂಗೂ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಹಲವು ನಗರಗಳ ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿದ್ದವು. ಪೇಯ್ಡ್ ಪ್ರಿವ್ಯೂ ನಿಂದಲೇ ‘ಧುರಂಧರ್ 2’ ಚಿತ್ರ 43 ಕೋಟಿ ರೂಪಾಯಿಗಳ ಬಂಪರ್ ಕಲೆಕ್ಷನ್ ಗಳಿಸಿದೆ. ಮೊದಲ ದಿನದ ಕಲೆಕ್ಷನ್ 100 ಕೋಟಿ ರೂಪಾಯಿಗಳನ್ನು ದಾಟಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ, ಸಾರಾ ಅರ್ಜುನ್ ನಟಿಸಿದ್ದಾರೆ.

‘ಧುರಂಧರ್ 2 ಸಿನಿಮಾ ಎಲ್ಲಾ ಕಡೆಗಳಿಂದ ಉತ್ತಮ ವಿಮರ್ಶೆ ಪಡೆದಿದೆ. ಈ ಚಿತ್ರ ಅನೇಕ ಕಡೆಗಳಲ್ಲಿ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರದ ಹೆಚ್ಚುಗಾರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ