AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುಐ’ ಅಂತರಾಷ್ಟ್ರೀಯ ಸ್ಪರ್ಷ, ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್

‘ಯುಐ’ ಸಿನಿಮಾಕ್ಕೆ ಅಂತರಾಷ್ಟ್ರೀಯ ಟಚ್ ಅನ್ನು ಕೊಡುತ್ತಿದ್ದಾರೆ ನಿರ್ದೇಶಕ ಉಪೇಂದ್ರ. ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಜೊತೆಗೆ ಹಂಗೆರಿಗೆ ತೆರಳಿರುವ ಉಪ್ಪಿ, ಅಲ್ಲಿ ಸಿನಿಮಾದ ಸಂಗೀತವನ್ನು ಲೈವ್ ರೆಕಾರ್ಡ್ ಮಾಡಿಸುತ್ತಿದ್ದಾರೆ.

‘ಯುಐ’ ಅಂತರಾಷ್ಟ್ರೀಯ ಸ್ಪರ್ಷ, ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್
ಮಂಜುನಾಥ ಸಿ.
|

Updated on: May 21, 2024 | 10:21 AM

Share

ಉಪೇಂದ್ರ (Upendra) ನಟನೆಯ ‘ಯುಐ’ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾದ ಹಾಡುಗಳ ಮೇಲೆ ಹೆಚ್ಚಿನ ಒತ್ತನ್ನು ಚಿತ್ರತಂಡ ನೀಡುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ‘ಟ್ರೋಲ್’ ಹಾಡು ಸೂಪರ್-ಡೂಪರ್ ಹಿಟ್ ಎನಿಸಿಕೊಂಡಿದೆ. ಹಾಗಾಗಿ ಹಾಡುಗಳನ್ನು ಇನ್ನಷ್ಟು ಜಾಗರೂಕತೆಯಿಂದ ರೆಕಾರ್ಡ್ ಮಾಡಿ ಗುಣಮಟ್ಟದ ಆಲ್ಬಂ ಒಂದನ್ನು ಕನ್ನಡಿಗರಿಗೆ ಕೊಡುವ ಪ್ರಯತ್ನದಲ್ಲಿ ಚಿತ್ರತಂಡವಿದೆ. ಇದೇ ಕಾರಣಕ್ಕೆ ನಿರ್ದೇಶಕ ಉಪೇಂದ್ರ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಯೂರೋಪಿಯಾ ದೇಶವಾದ ಹಂಗೆರಿಗೆ ಹೋಗಿದ್ದಾರೆ.

ಹಲವು ಜನಪ್ರಿಯ ಸಿನಿಮಾ ಸಂಗೀತ ನಿರ್ದೇಶಕರು ವಿದೇಶಗಳಲ್ಲಿ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡುತ್ತಾರೆ. ಅದರಲ್ಲಿಯೂ ಲಂಡನ್ ನಲ್ಲಿ ತಮ್ಮ ಸಿನಿಮಾಕ್ಕೆ ಸಂಗೀತ ಮಾಡಿಸುತ್ತಾರೆ. ಕನ್ನಡದಲ್ಲಿ ಹರಿಕೃಷ್ಣ ಸೇರಿದಂತೆ ಇನ್ನೂ ಕೆಲವು ಸಂಗೀತ ನಿರ್ದೇಶಕರುಗಳು ಲಂಡನ್​ನಲ್ಲಿಯೇ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡಿಸುತ್ತಾರೆ. ಆದರೆ ಅಜನೀಶ್ ಲೋಕನಾಥ್ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡಲು ಹಂಗೆರಿಯನ್ನು ಆರಿಸಿಕೊಂಡಿದ್ದಾರೆ. ಈ ಹಿಂದೆ ಅವರು ಹೇಳಿಕೊಂಡಿದ್ದಂತೆ, ಹಂಗೆರಿಯ ಸಂಗೀತಾಗರರು ಭಿನ್ನವಾದ ಸಂಗೀತಗಾರರು ಅವರಿಗೆ ಜನಪದ ಶೈಲಿಯ ಪರಿಚಯವಿದೆ. ಅಲ್ಲಿನ ವಾದ್ಯಗಳು ಸಹ ಭಿನ್ನವಾದುವು, ಅವು ‘ಯುಐ’ ಸಿನಿಮಾಕ್ಕೆ ಚೆನ್ನಾಗಿ ಸೂಟ್ ಆಗುತ್ತವೆಯಾದ್ದರಿಂದ ಹಂಗೆರಿಯಲ್ಲಿಯೇ ಮ್ಯೂಸಿಕ್ ರೆಕಾರ್ಡ್ ಮಾಡುತ್ತಿದ್ದಾರೆ ಅಜನೀಶ್.

ಇದನ್ನೂ ಓದಿ:‘ಎ’ ಸಿನಿಮಾ ಟೈಟಲ್ ನೋಡಿ ಅಡಲ್ಟ್ ಓನ್ಲಿ ಆಗಿಬಿಡುತ್ತದೆ ಎಂದಿದ್ದ ಉಪೇಂದ್ರ ಆಪ್ತರು

ಅಜನೀಶ್ ಲೋಕನಾಥ್ ಜೊತೆಗೆ ಸಿನಿಮಾದ ನಿರ್ದೇಶಕ ಉಪೇಂದ್ರ ಸಹ ಹಂಗೆರಿಗೆ ತೆರಳಿದ್ದಾರೆ. ತಮ್ಮ ಸಿನಿಮಾದ ಹಾಡುಗಳಿಗೆ ಉಪೇಂದ್ರ ಅವರೇ ಸಾಹಿತ್ಯವನ್ನು ಬರೆಯುತ್ತಾರೆ. ಹಾಗಾಗಿ ಸಂಗೀತ ನಿರ್ದೇಶಕರ ಜೊತೆಗೆ ಉಪ್ಪಿ ಸಹ ಹಂಗೆರಿಗೆ ತೆರಳಿದ್ದಾರೆ. ಅಲ್ಲದೆ ಅಲ್ಲಿ ಸಿನಿಮಾದ ಇನ್ನಿತರೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಸಹ ಮಾಡಿಸುವ ಸಾಧ್ಯತೆಯೂ ಇದೆ. ಹಂಗೆರಿಯಲ್ಲಿ ಉಪೇಂದ್ರ ಓಡಾಡುತ್ತಿರುವ ವಿಡಿಯೋ ಒಂದನ್ನು ಇದೀಗ ಬಿಡುಗಡೆ ಮಾಡಲಾಗಿದೆ. ‘ಎ’ ಸಂಗೀತದೊಂದಿಗೆ ಆರಂಭವಾಗುವ ವಿಡಿಯೋನಲ್ಲಿ ಉಪ್ಪಿ ಹಾಗೂ ಅಜನೀಶ್ ಲೋಕನಾಥ್ ಹಂಗೆರಿಯ ನಗರವೊಂದರಲ್ಲಿ ನಿಂತು ಚರ್ಚೆ ಮಾಡುತ್ತಿರುವ ದೃಶ್ಯಗಳಿವೆ, ಜೊತೆಗೆ ‘ಮೇಕಿಂಗ್ ಐಟ್ ಫಾರ್ ಯು ಇಂಟರ್ನ್ಯಾಷನಲಿ’ ಎಂದು ಬರೆಯಲಾಗಿದೆ.

‘ಯುಐ’ ಸಿನಿಮಾವನ್ನು ಉಪೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. 2015 ರಲ್ಲಿ ಬಿಡುಗಡೆ ಆಗಿದ್ದ ‘ಸೂಪರ್’ ಸಿನಿಮಾದ ಬಳಿಕ ಉಪೇಂದ್ರ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು. ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ ಉಪೇಂದ್ರ. ‘ಯುಐ’ ಹೊರತಾಗಿ ‘ಬುದ್ಧಿವಂತ 2’, ‘ಕಬ್ಜ 2’, ‘ತ್ರಿಶೂಲಂ’ ಸಿನಿಮಾಗಳಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಜೊತೆಗೆ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಉಪ್ಪಿ, ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಜೊತೆಗೆ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್