AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎ’ ಸಿನಿಮಾ ಟೈಟಲ್ ನೋಡಿ ಅಡಲ್ಟ್ ಓನ್ಲಿ ಆಗಿಬಿಡುತ್ತದೆ ಎಂದಿದ್ದ ಉಪೇಂದ್ರ ಆಪ್ತರು

‘ಎ’ ಸಿನಿಮಾ ರಿಲೀಸ್ ಆಗಿದ್ದು 1988ರಲ್ಲಿ. ಈ ಚಿತ್ರ ಅಂದಿನಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಹೀಗೆಯೇ ಸಿನಿಮಾ ಮಾಡಬೇಕು ಎಂಬ ಸಂಪ್ರದಾಯಕ್ಕೆ ಬ್ರೇಕ್ ಕೊಟ್ಟಿದ್ದು ಈ ಚಿತ್ರ. ಈ ಸಿನಿಮಾ ಬೇರೆಯದೇ ರೀತಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದ್ದು ಹೇಗೆ ಎನ್ನುವ ಬಗ್ಗೆ ಉಪೇಂದ್ರ ಅವರು ಮಾತನಾಡಿದ್ದಾರೆ.

‘ಎ’ ಸಿನಿಮಾ ಟೈಟಲ್ ನೋಡಿ ಅಡಲ್ಟ್ ಓನ್ಲಿ ಆಗಿಬಿಡುತ್ತದೆ ಎಂದಿದ್ದ ಉಪೇಂದ್ರ ಆಪ್ತರು
ಉಪೇಂದ್ರ
ರಾಜೇಶ್ ದುಗ್ಗುಮನೆ
|

Updated on: May 17, 2024 | 12:57 PM

Share

‘ಎ’ ಸಿನಿಮಾ (A Movie) ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ರಿಲೀಸ್ ಆಗಿದ್ದು 1998ರಲ್ಲಿ. ಈ ಚಿತ್ರವನ್ನು ಈಗ ರೀ ರಿಲೀಸ್ ಮಾಡಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಸಿನಿಮಾಗಳ ಅಬ್ಬರ ಇಲ್ಲ. ಹೀಗಾಗಿ, ಇಂದು (ಮೇ 17) ಚಿತ್ರ ಮರು ಬಿಡುಗಡೆ ಆಗಿದೆ. ಈ ಸಿನಿಮಾದ ಟೈಟಲ್ ಬಗ್ಗೆ ಉಪೇಂದ್ರ ಅವರು ಇತ್ತೀಚೆಗೆ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದರು. ಈ ವೇಳೆ ಅವರು ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದರು. ‘ಎ’ ಟೈಟಲ್ ಫೈನಲ್ ಆಗಿದ್ದು ಹೇಗೆ ಎಂಬುದನ್ನು ಕೂಡ ಉಪೇಂದ್ರ ವಿವರಿಸಿದ್ದರು.

‘ಎ’ ಸಿನಿಮಾ ರಿಲೀಸ್ ಆಗಿದ್ದು 1988ರಲ್ಲಿ. ಈ ಚಿತ್ರ ಅಂದಿನಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಹೀಗೆಯೇ ಸಿನಿಮಾ ಮಾಡಬೇಕು ಎಂಬ ಸಂಪ್ರದಾಯಕ್ಕೆ ಬ್ರೇಕ್ ಕೊಟ್ಟಿದ್ದು ಈ ಚಿತ್ರ. ಈ ಸಿನಿಮಾ ಬೇರೆಯದೇ ರೀತಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದ್ದು ಹೇಗೆ ಎನ್ನುವ ಬಗ್ಗೆ ಉಪೇಂದ್ರ ಅವರು ಮಾತನಾಡಿದ್ದಾರೆ.

‘ಸಿನಿಮಾ ಬಗ್ಗೆ ಚೆನ್ನೈನಲ್ಲಿ ಡಿಸ್ಕಶನ್ ಮಾಡ್ತಾ ಇದ್ದೆ. ಥಟ್ ಅಂತ ಹೊಳೆದಿದ್ದು A ಅನ್ನೋ ಟೈಟಲ್. ಏನೋ ಆಲೋಚನೆ ಮಾಡಿ ಇದನ್ನು ನಿರ್ಧರಿಸಿದ್ದಲ್ಲ. ಎ ಟೈಟಲ್ ಇಟ್ರೆ ಯಾರು ಬರ್ತಾರೆ ಎಂದು ಆಪ್ತರು ಕೇಳಿದರು. ಸೆನ್ಸಾರ್ ಮಂಡಳಿಯವರ ಬಳಿ ಎಲ್ಲರೂ ಯು, ಯುಎ ಕೊಡಿ ಎಂದು ಕೇಳ್ತಾರೆ. ಆದರೆ, ನೀನು ಟೈಟಲ್​ಗೆ ಎ ಅಂತ ಇಡ್ತಿದೀಯಲ್ಲ. ಅಡಲ್ಟ್ಸ್ ಓನ್ಲಿ ಅಂತ ಆಗಿ ಬಿಡುತ್ತದೆ ಎಂದು ಗೆಳೆಯರು ಹೇಳಿದ್ದರು’ ಎಂಬುದಾಗಿ ಉಪೇಂದ್ರ ಹೇಳಿದ್ದಾರೆ. ‘ನಾವು ರಾತ್ರಿ ಯೋಚನೆ ಮಾಡಿದ್ವಿ. ಡಿಸ್ಕಸ್ ಮಾಡಿದ್ವಿ. ರಾತ್ರಿಯಿಡೀ ಚರ್ಚೆ ಆಯಿತು. ಒಂದಷ್ಟು ಜನ ಪ್ಲಸ್ ಆಗುತ್ತದೆ ಎಂದರೆ, ಇನ್ನೂ ಕೆಲವರು ಟೈಟಲ್ ವಿರೋಧಿಸಿದರು. ಕೊನೆಗೂ ಇತ್ಯರ್ಥ ಆಗಿಲ್ಲ. ಹೀಗಾಗಿ,  ಎ ಟೈಟಲ್​ನೇ ಫೈನಲ್ ಮಾಡಿದೆ’ ಎಂದು ಮಾಹಿತಿ ನೀಡಿದ್ದರು ಅವರು.

ಇದನ್ನೂ ಓದಿ: ‘ಚಿತ್ರಮಂದಿರಕ್ಕೆ ಬರಲ್ಲ ಅಂತ ಜನರನ್ನು ದೂಷಿಸಬಾರದು’: ಉಪೇಂದ್ರ

‘ನಿರ್ಮಾಪಕರೊಬ್ಬರು ಬಂದು ಆಫರ್ ಕೊಟ್ಟರು. ನಾನೇ ಹೀರೋ ಆಗಬೇಕು ಎಂದರು. ಡಿಸ್ಕಶನ್ ಮಾಡೋಣ ಎಂದು ಕಾರಲ್ಲಿ ಹೊರಟ್ವಿ. ಗೊತ್ತಾಗದೆ ಕಾರನ್ನು ಟ್ರಕ್ ಅಡಿಗೆ ನುಗ್ಗಿಸಿಬಿಟ್ಟೆ. ಕಾರಿಗೆ ಸ್ವಲ್ಪ ಡ್ಯಾಮೇಜ್ ಆಯಿತು. ಆ ಬಳಿಕ ಅಪಶಕುನ ಎಂದೆಲ್ಲ ಮಾತನಾಡಿಕೊಂಡು ಬರ್ತಿದ್ವಿ. ಕಾರನ್ನು ತಿರುವಿನಲ್ಲಿ ತಿರುಗಿಸಿಕೊಂಡು ಹೋಗುವಾಗ ಅರ್ಚಕರೊಬ್ಬರ ಕಾರಿಗೆ ಬೈಕ್ ಡಿಕ್ಕಿ ಆಯಿತು. ಅವರು ಕಾರಿನ ಮೇಲೆ ಬಂದು ಬಿದ್ದರು. ಒಂದರ ಮೇಲೆ ಒಂದರಂತೆ ತೊಂದರೆ ಆಗ್ತಿದೆ, ಇದನ್ನು ಮಾಡಬೇಕಾ ಎಂದು ನಿರ್ಮಾಪಕರು ಕೇಳಿದರು. ಸಿನಿಮಾ ಮಾಡ್ಲೇ ಬೇಕು ಎಂದೆ. ಆ ಬಳಿಕ ಯಶಸ್ಸು ಸಿಕ್ಕಿತು’ ಎಂದು ಹಳೆಯ ಘಟನೆ ನೆನದರು ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.